Russia, China

ಕೊರೋನಾ: ಚೀನಾವನ್ನು ಹಿಂದಿಕ್ಕಿದ ಭಾರತ; 85 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ, ಒಂದೇ ದಿನ 3970 ಮಂದಿಯಲ್ಲಿ ಸೋಂಕು ಪತ್ತೆ
ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ತನ್ನ ಉಗ್ರ ಪ್ರತಾಪವನ್ನು ಮುಂದುವರೆಸಿದ್ದು, ದೇಶದಲ್ಲಿ 24 ಗಂಟೆಗಳಲ್ಲಿ 3970 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 85,970ಕ್ಕೆ ತಲುಪಿದೆ.

ವಿಚಾರ ಗ್ರಹಿಕೆಯಲ್ಲಿನ ವ್ಯತ್ಯಾಸದಿಂದ ಭಾರತ-ಚೀನಾ ಸೇನಾಪಡೆಗಳ ನಡುವೆ ಜಟಾಪಟಿ ಆಗಿತ್ತು: ವಿದೇಶಾಂಗ ಸಚಿವಾಲಯ ಸ್ಪಷ್ಟನೆ
ವಾಸ್ತವ ಗಡಿ ರೇಖೆ ವಿಚಾರ ಸಂಬಂಧ ಭಾರತ ಹಾಗೂ ಚೀನಾ ಸೇನಾಪಡೆಗಳ ನಡುವೆ ಗ್ರಹಿಕೆಯಲ್ಲಿ ವ್ಯತ್ಯಾಸಗಳು ಕಂಡು ಬಂದ ಕಾರಣ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಸ್ಪಷ್ಟನೆ ನೀಡಿದೆ.

ಭಾರತ ಜೊತೆ ಸೇರಿ ಚೀನಾಗೆ ತಿರುಗೇಟು ನೀಡಲು ಅಮೆರಿಕಾ ಮಾಸ್ಟರ್ ಪ್ಲಾನ್: 18 ಅಸ್ತ್ರಗಳ ಪ್ರಯೋಗಕ್ಕೆ ಸಿದ್ಧತೆ
ಕೋವಿಡ್-19 ಸಾಂಕ್ರಾಮಿಕ ರೋಗದ ವಿಚಾರವಾಗಿ ನಿರಂತರವಾಗಿ ಸುಳ್ಳು, ವಂಚನೆ, ಮಾಹಿತಿ ಮುಚ್ಚಿಡುತ್ತಿರುವ ಚೀನಾಗೆ ತಿರುಗೇಟು ನೀಡಲು ಮುಂದಾಗಿರುವ ಅಮೆರಿಕಾ, ಭಾರತದೊಂದಿಗೆ ಮಿಲಿಟರಿ ಒಪ್ಪಂದ ಸೇರಿದಂತೆ 18 ಅಂಶಗಳೊಂದಿಗೆ ರಣವ್ಯೂಹ ರೂಪಿಸುತ್ತಿರುವ ಸಂಗತಿಯನ್ನು ಅಮೆರಿಕಾದ ಉನ್ನತ ಮಟ್ಟದ ಸೆನೆಟರ್ ಒಬ್ಬರು ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಕೊರೋನಾ ರಣಕೇಕೆ: 82 ಸಾವಿರ ಗಡಿಯತ್ತ ಸೋಂಕಿತರ ಸಂಖ್ಯೆ, ಮಹಾಮಾರಿಗೆ 2,649 ಮಂದಿ ಬಲಿ
ಭಾರತದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ 82,000 ಗಡಿಯತ್ತ ಸಾಗುತ್ತಿದೆ. ಇದರೊಂದಿಗೆ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡ ಚೀನಾವನ್ನು ಸೋಂಕಿತರ ಸಂಖ್ಯೆಯಲ್ಲಿ ಹಿಂದಿಕ್ಕುವತ್ತ ಭಾರತ ದಾಪುಗಾಲು ಇಟ್ಟಿದೆ.

2 ದಶಕದಲ್ಲಿ ಚೈನಾದಿಂದ 5 ಅಂಟು ವ್ಯಾಧಿಗಳು ಪ್ರಸರಣ: ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ
ಚೈನಾದಿಂದ ಕಳೆದ 20 ವರ್ಷಗಳಲ್ಲಿ ಐದು ಅಂಟು ವ್ಯಾಧಿಗಳು ಪಸರಿಸಿ ವಿಶ್ವವನ್ನು ಭಯಭೀತಗೊಳಿಸಿವೆ. ಇನ್ನೂ ಮುಂದೆ ಈ ರೀತಿ ಆಗದಂತೆ ಸೂಕ್ತ ತಡೆ ವಿಧಿಸಬೇಕು ಎಂದು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಗೆಗಾರ ರಾಬರ್ಟ್ ಓ ಬ್ರೈನ್ ತಿಳಿಸಿದ್ದಾರೆ.

ಕೊರೋನಾ ವೈರಸ್ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷ, ಇಡೀ ನಗರದ ಜನರ ಪರೀಕ್ಷೆಗೆ ಮುಂದಾದ ಚೀನಾ ಸರ್ಕಾರ!
ವಿಶ್ವದ 190ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷವಾಗಿದ್ದು, ಇದೇ ಕಾರಣಕ್ಕೆ ಚೀನಾ ಸರ್ಕಾರ ಇಡೀ ವುಹಾನ್ ನಗರದ ಜನತೆಗೆ ಕೊರೋನಾ ಪರೀಕ್ಷೆ ನಡೆಸಲು ಮುಂದಾಗಿದೆ.

ಚೀನಾದಲ್ಲಿ ಕೊರೋನಾ ಮತ್ತೆ ವಕ್ಕರಿಸಿದೆಯೇ?: ಸತತ ಎರಡನೇ ದಿನ ಸೋಂಕಿತರ ಸಂಖ್ಯೆ ಎರಡಂಕೆಯಲ್ಲಿ
ಕೊರೋನಾ ಮೊದಲ ಸಲ ಕಾಣಿಸಿಕೊಂಡ ಚೀನಾ ದೇಶದಲ್ಲಿ ಮಂಗಳವಾರ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಕಳೆದೆರಡು ದಿನ ಎರಡಂಕಿ ಹೊಸ ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು ಸೋಂಕಿನ ಎರಡನೇ ಸುತ್ತಿನ ಅಲೆ ಎದ್ದಿರಬಹುದೇ ಎಂಬ ಭೀತಿ ಅಲ್ಲಿನ ಜನರನ್ನು ಕಾಡಿತ್ತು.

ಸವಾಲಿಗೆ ತಕ್ಕ ಪ್ರತ್ಯುತ್ತರ: ಗಡಿಯಲ್ಲಿ ಹಾರಾಡಿದ ಚೀನಾ ಹೆಲಿಕಾಪ್ಟರ್‌ಗಳು, ರಂಗಕ್ಕಿಳಿದ ಭಾರತದ ಯುದ್ಧ ವಿಮಾನಗಳು!
ಕೊರೋನಾ ಮಹಾಮಾರಿಯನ್ನು ಬಿಟ್ಟಿದ್ದಲ್ಲದೆ ಚೀನಾ ಮತ್ತೊಮ್ಮೆ ಅಕ್ರಮಣಕಾರಿ ಕೃತ್ಯದಲ್ಲಿ ಭಾಗಿಯಾಗಿದೆ. ಇತ್ತೀಚಿಗೆ ಸಿಕ್ಕಿಂನ ನಾಕು ಲಾ ಪಾಸ್ ವಲಯದಲ್ಲಿ ಭಾರತೀಯ ಸೇನೆಯೊಂದಿಗೆ ಘರ್ಷಣೆಗೆ ಇಳಿದಿದ್ದ ಚೀನಾ ಪಡೆಗಳು, ಮತ್ತೊಮ್ಮೆ ಪ್ರಚೋದಾನಾತ್ಮಕ ಕೃತ್ಯ ನಡೆಸಿವೆ.

ಕೊರೋನಾ, ಚೀನಾ ಸೇರಿ ಎರಡು 'ಸಿ' ಗಳೊಂದಿಗೆ ಭಾರತ ಹೋರಾಡಬೇಕಿದೆ: ಸೇನಾ ಮುಖ್ಯಸ್ಥ
ಈ ಹಿಂದೆ ಎರಡು ‘ಪಿ’ ಗಳಾದ ಪ್ಯಾಂಡಮಿಕ್ ಮತ್ತು ಪಾಕಿಸ್ತಾನವನ್ನು ಎದುರಿಸುತ್ತಿದ್ದ ಭಾರತ, ಈಗ ಎರಡು ‘ಸಿ’ಗಳಾದ ಕೊರೋನಾ ಮತ್ತು ಚೀನಾವನ್ನೂ ಎದುರಿಸಬೇಕಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಹೇಳಿದ್ದಾರೆ.

