Russia, China

ಲಡಾಖ್ ಬಿಕ್ಕಟ್ಟು: ನಿರಂತರ ಮಾತುಕತೆಗೆ ಭಾರತ-ಚೀನಾ ನಿರ್ಧಾರ - ಬೀಜಿಂಗ್
ಸೆಪ್ಟೆಂಬರ್ 21ರಿಂದ ಭಾರತದೊಂದಿಗೆ ಆರನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಾಗಿದ್ದು, ಇದರಲ್ಲಿ ಗಡಿ ವಿಷಯದ ಕುರಿತು ಮಾತುಕತೆ ಮತ್ತು ಚರ್ಚೆಯನ್ನು ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ಚೀನಾದಿಂದ ಆಮದು ಶೇ.27 ರಷ್ಟು ಕುಸಿತ: ಕೇಂದ್ರ ಸರ್ಕಾರ
ಈ ಹಣಕಾಸು ವರ್ಷದ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ಚೀನಾದಿಂದ ಆಮದು ಶೇ. 27 ರಷ್ಟು ಕುಸಿತವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.

ಚೀನಾಗೆ ಹಿನ್ನಡೆ: ಎಲ್ಎಸಿಯಲ್ಲಿ ಮತ್ತೆ 6 ಶಿಖರಗಳು ಭಾರತ ಸೇನೆ ವಶಕ್ಕೆ!
ಚೀನಾ ಗಡಿಯಲ್ಲಿ ತೆಗೆದಿರುವ ತಗಾದೆಗೆ ಒಂದರ ಮೇಲೆ ಒಂದರಂತೆ ಭಾರತ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ನೀಡುತ್ತಿದೆ.

ಚೀನಾದೊಂದಿಗೆ ಮಾತುಕತೆ ಸಾಧ್ಯವಾದರೆ ಪಾಕಿಸ್ತಾನದ ಜೊತೆಗೇಕಿಲ್ಲ?: ಕೇಂದ್ರ ಸರ್ಕಾರಕ್ಕೆ ಫಾರೂಕ್ ಅಬ್ದುಲ್ಲಾ ಪ್ರಶ್ನೆ
ಲಡಾಖ್ ಸಂಘರ್ಷದಲ್ಲಿ ಭಾರತದ 20 ಯೋಧರನ್ನು ಕೊಂದ ಚೀನಾದೊಂದಿಗೆ ಮಾತುಕತೆ ಸಾಧ್ಯವಾದರೆ ಪಾಕಿಸ್ತಾನದ ಜೊತೆಗೇಕಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

'ಲಡಾಕ್ ಲಡಾಯಿ': ಎಲ್ ಎಸಿಯ 5 ಕೇಂದ್ರಗಳಲ್ಲಿ ಸಾಧ್ಯವಾಗುತ್ತಿಲ್ಲ ಭಾರತೀಯ ಸೇನೆ ನಿಯೋಜನೆ!
ಗಾಲ್ವಾನ್ ಕಣಿವೆಯ ಗಸ್ತು ಕೇಂದ್ರ 14 ರಿಂದ ಚೀನಾದ ಸೇನಾ ಪಡೆ ಹಿಂದೆ ಸರಿದ ನಂತರ ಹೆಚ್ಚಿನ ಬದಲಾವಣೆಯಾಗಿಲ್ಲವಾದ್ದರಿಂದ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ.

2019ರಲ್ಲಿ ಔಷಧ ಕಾರ್ಖಾನೆಯಲ್ಲಿ ಸೋರಿಕೆ: ಚೀನಾದ ಹಲವು ನಾಗರಿಕರಲ್ಲಿ ಬ್ಯಾಕ್ಟೀರಿಯಾ ಸೋಂಕು
ಕಳೆದ ವರ್ಷ ಬಯೊಫಾರ್ಮಕ್ಯುಟಿಕಲ್ ಕಂಪೆನಿಯಲ್ಲಿ ಉಂಟಾದ ಸೋರಿಕೆಯಿಂದ ಈಶಾನ್ಯ ಚೀನಾದ ಹಲವರಲ್ಲಿ ಬ್ಯಾಕ್ಟೀರಿಯಾ ರೋಗ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಉದ್ವಿಗ್ನತೆ ಮಧ್ಯೆ ಹಿಂದೂ ಮಹಾಸಾಗರದಲ್ಲಿ ಕಂಡ ಯುವಾನ್ ವಾಂಗ್; ನೌಕಾಪಡೆ ಕಂಡು ಹಿಂದಕ್ಕೋದ ಚೀನಾ ಹಡಗು!
ಪೂರ್ವ ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವೆ ಗಡಿ ಬಿಕ್ಕಟ್ಟು ತಾರಕಕ್ಕೇರಿದೆ. ಈ ನಡುವೆ ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗೊಂದು ಕಾಣಿಸಿಕೊಂಡಿದ್ದು ಭಾರತೀಯ ನೌಕಾಪಡೆ ಕಂಡು ಹೆದರಿ ಹಿಂದಕ್ಕೆ ಹೋಗಿದೆ.

ಎಲ್ಎಸಿಯಲ್ಲಿ ಗಸ್ತು ತಿರುಗದಂತೆ ಚೀನಾ ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದೆ, ಆದರೆ ಅದು ಅಸಾಧ್ಯ: ರಾಜನಾಥ್ ಸಿಂಗ್
ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯ ಬಳಿ ಭಾರತೀಯ ಸೇನೆಯ ಗಸ್ತು ಮತ್ತು ನಿಲುಗಡೆಯನ್ನು ತಡೆಯಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಸಾಕಷ್ಟು ಪ್ರಯತ್ನಿಸುತ್ತಿದೆ. ಆದರೆ ಜಗತ್ತಿನಲ್ಲಿರುವ ಯಾವುದೇ ಶಕ್ತಿಯು ಭಾರತೀಯ ಸೈನಿಕರನ್ನು ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ: ನೇಪಾಳ ಪ್ರಧಾನಿ, ರಷ್ಯಾ ಅಧ್ಯಕ್ಷರು ಸೇರಿದಂತೆ ಗಣ್ಯರಿಂದ ಶುಭಾಶಯ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 70ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನೇಪಾಳ, ರಷ್ಯಾ ಅಧ್ಯಕ್ಷರು ಸೇರಿದಂತೆ ಬಹುತೇಕ ದೇಶದ ನಾಯಕರು ಶುಭಾಶಯಗಳನ್ನು ಕೋರುತ್ತಿದ್ದಾರೆ.

