Madhya Pradesh

ಮಧ್ಯಪ್ರದೇಶ ಬಿಕ್ಕಟ್ಟು: ಬಂಡಾಯ ಶಾಸಕರೊಂದಿಗೆ ಸಂಪರ್ಕ ಬಯಸಿ ಸುಪ್ರೀಂ ಮೊರೆ ಹೋದ ಕಾಂಗ್ರೆಸ್
ಬಂಡಾಯ ಶಾಸಕರೊಂದಿಗೆ ಸಂವಹನ ನಡೆಸಲು ಅವಕಾಶ ಮಾಡಿಕೊಡಲು ಕೇಂದ್ರಸರ್ಕಾರ ಹಾಗೂ ಬಿಜೆಪಿ ಆಡಳಿತದ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಧ್ಯ ಪ್ರದೇಶ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ವಿವರಣೆ ನೀಡುವಂತೆ ಕಮಲ್ ನಾಥ್ ಸರ್ಕಾರಕ್ಕೆ 'ಸುಪ್ರೀಂ' ಸೂಚನೆ, ವಿಚಾರಣೆ ಮುಂದೂಡಿಕೆ
ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ವಿಚಾರ ಸಂಬಂಧ ಬಿಜೆಪಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಮಲ್ ನಾಥ್ ಸರ್ಕಾರಕ್ಕೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಜ್ಯೋತಿರಾದಿತ್ಯ ಸಿಂಧಿಯಾ ನಮ್ಮ ನಾಯಕರು, ಅವರ ಜೊತೆಯೇ ಇರುತ್ತೇವೆ: ಬಂಡಾಯ ಕಾಂಗ್ರೆಸ್ ಶಾಸಕರು
ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ ಮಧ್ಯ ಪ್ರದೇಶದಲ್ಲಿ ರಾಜೀನಾಮೆ ನೀಡಿದ್ದ 22 ಕಾಂಗ್ರೆಸ್ ಶಾಸಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಿಂಧಿಯಾ ಅವರೇ ನಮ್ಮ ನಾಯಕರಾಗಿದ್ದು ಅವರ ಜೊತೆಯೇ ಯಾವಾಗಲೂ ಇರುತ್ತೇವೆ ಎಂದಿದ್ದಾರೆ.

ನಾಳೆಯೇ ಬಹುಮತ ಸಾಬೀತುಪಡಿಸಿ: ಕಮಲ್ ನಾಥ್ ಗೆ ರಾಜ್ಯಪಾಲರ ಶಾಕಿಂಗ್ ಡೆಡ್ ಲೈನ್!
ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಾಳೆಯೇ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಲಾಲ್ ಜಿ ಟಂಡನ್ ಅವರು ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಶಾಕಿಂಗ್ ಡೆಡ್ ಲೈನ್ ನೀಡಿದ್ದಾರೆ.

ಮಧ್ಯ ಪ್ರದೇಶ ಕಮಲ್ ನಾಥ್ ಸರ್ಕಾರ ಸದ್ಯಕ್ಕೆ ಸೇಫ್: ವಿಧಾನಸಭೆಯಲ್ಲಿ ಕೋಲಾಹಲ, ಕಲಾಪ ಮಾರ್ಚ್ 26ಕ್ಕೆ ಮುಂದೂಡಿಕೆ
ಬಿಜೆಪಿಗೆ ಸದ್ಯದ ಮಟ್ಟಿಗೆ ಹಿನ್ನಡೆಯಾಗುವ ರೀತಿಯಲ್ಲಿ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಎನ್ ಪಿ ಪ್ರಜಾಪತಿ ಸೋಮವಾರ ಕಮಲ್ ನಾಥ್ ಸರ್ಕಾರದ ಬಹುಮತ ಪರೀಕ್ಷೆ ನಡೆಸದೆ ಕಲಾಪವನ್ನು ಮಾರ್ಚ್ 26ಕ್ಕೆ ಮುಂದೂಡಿದರು.

ಮಧ್ಯಪ್ರದೇಶ: 48 ಗಂಟೆಯೊಳಗೆ ವಿಶ್ವಾಸ ಮತಯಾಚಿಸುವಂತೆ ಸೂಚಿಸಿ; 'ಸುಪ್ರೀಂ' ಮೆಟ್ಟಿಲೇರಿದ ಬಿಜೆಪಿ, ನಾಳೆ ವಿಚಾರಣೆ
ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು 48 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಬೇಕು ಎಂದು ಬಿಜೆಪಿ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಮಧ್ಯಪ್ರದೇಶ: ಸದನದ ಅಜೆಂಡಾದಲ್ಲಿ ವಿಶ್ವಾಸಮತ ಉಲ್ಲೇಖವಿಲ್ಲ, ರಾಜ್ಯಪಾಲರನ್ನು ಭೇಟಿಯಾದ ಪ್ರತಿಪಕ್ಷ ನಾಯಕ
ಸೋಮವಾರ ವಿಶ್ವಾಸಮತ ಯಾಚಿಸಲು ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜೀ ಟಂಡನ್ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ನಿರ್ದೇಶಿಸಿದ್ದಾರೆ. ಆದರೆ, ವಿಧಾನಸಭೆ ಸಚಿವಾಲಯ ಭಾನುವಾರ ರಾತ್ರಿ ಹೊರಡಿಸಿರುವ ವಿಧಾನಸಭೆ ಕಾರ್ಯಕಲಾಪ ಪಟ್ಟಿಯಲ್ಲಿ ವಿಶ್ವಾಸಮತ ಯಾಚನೆ ವಿಚಾರದ ಬಗ್ಗೆ ಉಲ್ಲೇಖವಿಲ್ಲ.

ಮಧ್ಯಪ್ರದೇಶಕ್ಕೆ ಮರಳಿದ 7 ಬಂಡಾಯ ಕಾಂಗ್ರೆಸ್ ಶಾಸಕರು?
ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿ ನಗರದಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಪಕ್ಷದ 7 ಬಂಡಾಯ ಶಾಸಕರು ಇದೀಗ ತಮ್ಮ ರಾಜ್ಯಕ್ಕೆ ಮರಳಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

'ಬಂಡಾಯ ಕಾಂಗ್ರೆಸ್ ಶಾಸಕರನ್ನು ಬಿಟ್ಟುಬಿಡಿ, ನಾಳೆ ಕಲಾಪದಲ್ಲಿ ಅವರು ಭಾಗವಹಿಸಲಿ':ಅಮಿತ್ ಶಾಗೆ ಪತ್ರ ಬರೆದ ಕಮಲ್ ನಾಥ್
ಬೆಂಗಳೂರಿನಲ್ಲಿ ಬಿಜೆಪಿ ವಶದಲ್ಲಿಟ್ಟುಕೊಂಡಿರುವ 22 ಮಂದಿ ಕಾಂಗ್ರೆಸ್ ಶಾಸಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಪತ್ರ ಬರೆದಿದ್ದಾರೆ.

