JDS

'ರಾಜಣ್ಣ ಬಗ್ಗೆ ಮಾತನಾಡಿದ್ರೆ ಬಾಲಕೃಷ್ಣಗೆ ಬಹುಮಾನ ಸಿಗಬಹುದು'; ನಾನಾಗಲಿ, ತಂದೆಯವರಾಗಲಿ JDS ಸೇರುತ್ತೇವೆಂದು ಹೇಳಿಲ್ಲ: MLC ರಾಜೇಂದ್ರ
ರಾಜಣ್ಣ ಅವರು ನೇರವಾಗಿ ಮಾತನಾಡುತ್ತಾರೆಂದೇ ಮಂತ್ರಿಗಿರಿಯಿಂದ ತೆಗೆದು ಹಾಕಿದ್ದು. ರಾಜಣ್ಣ ಅವರು ಇರೋದು ಅದೇ ಥರ, ಅದರಲ್ಲೇನು ತಪ್ಪಿಲ್ಲ. ಅದನ್ನ ಬದಲಾವಣೆ ಮಾಡಿಕೊಳ್ಳಿ ಎಂದು ಹೇಳಲು ಆಗಲ್ಲ ಎಂದರು.

ಸಿದ್ದಾರ್ಥ ವಿಹಾರ್ ಟ್ರಸ್ಟ್ ವಿರುದ್ಧದ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಲು ಸಿದ್ಧ: BJP-JDSಗೆ ಪ್ರಿಯಾಂಕ್ ಖರ್ಗೆ ಸವಾಲು..!
ಅವರನ್ನು ಎದುರಿಸಲು ನಾನೊಬ್ಬನೇ ಸಾಕು. ನಾನು ನನ್ನ ದಾಖಲೆಗಳನ್ನು ತರುತ್ತೇನೆ, ಅವರು ತಮ್ಮ ದಾಖಲೆಗಳನ್ನು ತರಲಿ. ಸಿದ್ದಾರ್ಥ ವಿಹಾರ ಟ್ರಸ್ಟ್ ಆಗಿರಲಿ, ವೈಯಕ್ತಿಕ ಖಾತೆಗಳಾಗಿರಲಿ ಅಥವಾ ಬ್ಯಾಂಕ್ ವಿವರಗಳಾಗಿರಲಿ, ಎಲ್ಲವನ್ನೂ ಬಹಿರಂಗಪಡಿಸಲು ಸಿದ್ಧನಿದ್ದೇನೆ.

AC ಕೊಠಡಿಯಲ್ಲಿ ಕೂರುವ ಇಟಲಿ ಕಾಂಗ್ರೆಸ್ ಗುಲಾಮರಿಗೆ ಹಳ್ಳಿಯ ಮಣ್ಣಿನ ಬೆವರಿನ ಬೆಲೆ ಏನ್ಗೊತ್ತು? ಬಣ್ಣ ಬದಲಿಸುವ 'ಕಾರ್ಪೋರೇಟ್ ಓತಿಕ್ಯಾತ': JDS
ಹಳ್ಳಿ ಜನರ ಬವಣೆಗಳ ಬಗ್ಗೆ ನಿಮ್ಮಂತಹ 'ಟ್ವಿಟ್ಟರ್ ರಾಜಕಾರಣಿ’ಗಳಿಗೆ ವಿವರಿಸುವುದು ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ ಅಪ್ಪನ ಹೆಸರಿನಲ್ಲಿ ಬೆಳೆದು, ದೆಹಲಿ ನಾಯಕರ ಕೃಪೆಯಿಂದ ಅಧಿಕಾರ ಪಡೆದು ಎಸಿ ಕೊಠಡಿಯಲ್ಲಿ ಕೂರುವ ಇಟಲಿ ಕಾಂಗ್ರೆಸ್‌ನ ಗುಲಾಮರಿಗೆ ಹಳ್ಳಿಯ ಮಣ್ಣಿನ ಬೆವರಿನ ಬೆಲೆ ಏನ್ಗೊತ್ತು?
ಅವರೇನು ಪೊಲೀಸ್ ಆಯುಕ್ತರೋ ಅಥವಾ ಮುಖ್ಯ ಗುಮಾಸ್ತರೋ?: ಸೀಮಂತ್ ಕುಮಾರ್ ಸಿಂಗ್ ವಿರುದ್ಧ HDK ವಾಗ್ದಾಳಿ
ಅವರು ಪೊಲೀಸ್ ಆಯುಕ್ತರೋ ಅಥವಾ ಮುಖ್ಯ ಗುಮಾಸ್ತರೋ? ಮುಖ್ಯ ಗುಮಾಸ್ತರಿಗಿಂತಲೂ ಕೀಳು ಮಟ್ಟದಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಯಾರ ಪ್ರಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ.

