Russia, China

ಉಕ್ರೇನ್ನ ಜಪೋರಿಝಿಯಾ ನಗರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಿಂದ 17 ಮಂದಿ ಸಾವು
ಜಪೋರಿಝಿಯಾ ಇತ್ತೀಚಿನ ವಾರಗಳಲ್ಲಿ ಪದೇ ಪದೇ ದಾಳಿಗೆ ತುತ್ತಾಗಿದೆ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ವಾರ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಸ್ವಾಧೀನಪಡಿಸಿಕೊಂಡ ಉಕ್ರೇನ್ ನಿಯಂತ್ರಿತ ಭಾಗದಲ್ಲಿದ್ದ ಪ್ರದೇಶ ಇದಾಗಿದೆ.

ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಸೇರಿ ಮೂವರಿಗೆ ನೊಬೆಲ್ ಶಾಂತಿ ಪ್ರಶಸ್ತಿ
2022ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, ಬೆಲಾರಸ್ನ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಲಿಯಾಟ್ಸ್ಕಿ, ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಸ್ಮಾರಕ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ...

ಪಾಕಿಸ್ತಾನದಿಂದ ಕತ್ತೆ, ನಾಯಿಗಳನ್ನು ಆಮದು ಮಾಡಿಕೊಳ್ಳಲಿದೆ ಚೀನಾ!
ನಗದು ಕೊರತೆಯಿರುವ ದೇಶವು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಪ್ರಯತ್ನಿಸುತ್ತಿರುವಾಗ ಪಾಕಿಸ್ತಾನದಿಂದ ಕತ್ತೆ ಮತ್ತು ನಾಯಿಗಳನ್ನು ಆಮದು ಮಾಡಿಕೊಳ್ಳಲು ಚೀನಾ ಆಸಕ್ತಿ ತೋರಿಸಿದೆ ಎಂದು ಅಧಿಕಾರಿಗಳು ಅಲ್ಲಿನ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಅತಿ ಕೆಟ್ಟ ಸನ್ನಿವೇಶಕ್ಕೆ ಸಿದ್ಧರಾಗುತ್ತಿದ್ದೇವೆ: ಐಎಎಫ್ ಮುಖ್ಯಸ್ಥರ ಮಾತಿನ ಹಿಂದಿನ ಮರ್ಮವೇನು...?
ಭಾರತೀಯ ವಾಯುಪಡೆ ಈಶಾನ್ಯ ಲಡಾಖ್ ನಲ್ಲಿ ಗಡಿ ನಿಯಂತ್ರಣ ರೇಖೆಯಾದ್ಯಂತ ಚೀನಾ ಚಟುವಟಿಕೆಗಳನ್ನು ಎದುರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ವಿಆರ್ ಚೌಧರಿ ಹೇಳಿದ್ದಾರೆ.

ಉಕ್ರೇನ್ನ 4 ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ನ ನಾಲ್ಕು ಪ್ರದೇಶಗಳನ್ನು ರಷ್ಯಾಕ್ಕೆ ಸೇರಿಸಿಕೊಳ್ಳುವ ಕಾನೂನುಗಳಿಗೆ ಸಹಿ ಹಾಕಿದ್ದಾರೆ. ಆದರೆ, ಈ ಕ್ರಮವು ಅಂತರರಾಷ್ಟ್ರೀಯ ಕಾನೂನನ್ನು ಧಿಕ್ಕರಿಸಿ ನಡೆಸುತ್ತಿರುವ ಸ್ವಾಧೀನವಾಗಿದೆ.

ಉಕ್ರೇನ್ ಸಂಘರ್ಷದ ಬಗ್ಗೆ ಮೋದಿ, ಝೆಲೆನ್ಸ್ಕಿ ಚರ್ಚೆ; ಯುದ್ಧದಿಂದ ಪರಿಹಾರ ಸಾಧ್ಯವಿಲ್ಲ ಎಂದ ಪ್ರಧಾನಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಂಗಳವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್ ಸಂಘರ್ಷಕ್ಕೆ ಯಾವುದೇ ಮಿಲಿಟರಿ ಪರಿಹಾರವಿಲ್ಲ ಮತ್ತು ಪರಮಾಣು ಸೌಲಭ್ಯಗಳ ಅಪಾಯವು ದುರಂತದ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಒತ್ತಿ ಹೇಳಿದರು.

ರಷ್ಯಾ ವಿರುದ್ಧ ಉಕ್ರೇನ್ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರ ಅಪಹರಣ ಆರೋಪ
ಉಕ್ರೇನ್ ನ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರನ್ನು ರಷ್ಯಾ ಅಪರಹರಣ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

Xiaomiಯ 5,551 ಕೋಟಿ ರೂ. ವಶಪಡಿಸಿಕೊಳ್ಳಲು FEMA ಪ್ರಾಧಿಕಾರ ಅನುಮೋದಿಸಿದೆ: ಇಡಿ
ಚೀನಾದ ಮೊಬೈಲ್ ಫೋನ್ ತಯಾರಕ Xiaomi ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿದ್ದ 5,551 ಕೋಟಿ ರೂಪಾಯಿಗಳನ್ನು ಮುಟ್ಟುಗೋಲು ಹಾಕುವ ಆದೇಶವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿಯಲ್ಲಿ ರಚಿಸಲಾದ ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ.

ಸಾರ್ವಜನಿಕವಾಗಿ ಕಾಣಿಸಿಕೊಂಡ ಕ್ಸಿ ಜಿನ್ಪಿಂಗ್: ಊಹಾಪೋಹಗಳಿಗೆ ತೆರೆ
ಮುಂದಿನ ತಿಂಗಳು ನಡೆಯಲಿರುವ ಚೀನಾದ ಆಡಳಿತ ಪಕ್ಷದ ನಿರ್ಣಾಯಕ ಅಧಿವೇಶನಕ್ಕೆ ಮುಂಚಿತವಾಗಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸಾರ್ವಜನಿಕವಾಗಿ ಕಾಣಿಸುವುದಿಲ್ಲ ಎಂಬ ಊಹಾಪೋಹಗಳ ಮಧ್ಯೆ ಅವರು ಮಂಗಳವಾರ ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

