Mysuru, Election

ಲಾಕ್ ಡೌನ್ ಉಲ್ಲಂಘಿಸಿದ ಮೈಸೂರು ಜನತೆಗೆ ನೊಟೀಸ್ ಜಾರಿ
ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸುಖಾ ಸುಮ್ಮನೆ ತಿರುಗಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡಿರುವ ಮೈಸೂರು ಪೊಲೀಸರು 303 ವಾಹನಗಳನ್ನು ಸೀಜ್ ಮಾಡಿದ್ದಾರೆ.

ಮೈಸೂರು: ಪೆಟ್ರೋಲ್ ಬಂಕ್ಗೆ ಬೆಂಕಿ ಹಚ್ಚೋಕೆ ಹೊರಟ ಲೇಡಿ ಸಬ್ಇನ್ಸ್ಪೆಕ್ಟರ್, ವಿಡಿಯೋ ವೈರಲ್!
ಮೈಸೂರಿನ ನಂಜನಗೂಡು ಸದ್ಯ ಕೊರೋನಾ ವೈರಸ್ ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು ಇದರ ನಡುವೆ ಮಹಿಳಾ ಪಿಎಸ್ಐ ಒಬ್ಬರು ಪೆಟ್ರೋಲ್ ಬಂಕ್ಗೆ ಬೆಂಕಿ ಹಚ್ಚುತ್ತೇನೆ ಎಂದು ದರ್ಪ ಮೆರೆದಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಸ್ಥರ ಅವಸ್ಥೆ ಕೇಳಿ
ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ವಾಸಿಸುತ್ತಿರುವ ಸುಮಾರು 100 ಕುಟುಂಬಗಳಿಗೆ ಜೀವನ ದುಸ್ತರ, ಇತ್ತೀಚಿನ ಲಾಕ್ ಡೌನ್ ಇನ್ನಷ್ಟು ಕಷ್ಟ ಮಾಡಿದೆ. ಒಂದು ಸಣ್ಣ ಬೆಂಕಿಪೊಟ್ಟಣ, ಟೀ ಪುಡಿಗೆ 10-12 ಕಿಲೋ ಮೀಟರ್ ಕಾಡುಪ್ರದೇಶದ ಮೂಲಕ ನಡೆದುಕೊಂಡು ಹೋಗಿ ದೇವಸ್ಥಾನದ ಸಮೀಪ ಅಥವಾ ಮಾರತಹಳ್ಳಿ ಸಮೀಪದಿಂದ ತರಬೇಕಿದೆ.

ಕೊರೋನಾ ವೈರಸ್ ಭೀತಿ: ಮಾನವೀಯತೆ ಮರೆತು ಈಶಾನ್ಯ ಭಾರತೀಯನ ಒಳಗೆ ಬಿಡದ ಸೂಪರ್ ಮಾರ್ಕೆಟ್ ಸಿಬ್ಬಂದಿ ಪೊಲೀಸ್ ವಶಕ್ಕೆ!
ದೇಶಾದ್ಯಂತ ವ್ಯಾಪಕವಾಗಿ ಪಸರಿಸುತ್ತಿರುವ ಕೊರೋನಾ ವೈರಸ್ ಭೀತಿಯಿಂದಾಗಿ ಮೈಸೂರಿನ ಸೂಪರ್ ಮಾರ್ಕೆಟ್ ಸಿಬ್ಬಂದಿ ಈಶಾನ್ಯ ಭಾರತದ ನಾಗರೀಕರಿಗೆ ಒಳಗೆ ಪ್ರವೇಶ ನೀಡದ ಆರೋಪದ ಮೇರೆಗೆ ಸೂಪರ್ ಮಾರ್ಕೆಟ್ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ರೀರಂಗಪಟ್ಟಣ: ಕೊರೋನಾ ಭೀತಿ, ಹತ್ತೇ ನಿಮಿಷದಲ್ಲಿ ಮುಗಿದ ಮದುವೆ
ಶ್ರೀರಂಗಪಟ್ಟಣದಲ್ಲಿ ನಿಗದಿಯಾಗಿದ್ದ ವಿವಾಹವನ್ನು ಮನೆ ಮಂದಿ ಸೇರಿ ಕೇವಲ ಹತ್ತೇ ನಿಮಿಷಗಳಲ್ಲಿ ನೆರವೇರಿಸಿದ ಪ್ರಸಂಗ ಕೆಆರ್ಎಸ್ನಲ್ಲಿ ನಡೆದಿದೆ.

ಕೋವಿಡ್-19: ಆತಂಕದಲ್ಲಿ ಮೈಸೂರು, ನಂಜನಗೂಡನ್ನ 'ಅತಿ ಸೂಕ್ಷ್ಮ ಪ್ರದೇಶ' ಎಂದು ಘೋಷಣೆ
ಮೈಸೂರಿನ ನಂಜನಗೂಡಿನಲ್ಲಿ ಅತಿ ಹೆಚ್ಚು ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿರುವುದರಿಂದ ಆ ಪ್ರದೇಶವನ್ನು 'ಅತಿ ಸೂಕ್ಷ್ಮ ಪ್ರದೇಶ' ಎಂದು ಜಿಲ್ಲಾಡಳಿತ ಘೋಷಿಸಿದೆ.

ಮೈಸೂರು: ನಾಗಾಲ್ಯಾಂಡ್ ವಿದ್ಯಾರ್ಥಿಗಳಿಗೆ ಸೂಪರ್ ಮಾರ್ಕೆಟ್ ಪ್ರವೇಶ ನಿರಾಕರಣೆ,ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ನಾಗಾಲ್ಯಾಂಡಿನ ವಿದ್ಯಾರ್ಥಿಗಳನ್ನು ಸೂಪರ್ ಮಾರ್ಕೆಟ್ ಒಳಗಡೆ ಬಿಟ್ಟುಕೊಳ್ಳದ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊರೋನಾ ಎಫೆಕ್ಟ್: ಮೈಸೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ
ಕೊರೋನಾ ವೈರಸ್ ಭೀತಿಯಿಂದಾಗಿ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹಣ್ಣು ತರಕಾರಿಗಳ ಬೆಲೆ ಗಗನಕ್ಕೇರಿದೆ.

ಕೊರೋನಾ ವೈರಸ್: ಮೈಸೂರಿನಲ್ಲಿ ಒಂದೇ ದಿನ 5 ಸೋಂಕು ಪ್ರಕರಣಗಳು ಪತ್ತೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೇರಿಕೆ
ಮಾರಕ ಕೊರೋನಾ ವೈರಸ್ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ತನ್ನ ಕರಿಛಾಯೆ ಚಾಚಿದ್ದು, ಇಂದು ಒಂದೇ ಮೈಸೂರಿನಲ್ಲಿ ಐದು ಕೊರೋನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ.

