Rahul Gandhi, Akhilesh Yadav

ಕಾಂಗ್ರೆಸ್ ಅನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ, ಬಿಜೆಪಿ ಸೋಲಿಸಲು 'ಕೈ'ಯಿಂದ ಮಾತ್ರ ಸಾಧ್ಯ: ರಾಹುಲ್
ಕಾಂಗ್ರೆಸ್ ಪಕ್ಷದ ಬಗ್ಗೆ ಯಾರೂ ಅಂಡರ್ ಎಸ್ಟಿಮೇಟ್ ಮಾಡಬಾರದು. ಕಾಂಗ್ರೆಸ್ ಸೈದ್ಧಾಂತಿಕವಾಗಿ ನಡೆಯುತ್ತಿರುವ ಪಕ್ಷ. ಫ್ಯಾಸಿಸ್ಟ್ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್...

ಕರೆ ಮಾಡಿದ ರಾಹುಲ್ ಗಾಂಧಿ; ರಾಜಕೀಯ ಕಹಿ ಸಮಯದಲ್ಲಿ ಇಂತಹ ನಡವಳಿಕೆಗಳು ಅಪರೂಪ ಎಂದ ಸಂಜಯ್ ರಾವುತ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉದ್ಧವ್ ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ್ ರಾವುತ್ ಅವರಿಗೆ ಸೋಮವಾರ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು, 'ರಾಜಕೀಯ ಕಹಿ' ಸಮಯದಲ್ಲಿ ಇಂತಹ ನಡವಳಿಕೆಗಳು ಅಪರೂಪವಾಗುತ್ತಿವೆ ಎಂದು ರಾವುತ್ ಹೇಳಿದ್ದಾರೆ.

ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಥಾಣೆ ನಗರದಲ್ಲಿ ಪೊಲೀಸರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ರಾಹುಲ್ ಮಾಡುತ್ತಿರುವುದು ಭಾರತ್ ಜೋಡೋ ಯಾತ್ರೆ ಅಲ್ಲ, ಪ್ರಾಯಶ್ಚಿತ್ತ ಯಾತ್ರೆ: ಜೆಪಿ ನಡ್ಡಾ
ತಮ್ಮ ಪೂರ್ವಜರು ಮತ್ತು ಕಾಂಗ್ರೆಸ್ ಭಾರತವನ್ನು ವಿಭಜಿಸಿದ್ದರಿಂದ ಪಶ್ಚಾತ್ತಾಪ ಪಡುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿ, ಆರ್ ಎಸ್ಎಸ್ ವಿರುದ್ಧ ಹೋರಾಡುತ್ತಿದ್ದೇನೆ: ಆದರೆ ಅಂತರಾಳದಲ್ಲಿ ಅವರ ಬಗ್ಗೆ ದ್ವೇಷವಿಲ್ಲ: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ, ಆರ್ ಎಸ್ಎಸ್ ವಿರುದ್ಧ ಹೋರಾಡುತ್ತಿದ್ದೇನೆ ಆದರೆ ಅವರ ಬಗ್ಗೆ ನನ್ನ ಅಂತರಾಳದಲ್ಲಿ ದ್ವೇಷವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮೋರ್ಬಿ ಸೇತುವೆ ಕುಸಿತ ದುರಂತ: ನಿಜವಾದ ಅಪರಾಧಿಗಳು ಬಿಜೆಪಿಯೊಂದಿಗೆ ಉತ್ತಮ ನಂಟು- ರಾಹುಲ್
ಗುಜರಾತ್ನ ಮೊರ್ಬಿ ಪಟ್ಟಣದಲ್ಲಿ ಕಳೆದ ತಿಂಗಳು ಸಂಭವಿಸಿದ ತೂಗು ಸೇತುವೆ ಕುಸಿತದಿಂದಾದ 135 ಜನರ ಸಾವಿನ ಘಟನೆ ಹಿಂದಿರುವ ''ನಿಜವಾದ ಅಪರಾಧಿಗಳು' ಆಡಳಿತಾರೂಢ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.

ಜೈ ಶ್ರೀರಾಮ್ ಘೋಷಣೆ ಕೂಗುವ ಆರ್ ಎಸ್ಎಸ್ ನಿಂದ ಸೀತಾ ಮಾತೆಗೆ ಅವಮಾನ: ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಆರ್ ಎಸ್ಎಸ್ ಬಗ್ಗೆ ಮಾತನಾಡಿದ್ದು, ಆರ್ ಎಸ್ಎಸ್ ಸಂಘಟನೆ ಮಹಿಳೆಯರನ್ನು ಹತ್ತಿಕ್ಕುವ ಸಂಘಟನೆಯಾಗಿದೆ, ಆದ್ದರಿಂದಲೇ ಅಲ್ಲಿ ಮಹಿಳಾ ಸದಸ್ಯರಿಲ್ಲ ಎಂದು ಆರೋಪಿಸಿದ್ದಾರೆ.

ಮಹಾತ್ಮ ಗಾಂಧಿ ಮಹಾನ್ ವ್ಯಕ್ತಿ, ನನ್ನನ್ನು ಅವರ ಜೊತೆಗೆ ಹೋಲಿಕೆ ಮಾಡಬೇಡಿ: ಕಾಂಗ್ರೆಸ್ ನಾಯಕರಿಗೆ ರಾಹುಲ್ ಖಡಕ್ ಸೂಚನೆ
ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ನಡೆಸುತ್ತಿರುವ ಸಂಸದ ರಾಹುಲ್ ಗಾಂಧಿ, ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಮಹತ್ವದ ಸಂದೇಶವನ್ನು ನೀಡಿದ್ದಾರೆ. ತಮ್ಮನ್ನು ಮಹಾತ್ಮ ಗಾಂಧಿಗೆ ಹೋಲಿಸಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ.

'ಭಾರತ್ ಜೋಡೋ ಯಾತ್ರೆಗೆ 100 ದಿನ: ರಾಹುಲ್ ಸಾಧಿಸಿದಾದರೂ ಏನು?
ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ ಇಂದು 100ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, 2024ರ ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಪಕ್ಷ ಕೆಲವೊಂದು ಉತ್ತರಗಳನ್ನು ಕಂಡುಕೊಂಡಿದೆ ಎಂದು ಪಕ್ಷದ ವೀಕ್ಷಕರು ಭಾವಿಸಿದ್ದಾರೆ ಆದರೆ, ಇದು ಮುಂದೆ ಚುನಾವಣೆಗೆ ಲಾಭವಾಗಬಹುದೇ ಎಂಬ ಪ್ರಶ್ನೆಗಳು ಕಾಡುತ್ತಿವೆ.

