Russia, China

ಭಾರತ ಅಲ್ಲ ಚೀನಾ ಸೇನೆಯಿಂದಲೇ ಮೊದಲು ಗುಂಡಿನ ದಾಳಿಯಾಗಿದ್ದು, ಸೇನೆ ಪ್ರತಿದಾಳಿ ಮಾಡಿತಷ್ಟೇ: ಭಾರತೀಯ ಸೇನೆ
ಮೊದಲು ಭಾರತ ಅಲ್ಲ..ಚೀನಾ ಸೈನಿಕರೇ ಗುಂಡಿನ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.

ಲಡಾಖ್ ಬಿಕ್ಕಟ್ಟು: ಸಮಸ್ಯೆ ಪರಿಹಾರಕ್ಕೆ ರಷ್ಯಾದಲ್ಲಿ ಭಾರತ-ಚೀನಾ ವಿದೇಶ ಸಚಿವರ ಮಾತುಕತೆಗೆ ಮುಹೂರ್ತ ಫಿಕ್ಸ್
ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಶೀಘ್ರದಲ್ಲಿಯೇ ಪರಿಹಾರ ದೊರಕುವ ಸಾಧ್ಯತೆಗಳು ಕಂಡು ಬರುತ್ತಿವೆ.

ಹುತಾತ್ಮ ಟಿಬೆಟ್ ಯೋಧನಿಗೆ ಸಂಪೂರ್ಣ ಸೇನಾ ಗೌರವಗಳೊಂದಿಗೆ ವಿದಾಯ, ಚೀನಾಗೆ ಪ್ರಬಲ ಸಂದೇಶ ರವಾನಿಸಿದ ಭಾರತ
ಲಡಾಖ್ನ ಪಕ್ಷಿಣ ಪ್ರಾಂಗಾಂಗ್ನಲ್ಲಿ ಅತಿಕ್ರಮಕ್ಕೆ ಯತ್ನಿಸಿದ ಚೀನಾದ ದಾಳಿಯಲ್ಲಿ ಹುತಾತ್ಮರಾದ ಟಿಬೆಟ್ ಮೂಲದ ಭಾರತೀಯ ಯೋಧ ನಿಮಾ ಶಂಜಿನ್ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿದ್ದು, ಸಂಪೂರ್ಣ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಭಾರತ ಚೀನಾಕ್ಕೆ ಟಿಬೆಟ್ ಚೀನಾದಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

ಲಡಾಖ್ ಸಂಘರ್ಷ ತುಂಬಾ ಗಂಭೀರವಾದದ್ದು, ತುಂಬಾ ಆಳವಾದ ರಾಜತಾಂತ್ರಿಕ ಚರ್ಚೆ ಅಗತ್ಯ: ವಿದೇಶಾಂಗ ಸಚಿವ ಜೈ ಶಂಕರ್
ಲಡಾಖ್ ಸಂಘರ್ಷ ತುಂಬಾ ಗಂಭೀರವಾದದ್ದು, ತುಂಬಾ ಆಳವಾದ" ರಾಜತಾಂತ್ರಿಕ ಚರ್ಚೆ ಅಗತ್ಯ ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ.

ಎಲ್ ಎಸಿಯಲ್ಲಿ ಭಾರತ- ಚೀನಾ ಸೇನಾಪಡೆಗಳಿಂದ ಗುಂಡಿನ ಚಕಮಕಿ
ಕಳೆದ ಮೂರು ತಿಂಗಳಿನಿಂದಲೂ ಭಾರತ ಹಾಗೂ ಚೀನಾ ನಡುವಣ ವಿವಾದವಾಗುತ್ತಿರುವ ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ಮಂಗಳವಾರ ಮೂಲಗಳಿಂದ ತಿಳಿದುಬಂದಿದೆ.

ಚೀನಾ ಸೇನೆಯಿಂದ ಐವರು ಯುವಕರ ಅಪಹರಣ: ಪಿಎಲ್ ಎಗೆ ಭಾರತೀಯ ಸೇನೆಯಿಂದಹಾಟ್ ಲೈನ್ ಸಂದೇಶ
ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ನಿರಿ ಜಿಲ್ಲೆಯಿಂದ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿದ ವರದಿಗಳಿಗೆ ಸಂಬಂಧಿಸಿದಂತೆ ಭಾರತೀ ಸೇನೆ ಈಗಾಗಲೇ ಚೀನಾದ ಪೀಪಲ್ಸ್ ಲಿಬರೇಷನ್ ಆಫ್ ಆರ್ಮಿ(ಪಿಎಲ್ ಎ)ಗೆ ಹಾಟ್ ಲೈನ್ ಸಂದೇಶ ಕಳುಹಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಭಾನುವಾರ ತಿಳಿಸಿದ್ದಾರೆ.

ಲಡಾಕ್ ನಲ್ಲಿ ಯಥಾಸ್ಥಿತಿ ಮುರಿಯುವ ಚೀನಾದ ಪ್ರಯತ್ನ ದ್ವಿಪಕ್ಷೀಯ ಸಂಬಂಧ ಉಲ್ಲಂಘನೆಯಾಗಿದೆ:ರಾಜನಾಥ್ ಸಿಂಗ್
ಗಡಿ ವಾಸ್ತವ ರೇಖೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪದೆ ಚೀನಾ ತನ್ನ ದ್ವಿಪಕ್ಷೀಯ ಒಪ್ಪಂದವನ್ನು ಮುರಿಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೊದಲ್ಲಿ ಅಲ್ಲಿನ ರಕ್ಷಣಾ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಲಡಾಖ್ ಸಂಘರ್ಷಕ್ಕೆ ಭಾರತವೇ ಸಂಪೂರ್ಣ ಹೊಣೆ, ಗಡಿಯ ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳಲು ಇಷ್ಟವಿಲ್ಲ: ರಾಜನಾಥ್ ಸಿಂಗ್ ಭೇಟಿ ಬಳಿಕ ಚೀನಾ ಹೇಳಿಕೆ!
ಲಡಾಖ್ ನಲ್ಲಿ ನಡೆದ ಇಂಡೋ-ಚೀನಾ ಸೈನಿಕರ ಸಂಘರ್ಷಕ್ಕೆ ಭಾರತೀಯ ಸೈನಿಕರೇ ನೇರಹೊಣೆ ಎಂದು ಹೇಳಿರುವ ಚೀನಾ ಸರ್ಕಾರ, ತಾನು ಯಾವುದೇ ಕಾರಣಕ್ಕೂ ತನ್ನ ಗಡಿಯ ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳಲು ಸಿದ್ಧನಿಲ್ಲ ಎಂದು ಹೇಳಿದೆ.

ಅ.ಪ್ರದೇಶ:ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ ಐವರನ್ನು ಚೀನಾ ಸೈನಿಕರು ಅಪಹರಿಸಿದ್ದಾರೆ ಎಂದ ಕಾಂಗ್ರೆಸ್ ಶಾಸಕ
ಚೀನಾ ಸೇನಾಪಡೆಯ ವರ್ತನೆ ಮಿತಿಮೀರುವಂತೆ ಕಾಣುತ್ತಿದೆ. ಅರುಣಾಚಲ ಪ್ರದೇಶದಿಂದ ಐವರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯ ಸೈನಿಕರು ಅಪಹರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ ಹೇಳಿದ್ದಾರೆ.

