Russia, China

ಲಡಾಕ್ ಗಡಿಯಲ್ಲಿ ಭಾರತ, ಚೀನಾ ದೇಶಗಳಿಂದ ಸೇನೆ ನಿಯೋಜನೆ, ಉದ್ವಿಗ್ನ ವಾತಾವರಣ ನಿರ್ಮಾಣ
ಹೊಸ ಕೇಂದ್ರಾಡಳಿತ ಪ್ರದೇಶ ಲಡಾಕ್ ನ ಪ್ಯಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ದೇಶಗಳು ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಿದ್ದು ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಭಾರತದ ವೈರಸ್ ಚೀನಾ, ಇಟಲಿಯದ್ದಕ್ಕಿಂತಲೂ ಹೆಚ್ಚು ಅಪಾಯಕಾರಿ: ನೇಪಾಳ ಪ್ರಧಾನಿ ಕೆಪಿ ಒಲಿ
ಅತ್ತ ಕೊರೋನಾ ವೈರಸ್ ಹರಡಲು ಚೀನಾವೇ ಕಾರಣ, ಅದರಿಂದಾಗಿಯೇ ತಮ್ಮ ದೇಶಕ್ಕೆ ಇಂದು ಈ ದುಸ್ಥಿತಿ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಕಿಡಿ ಕಾರುತ್ತಿದ್ದರೆ ಇತ್ತ ನೇಪಾಳ ಪ್ರಧಾನಿ ಭಾರತದ ಮೇಲೆ ಬೆರಳು ಮಾಡಿ ತೋರಿಸುತ್ತಿದ್ದಾರೆ.

ಜರ್ಮನಿಯ ಶೂ ತಯಾರಕ Von Wellx ಚೀನಾದಿಂದ ಭಾರತಕ್ಕೆ ವರ್ಗಾವಣೆ!
ಜರ್ಮನಿಯ ಶೂ ತಯಾರಕ ಸಂಸ್ಥೆ Von Wellx ಹಲವು ಸುತ್ತಿನ ಮಾತುಕತೆಯ ನಂತರ ಚೀನಾದಿಂದ ತನ್ನ ಉತ್ಪಾದನಾ ಘಟಕವನ್ನು ಭಾರತಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಿದೆ.

ಪಂಚೆನ್ ಲಾಮಾ ಎಲ್ಲಿದ್ದಾರೆ? ಚೀನಾಗೆ ಅಮೆರಿಕದ ಪ್ರಶ್ನೆ
ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಬಹಿರಂಗವಾಗಿಯೇ ತೊಡ ತಟ್ಟುತ್ತಿರುವ ಅಮೆರಿಕ ಇದೀಗ ಹೊಸದಂದು ರಣತಂತ್ರದ ಮೂಲಕ ಚೀನಾ ಮೇಲೆ ಒತ್ತಡ ಹೇರಲು ಮುಂದಾದಿಗೆ.

ಕೊರೋನಾ ಹುಟ್ಟಿಕೊಂಡ ಚೀನಾದಲ್ಲಿಯೇ ನಿಯಂತ್ರಣ ಔಷಧ ಸೃಷ್ಟಿ?
ಊರೆಲ್ಲಾ ಕೊಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತು ಅಕ್ಷರಶ: ಚೀನಾಕ್ಕೆ ಅನ್ವಯವಾಗಲಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾವು, ನೋವಿಗೆ ಕಾರಣವಾದ ಮಾರಕ ಕೊರೋನಾವೈರಸ್ ಹುಟ್ಟಿಕೊಂಡ ಚೀನಾದಲ್ಲಿಯೇ ಅದಕ್ಕೆ ಅಂತ್ಯವಾಡುವ ಸಂಶೋಧನಾ ಕಾರ್ಯಗಳು ನಡೆಯುತ್ತಿವೆ.

ಚೀನಾದಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲು, 4 ಸಾವು, 15 ಮಂದಿಗೆ ಗಾಯ
ಚೀನಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಕನಿಷ್ಠ 4 ಮಂದಿ ಸಾವನ್ನಪ್ಪಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕೊರೋನಾ ವಿರುದ್ಧ ಹೋರಾಡಲು 2 ಬಿಲಿಯನ್ ಡಾಲರ್ ಘೋಷಿಸಿದ ಚೀನಾ!
ಕೊರೋನಾ ವಿರುದ್ಧ ಹೋರಾಡುವುದಕ್ಕೆ ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ 2 ಬಿಲಿಯನ್ ಡಾಲರ್ ಘೋಷಣೆ ಮಾಡಿದ್ದಾರೆ.

ಕೊರೋನಾ ವೈರಸ್ ಗೆ ಚೀನಾ ಕಾರಣ: ಡ್ರ್ಯಾಗನ್ ಸರ್ಕಾರದ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದ ಅಮೆರಿಕ
ಅಮೆರಿಕವೂ ಸೇರಿದಂತೆ ವಿಶ್ವದ 213 ರಾಷ್ಟ್ರಗಳಲ್ಲಿ ಆರ್ಭಟಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಚೀನಾ ದೇಶವನ್ನೇ ಹೊಣೆಗಾರಿಕೆ ಮಾಡಿರುವ ಅಮೆರಿಕ ಸರ್ಕಾರ, ಇದೀಗ ಚೀನಾ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದೆ.

ಕೊರೋನಾ ವೈರಸ್: ವಿಶ್ವ ಆರೋಗ್ಯ ಸಂಸ್ಥೆ ಬಗ್ಗೆ ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ
ವಿಶ್ವದ 213 ರಾಷ್ಟ್ರಗಳಲ್ಲಿ ಮಾರಣ ಹೋಮ ನಡೆಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸದಂತೆ ವಿಶ್ವ ಆರೋಗ್ಯ ಸಂಸ್ಥೆ ನಡೆದುಕೊಂಡ ರೀತಿ ಮತ್ತು ಅದರ ಕ್ರಮಗಳ ಕುರಿತಂತೆ ಸಂಶಯ ವ್ಯಕ್ತಪಡಿಸಿರುವ ವಿಶ್ವದ 62 ರಾಷ್ಟ್ರಗಳು ತನಿಖೆಗೆ ಒತ್ತಾಯಿಸಿ ಸಹಿ ಹಾಕಿವೆ.