ನನ್ನನ್ನು ನಿರುದ್ಯೋಗಿ ಸಚಿವ ಎನ್ನುತ್ತೀರಾ? ನಿಮ್ಮ ಇಲಾಖೆಯ ಸಾಧನೆ ಮೊದಲು ಹೇಳಿ: ಪ್ರಿಯಾಂಕ್‌ಗೆ HDK ತಿರುಗೇಟು
ಹೇಳಿಕೆ ನೀಡುವ ಮೊದಲು ನನ್ನ ಸಚಿವಾಲಯಗಳ ಕಾರ್ಯವೈಖರಿ ಬಗ್ಗೆ ಖರ್ಗೆ ಮಾಹಿತಿ ಪಡೆದುಕೊಳ್ಳಬೇಕು. ನಾನು ಭಾರೀ ಕೈಗಾರಿಕೆ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಬಿಎಚ್‌ಇಎಲ್ ಸುಮಾರು 200 ಕೋಟಿ ರೂ. ಲಾಭ ಗಳಿಸುತ್ತಿತ್ತು.

'ಆಗ ಸಿದ್ದರಾಮಯ್ಯ ಬಗ್ಗೆ ಕಾಳಜಿ ವಹಿಸಿದ್ದರೆ, ಇಂದು RSS, BJP ಮುಂದೆ ಕೈಕಟ್ಟಿ ನಿಲ್ಲುವ ದುಸ್ಥಿತಿ ಬರುತ್ತಿರಲಿಲ್ಲ': HDK ವಿರುದ್ಧ ಬಾಲಕೃಷ್ಣ ಕಿಡಿ
ತಾವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಾಯಕತ್ವದ ಸ್ಥಾನವನ್ನು ಪಡೆದುಕೊಂಡಿದ್ದೀರಿ. ಅದಕ್ಕೆ ಗೌರವ ಬರುವಂತೆ ನಿಮ್ಮ ನಡವಳಿಕೆ ಇರಲಿ. ದಯವಿಟ್ಟು ಜನರು ದಡ್ಡರಲ್ಲ ಎಂಬುದನ್ನು ಅರಿತುಕೊಳ್ಳಿ ಎಂದರು.

MLC ಚುನಾವಣೆ ಫಲಿತಾಂಶ 2028 ಮೇ ತಿಂಗಳ ವಿಧಾನಸಭಾ ಚುನಾವಣೆಯ ಮುನ್ಸೂಚನೆಯೇ?
ವಿದ್ಯುನ್ಮಾನ ಮತಯಂತ್ರಗಳು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತಿತರ ವಿಷಯಗಳ ಕುರಿತು ದೀರ್ಘಕಾಲದಿಂದ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಈ ಪೋಸ್ಟ್ ಮಾಡಿದೆ. ಈ ಬಾರಿ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಗಮನಾರ್ಹವಾಗಿದೆ.

ಸ್ಟಿಂಗ್ ಆಪರೇಷನ್ ಚರ್ಚೆ ಮಧ್ಯೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭೇಟಿಯಾದ Congress MLC ರಾಜೇಂದ್ರ ರಾಜಣ್ಣ!
ಕರ್ನಾಟಕ ರಾಜಕೀಯದಲ್ಲಿ ‘ಸ್ಟಿಂಗ್ ಆಪರೇಷನ್’ ಭಾರೀ ಸದ್ದು ಮಾಡುತ್ತಿದ್ದು, ಈ ಮಧ್ಯೆ ಕಾಂಗ್ರೆಸ್ MLC ರಾಜೇಂದ್ರ ರಾಜಣ್ಣ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ ಗೆ ಮುಖಭಂಗ: ಬ್ಯಾಲೆಟ್ ಪೇಪರ್ ಮೂಲಕ ನಡೆದ MLC ಚುನಾವಣೆಯಲ್ಲಿ 4 ಸ್ಥಾನ NDA ತೆಕ್ಕೆಗೆ!
ವಿಧಾನ ಪರಿಷತ್ತಿನ 2 ಪದವೀಧರ, 2 ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು 4 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ NDA ನಾಲ್ಕು ಸ್ಥಾನಗಳ್ಲಲೂ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಶೂನ್ಯ ಸುತ್ತಿದೆ.

