High Court

CET ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
2025ರ ಏಪ್ರಿಲ್ 17ರಿಂದ 19ರವರೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಪವಿತ್ರ ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು.

ಬಸನಗೌಡ ಪಾಟೀಲ್ ಯತ್ನಾಳ್ಗೆ ಹಿನ್ನಡೆ: ಮಾನನಷ್ಟ ಮೊಕದ್ದಮೆ ವಿಚಾರಣೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ!
ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕ್ರಿಯೆಯನ್ನು ರದ್ದು ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಬರೀ 30 ವರ್ಷಕ್ಕೆ 9 ಮದುವೆ! 7ನೇ ಗಂಡ ಹೊಸಪೇಟೆ ರಾಜಕಾರಣಿ ವಿರುದ್ಧ ಕ್ರಿಮಿನಲ್ ಕೇಸ್: ಕೌಟುಂಬಿಕ ಕ್ರೌರ್ಯ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು
ಬರೋಬ್ಬರಿ 9 ಮದುವೆಗಳಾಗಿವೆ ಎನ್ನಲಾದ 30 ವರ್ಷದ ಮಹಿಳೆಯೊಬ್ಬರು, ತಮ್ಮ 7ನೇ ಪತಿ ಹಾಗೂ ಹೊಸಪೇಟೆಯ ರಾಜಕಾರಣಿ ಹುಸೇನ್ ವಿರುದ್ಧ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಸ್ವರ್ಗವೇನು ಧರೆಗಿಳಿದು ಬರುತ್ತಿರಲಿಲ್ಲ: ನೋಟಿಸ್ ನೀಡದೆ 300 ದಾಳಿಂಬೆ ಮರ ಕಡಿದ ತಹಶೀಲ್ದಾರ್‌ಗೆ ಹೈಕೋರ್ಟ್ ತರಾಟೆ
ಅಕ್ರಮ ಸಾಗುವಳಿ ಆರೋಪದ ಹೆಸರಿನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಜಮೀನಿನಲ್ಲಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಏಕಾಏಕಿ ಕಡಿದುಹಾಕಿದ ಕೋಲಾರ ತಹಶೀಲ್ದಾರ್ ಕ್ರಮಕ್ಕೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ, ಆ ಕುರಿತ ವರದಿ ಇಲ್ಲಿದೆ:

ಯೋಜನೆ ಉಚಿತ, ಬೆಲೆ ಏರಿಕೆ ಖಚಿತ: ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ ಹೈಕೋರ್ಟ್ ಅಸಮಾಧಾನ!
ಸರ್ಕಾರದ ಉಚಿತ ಯೋಜನೆಗಳು ಮತ್ತು ರಾಜ್ಯದಲ್ಲಿ ದಿನೇ ದಿನೇ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, "ಯೋಜನೆ ಉಚಿತ... ಬೆಲೆ ಏರಿಕೆ ಖಚಿತ" ಎಂದು ಸರ್ಕಾರದ ವಿರುದ್ಧ ವ್ಯಂಗ್ಯಭರಿತವಾಗಿ ಚಾಟಿ ಬೀಸಿದೆ. ಆ ಕುರಿತ ವರದಿ ಇಲ್ಲಿದೆ:

ವಕೀಲರ ಸರಣಿ ಹತ್ಯೆ ಕೃತ್ಯಕ್ಕೆ ತೀವ್ರ ಆಕ್ರೋಶ: ಹೈಕೋರ್ಟ್ ಮುಂಭಾಗ ಸಾವಿರಾರು ವಕೀಲರಿಂದ ಪ್ರತಿಭಟನೆ
ಪ್ರತಿಭಟನಾಕಾರರು ಫಲಕಗಳನ್ನು ಪ್ರದರ್ಶಿಸಿ, ವಿಧಾನಸೌಧದ ಎದುರು ಕರಪತ್ರಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಆ ಮಾರ್ಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸೋತ ಅಭ್ಯರ್ಥಿಗಳಿಗೆ ಸಾರ್ವಜನಿಕ ಹುದ್ದೆ 'ಸಾಂತ್ವನ ಬಹುಮಾನ'ವಲ್ಲ; ಸರ್ಕಾರದ ಹಿಂಬಾಗಿಲ ನೇಮಕಕ್ಕೆ ಹೈಕೋರ್ಟ್ ತಡೆ..!
ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದವರನ್ನು ಮತ್ತೆ ಅದೇ ಕ್ಷೇತ್ರದ ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ಕೂರಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು.

ಜೀವನಾಂಶ ಸ್ವಯಂಚಾಲಿತ ಹಕ್ಕಲ್ಲ; ಪತ್ನಿ ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ ಪತಿ ಜೀವನಾಂಶ ನೀಡಬೇಕಾದ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಪತ್ನಿ ಉತ್ತಮ ಶಿಕ್ಷಣ ಪಡೆದಿದ್ದು, ಉದ್ಯೋಗದಲ್ಲಿದ್ದು, ತನ್ನ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಗಳಿಸುತ್ತಿದ್ದರೆ ಆಕೆಯನ್ನು ಪತಿಯ ಮೇಲೆ ಅವಲಂಬಿತಳು ಎಂದು ಪರಿಗಣಿಸಲಾಗದು.

KPSC ನೇಮಕಾತಿ ಹಗರಣ: SIT ಮುಖ್ಯಸ್ಥರಾಗಿ ADGP ಆರ್. ಹಿತೇಂದ್ರ ನೇಮಕ..!
ಸೆಪ್ಟೆಂಬರ್ 21ರಂದು ನ್ಯಾಯಾಲಯ ನೇಮಿಸಿದ್ದ ಉಳಿದ ಮೂವರು ಐಪಿಎಸ್ ಅಧಿಕಾರಿಗಳಾದ ಅನುಪ್ ಎ. ಶೆಟ್ಟಿ, ಕುಶಾಲ್ ಚೌಕ್ಸೆ ಮತ್ತು ಕ್ಷಮಾ ಮಿಶ್ರಾ ಅವರ ನೇಮಕಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

