CPM, Congress

'Development ಝೀರೋ, Publicity ಹೀರೋ': ಮೂರು ವರ್ಷಗಳಲ್ಲಿ ಜಾಹೀರಾತಿಗೆ 473 ಕೋಟಿ ರೂ ಖರ್ಚು; ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೇವಲ ಮೂರು ವರ್ಷಗಳಲ್ಲಿ ಜಾಹೀರಾತುಗಳಿಗಾಗಿ ಬರೋಬ್ಬರಿ 473 ಕೋಟಿ ರೂ. ಖರ್ಚು ಮಾಡಿದೆ ಎನ್ನಲಾಗಿದೆ. ಅಂದರೆ ಪ್ರತಿದಿನ 43 ಲಕ್ಷ ರೂ.ಗೂ ಹೆಚ್ಚು ಹಣವನ್ನು ರಸ್ತೆ ನಿರ್ಮಾಣ, ಉದ್ಯೋಗ ಸೃಷ್ಟಿ ಅಥವಾ ರೈತರ ನೆರವಿಗೆ ಬಳಸದೆ, ತನ್ನದೇ ವರ್ಚಸ್ಸು ಹೆಚ್ಚಿಸಿಕೊಳ್ಳಲು ವ್ಯಯಿಸಿದೆ.

ಕಾಂಗ್ರೆಸ್ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ಕಿಡಿ..!
ಕೇರಳದ ರಾಜಕೀಯ ಸಮಾವೇಶವೊಂದರಲ್ಲಿ ಮಾತನಾಡಿದ್ದ ಖರ್ಗೆ, ಗೌರಿ ಲಂಕೇಶ್ ಮತ್ತು ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣಗಳ ಆರೋಪಿಗಳನ್ನು ಆರು ತಿಂಗಳೊಳಗೆ ಜೈಲಿಗೆ ಕಳುಹಿಸುವುದಾಗಿ ಭರವಸೆ ನೀಡಿದ್ದರು.

ಸಿದ್ದರಾಮಯ್ಯ, ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ.ಕೆ ಶಿವಕುಮಾರ್!
ಸಿದ್ದರಾಮಯ್ಯ ನಮ್ಮ ನಾಯಕರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಅವರ ಬಳಿ ಅನೇಕ ವಿಚಾರಗಳನ್ನು ಚರ್ಚೆ ಮಾಡಬೇಕಾದ್ದರಿಂದ ಅವರನ್ನು ಭೇಟಿ ಮಾಡಿ ಹಬ್ಬದ ಶುಭಾಶಯ ಕೋರಿದ್ದೇನೆ ಎಂದು ಸಿಎಂ ಹೇಳಿದರು.

ಅಮಿತಾಬ್ ಬಚ್ಚನ್ ಗೆ ಬುಲೆಟ್‌ಪ್ರೂಫ್ ಗ್ಲಾಸ್: ಮೋದಿ-ಫಡ್ನವೀಸ್ ಡಬಲ್ ಎಂಜಿನ್ ಸರ್ಕಾರಗಳ ವೈಫಲ್ಯದ ಪ್ರತಿಬಿಂಬ- ಕಾಂಗ್ರೆಸ್
ಬುಲೆಟ್‌ಪ್ರೂಫ್ ಗಾಜನ್ನು ತೆಗೆದುಹಾಕಿರಬಹುದು, ಆದರೆ ಬಾಲಿವುಡ್ ನಟರು, ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರ ಮನಸ್ಸಿನಲ್ಲಿರುವ ಭಯ ಯಾವಾಗ ದೂರವಾಗುತ್ತದೆ?" ಎಂದು ಅವರು ಕೇಳಿದರು.

ರಾಜ್ಯದಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್: ಕಾಂಗ್ರೆಸ್-BJP ನಡುವೆ ವಾಕ್ಸಮರ..!
ಶನಿವಾರ ತಡರಾತ್ರಿ ಬೆಂಗಳೂರಿನ ಜೆಡಿಎಸ್ ಮತ್ತು ಬಿಜೆಪಿ ಕಚೇರಿಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಂಟಿಸಿದ್ದಾರೆ.

ಟಿವಿಯಲ್ಲಿ ಬಾಬರಿ ಮಸೀದಿ ಧ್ವಂಸ ದೃಶ್ಯ ನೋಡಿ ಕಣ್ಣೀರಿಟಿದ್ದೆ ಎಂದ ಸೋನಿಯಾ ಗಾಂಧಿ: ಬಿಜೆಪಿ ಟೀಕೆ
1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸವನ್ನು ದೂರದರ್ಶನದಲ್ಲಿ ವೀಕ್ಷಿಸಿದ ನಂತರ ತಾವು ಕಣ್ಣೀರು ಹಾಕಿದ್ದಾಗಿ ಸೋನಿಯಾ ಗಾಂಧಿ ಸಂದರ್ಶನವೊಂದರಲ್ಲಿ ಹೇಳಿದ್ದು ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

'ನೋಟು ನಿಷೇಧ' ಆರ್ಥಿಕತೆ ನಾಶಪಡಿಸಿದ್ರೆ, 'ವೋಟು ನಿಷೇಧ' ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ: ಕಾಂಗ್ರೆಸ್
ನೋಟು ರದ್ದತಿಯಾಗಿ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡಿದೆ. ಈ ಕ್ರಮವು ದೇಶದ ಆರ್ಥಿಕತೆಯನ್ನು ನಾಶಪಡಿಸಿದೆ, ಈಗ 'ವೋಟು ನಿಷೇಧ' ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ.

ಬರೀ ಗಡ್ಡ ಬೆಳೆಸಿದರೆ ಸಾಲದು, ನರಿ ಎಂದೂ ಹುಲಿ ಆಗದು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಕೇವಲ ಗಡ್ಡ ಬೆಳೆಸುವುದರಿಂದ ರೇವಂತ್ ರೆಡ್ಡಿ ಆಗುವುದಿಲ್ಲ ಎಂದು ಹೇಳಿದರು. ಯಾವುದೇ ದೃಢವಾದ ಆಧಾರವಿಲ್ಲದ ರಾಜಕೀಯ ಭಂಗಿಯು ಹುಲಿ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ನರಿಯಂತೆ...

ಚುನಾವಣೆ ನಂತರ ಕಾಂಗ್ರೆಸ್ ದೇಣಿಗೆಯಲ್ಲಿ ಶೇ.75ರಷ್ಟು ಇಳಿಕೆ! ಕಾಂಗ್ರೆಸ್ ಫಂಡಿಂಗ್ ಕುಸಿದಿದ್ಯಾಕೆ?
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷಕ್ಕೆ ಬರುವ ಪ್ರಮುಖ ದೇಣಿಗೆಯಲ್ಲಿ ಶೇಕಡಾ 75 ರಷ್ಟು ಭಾರಿ ಕುಸಿತ ಕಂಡುಬಂದಿದ್ದು, ಕಳೆದ ಮೂರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆ ಕುರಿತ ವರದಿ ಇಲ್ಲಿದೆ:

