ISRO

ನವೆಂಬರ್ ನಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಾಕೆಟ್ ಉಡಾವಣೆಗೆ ಇಸ್ರೋ ಯೋಜನೆ
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತಯಾರಿಸಿರುವ ಹೊಸ ರಾಕೆಟ್ ನ್ನು ನವೆಂಬರ್ 2020 ರ ವೇಳೆಗೆ ಉಡಾವಣೆ ಮಾಡಲು ಯೋಜನೆ ರೂಪಿಸಿದೆ.

ಶುಕ್ರನತ್ತ ಕಣ್ಣಿಟ್ಟ ಇಸ್ರೋ! 2025ಕ್ಕೆ ಫ್ರಾನ್ಸ್ ಸಹಯೋಗದಲ್ಲಿ 'ವೀನಸ್ ಮಿಷನ್' ಪ್ರಾರಂಭ
ಇಸ್ರೋ ತನ್ನ ಶುಕ್ರನ ಯೋಜನೆ(ವೀನಸ್ ಮಿಷನ್) 2025 ರಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ. ಭಾರತದ ಈ ಯೋಜನೆಯಲ್ಲಿ ಫ್ರಾನ್ಸ್ ಸಹಭಾಗಿತ್ವ ಇರಲಿದೆಎಂದು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್ ತಿಳಿಸಿದೆ.

ಕೋವಿಡ್-19 ಕಾರಣ "ಯುವ ವಿಜ್ಞಾನಿಗಳು" ಕಾರ್ಯಕ್ರಮ ರದ್ದುಗೊಳಿಸಿದ ಇಸ್ರೋ
ಕೋವಿಡ್-19 ಕಾರಣದಿಂದಾಗಿ ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಯುವ ವಿಜ್ಞಾನಿಗಳು (ಯುವಿಕ-2020) ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ: ಸಂಶೋಧಕರು
ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ ಎಂದು ಸಂಶೋದಕರು ಅಭಿಪ್ರಾಯಪಟ್ಟಿದ್ದಾರೆ.

ಚಂದ್ರನ ಕಕ್ಷೆಯಲ್ಲಿ ಒಂದು ವರ್ಷ ಪೂರೈಸಿದ ಚಂದ್ರಯಾನ -2
ಭಾರತದ ಚಂದ್ರಯಾನ-2 ಇಂದು ಚಂದ್ರನ ಸುತ್ತ ಒಂದು ವರ್ಷವನ್ನು ಪೂರೈಸಿದೆ. ಎಲ್ಲಾ ಉಪಕರಣಗಳುಪ್ರಸ್ತುತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ.

ಚಂದ್ರನ ಮೇಲೆ ಬಳಕೆ ಮಾಡಬಲ್ಲ ಇಟ್ಟಿಗೆ ತಯಾರಿಸಿದ ಬೆಂಗಳೂರು ವಿಜ್ಞಾನಿಗಳ ತಂಡ!
ಇಸ್ರೋ ಮತ್ತು ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಚಂದ್ರನ ಮೇಲೆ ಬಳಕೆ ಮಾಡಬಲ್ಲ ವಿಶೇಷ ಇಟ್ಟಿಗೆ ತಯಾರಿಸಿ ಮಹತ್ವದ ಸಾಧನೆ ಮಾಡಿದೆ.

ಕೋವಿಡ್-19 ಹೊಸ ಕೇಸ್ ಪತ್ತೆ: ಶ್ರೀಹರಿಕೋಟಾ ಲಾಕ್ ಡೌನ್
ಹೊಸದಾಗಿ ಕೋವಿಡ್-19 ಕೇಸ್ ಪತ್ತೆಯಾಗಿರುವುದರಿಂದ ಅತ್ಯವಶ್ಯಕ, ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿದಂತೆಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಒಳಗಡೆ ಇರುವ ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ.

ಮಂಗಳನ ನಿಗೂಢ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ 1 ರಂದು 4,200 ಕಿ.ಮೀ ದೂರದಿಂದ ಮಂಗಳನ ನಿಗೂಢ ಚಂದ್ರ- ಫೋಬೊಸ್‌ನ ಚಿತ್ರವನ್ನು ಸೆರೆಹಿಡಿದಿದೆ. ಆನ್‌ಬೋರ್ಡ್ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಬಳಸಿ ಈ ಚಂಂದ್ರನ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

ಭಾರತದಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ: ಇಸ್ರೋ ಅಧ್ಯಕ್ಷ ಕೆ.ಶಿವನ್
ಪ್ರಪಂಚದ ಇತರೆ ದೇಶಗಳಂತೆ ಭಾರತದಲ್ಲಿಯೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶದ ಬಾಗಿಲು ತೆರೆಯಲಾಗಿದ್ದು, ರಾಕೆಟ್ ಮತ್ತು ಉಪಗ್ರಹ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.

