2019ರಲ್ಲಿ ಔಷಧ ಕಾರ್ಖಾನೆಯಲ್ಲಿ ಸೋರಿಕೆ: ಚೀನಾದ ಹಲವು ನಾಗರಿಕರಲ್ಲಿ ಬ್ಯಾಕ್ಟೀರಿಯಾ ಸೋಂಕು

ಕಳೆದ ವರ್ಷ ಬಯೊಫಾರ್ಮಕ್ಯುಟಿಕಲ್ ಕಂಪೆನಿಯಲ್ಲಿ ಉಂಟಾದ ಸೋರಿಕೆಯಿಂದ ಈಶಾನ್ಯ ಚೀನಾದ ಹಲವರಲ್ಲಿ ಬ್ಯಾಕ್ಟೀರಿಯಾ ರೋಗ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಚೀನಾದ ರಸ್ತೆಯೊಂದರಲ್ಲಿ ಮಾಸ್ಕ್ ಧರಿಸಿಕೊಂಡು ಹೋಗುತ್ತಿರುವ ತಂದೆ-ಮಗ
ಚೀನಾದ ರಸ್ತೆಯೊಂದರಲ್ಲಿ ಮಾಸ್ಕ್ ಧರಿಸಿಕೊಂಡು ಹೋಗುತ್ತಿರುವ ತಂದೆ-ಮಗ
Updated on: 

ಬೀಜಿಂಗ್: ಕಳೆದ ವರ್ಷ ಬಯೊಫಾರ್ಮಕ್ಯುಟಿಕಲ್ ಕಂಪೆನಿಯಲ್ಲಿ ಉಂಟಾದ ಸೋರಿಕೆಯಿಂದ ಈಶಾನ್ಯ ಚೀನಾದ ಹಲವರಲ್ಲಿ ಬ್ಯಾಕ್ಟೀರಿಯಾ ರೋಗ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚೀನಾದ ಗುನ್ಸು ಪ್ರಾಂತ್ಯದ ಲ್ಯಾಂಜೊ ಆರೋಗ್ಯ ವಕ್ತಾರ, ಬ್ರೂಸೆಲೋಸಿಸ್ ಎಂಬ ಬ್ಯಾಕ್ಟೀರಿಯಾ ಕಾಯಿಲೆಗೆ 3 ಸಾವಿರದ 245 ಮಂದಿ ತುತ್ತಾಗಿದ್ದಾರೆ ಎಂದು ತಿಳಿಸಿದ್ದಾರೆ. ಬ್ರುಲೆಲ್ಲಾ ಬ್ಯಾಕ್ಟೀರಿಯಾಕ್ಕೆ ತುತ್ತಾದವರಲ್ಲಿ ಇದು ಕಂಡುಬಂದಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

ಕಳೆದ ವರ್ಷ ಜುಲೈ-ಆಗಸ್ಟ್ ತಿಂಗಳಲ್ಲಿ ಝೊಂಗ್ಮ್ ಲ್ಯಾಂಜೊ ಜೈವಿಕ ಫಾರ್ಮಕ್ಯುಟಿಕಲ್ ಫ್ಯಾಕ್ಟರಿಯಿಂದ ಬ್ಯಾಕ್ಟೀರಿಯಾ ಸೋರಿಕೆಯಾಗಿತ್ತು ಎಂದು ನಗರ ಆರೋಗ್ಯ ವಕ್ತಾರರು ತಿಳಿಸಿದ್ದಾರೆ.

ಮತ್ತೆ 11,401 ಮಂದಿಯಲ್ಲಿ ಈ ಕಾಯಿಲೆ ಕಂಡುಬಂದಿದ್ದು ಆದರೆ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಒಟ್ಟಾರೆ ಈ ನಗರದ 2.9 ದಶಲಕ್ಷ ಜನಸಂಖ್ಯೆಯಲ್ಲಿ 21 ಸಾವಿರದ 847 ಮಂದಿಗೆ ಸೋಂಕು ತಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲ್ಟಾ ಜ್ವರ ಅಥವಾ ಮೆಡಿಟರೇನಿಯನ್ ಜ್ವರ ಎಂದು ಕರೆಯಲ್ಪಡುವ ಈ ರೋಗವು ತಲೆನೋವು, ಸ್ನಾಯು ನೋವು, ಜ್ವರ ಮತ್ತು ಆಯಾಸ ಸೇರಿದಂತೆ ಹಲವು ರೋಗಲಕ್ಷಣಗಳನ್ನು ಉಂಟುಮಾಡಬಹುದು.ಇವುಗಳಲ್ಲಿ ಕೆಲವು ಒಮ್ಮೆ ಬಂದರೆ ದೇಹದಿಂದ ಸಂಪೂರ್ಣವಾಗಿ ಹೋಗುವುದಿಲ್ಲ, ಪದೇ ಪದೇ ಮರುಕಳಿಸುತ್ತಿರುತ್ತದೆ ಎಂದು ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್(ಸಿಡಿಸಿ) ಹೇಳಿದೆ.

ಈ ಬ್ಯಾಕ್ಟೀರಿಯಾ ಸಾಂಕ್ರಾಮಿಕ ಮನುಷ್ಯರಿಂದ ಮನುಷ್ಯರಿಗೆ ಹರಡುವುದು ವಿರಳ. ಬದಲಾಗಿ, ಹೆಚ್ಚಿನ ಜನರು ಕಲುಷಿತ ಆಹಾರವನ್ನು ತಿನ್ನುವುದರ ಮೂಲಕ ಅಥವಾ ಬ್ಯಾಕ್ಟೀರಿಯಾವನ್ನು ಉಸಿರಾಡುವ ಮೂಲಕ ಸೋಂಕಿಗೆ ಒಳಗಾಗುತ್ತಾರೆ ಎಂದು ಸಿಡಿಸಿ ಹೇಳುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com