• Tag results for sexual harassment

ಲೈಂಗಿಕ ಕಿರುಕುಳ ಆರೋಪ: ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್ ದಾಖಲು!

ಲೈಂಗಿಕ ಕಿರುಕುಳ ಆರೋಪದ ಮೇರೆಗೆ ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

published on : 1st April 2022

ಪಿಜಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಹಾಸನ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೊಫೆಸರ್ ಅಮಾನತು

ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರೊಫೆಸರ್ ಒಬ್ಬರನ್ನು ಅಮಾನತು ಮಾಡಲಾಗಿದೆ. 

published on : 25th January 2022

ತಾಯಿಯ ಗರ್ಭ, ಸ್ಮಶಾನ ಮಾತ್ರ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಳ ಎಂದು ಬರೆದು ಅಪ್ರಾಪ್ತೆ ಆತ್ಮಹತ್ಯೆಗೆ ಶರಣು!

ತಮಿಳುನಾಡಿನ ಅಪ್ರಾಪ್ತ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ಮಾಡಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

published on : 20th December 2021

ಮಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಅತಿಥಿ ಉಪನ್ಯಾಸಕನ ಬಂಧನ

20 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕನನ್ನು ಬಂಧಿಸಲಾಗಿದೆ.

published on : 20th December 2021

ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ

ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.

published on : 5th September 2021

ಸಹಾಯಕಿಗೆ ಲೈಂಗಿಕ ಕಿರುಕುಳ: ಥಾಣೆ ಪುರಸಭೆಯ ಕೋವಿಡ್-19 ಆಸ್ಪತ್ರೆಯ ಅಧಿಕಾರಿ ವಿರುದ್ಧ ಪ್ರಕರಣ

ಸಹಾಯಕ ಮಾಟ್ರಾನ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಥಾಣೆಯ ಪುರಸಭೆಯ ಕೋವಿಡ್-19 ಆಸ್ಪತ್ರೆಯ ಹಿರಿಯ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

published on : 15th July 2021

ಲೈಂಗಿಕ ಕಿರುಕುಳ: ದಾಬಸ್ ಪೇಟೆಯ ವಿಶೇಷ ಚೇತನ ಶಾಲಾ ಪ್ರಾಂಶುಪಾಲ ಅರೆಸ್ಟ್

ತನ್ನ ವಿದ್ಯಾರ್ಥಿಯೊಬ್ಬನಿಗೆ  ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಾಬಸ್ ಪೇಟೆಯಲ್ಲಿ ವಿಶೇಷ ಚೇತನ ಮಕ್ಕಳ  ಶಾಲೆಯೊಂದರ 43 ವರ್ಷದ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

published on : 27th June 2021

ಲೈಂಗಿಕ ಕಿರುಕುಳ ಪ್ರಕರಣ: ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ನಿರ್ದೋಷಿ!

ಸಹೋದ್ಯೋಗಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಗೋವಾ ಸೆಷನ್ಸ್ ಕೋರ್ಟ್ ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ನಿರ್ದೋಷಿ ಎಂದು ತೀರ್ಪು ನೀಡಿದೆ.

published on : 21st May 2021

ತರುಣ್ ತೇಜ್'ಪಾಲ್ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ತೀರ್ಪು ಪ್ರಕಟ ಮೇ 21ಕ್ಕೆ ಮುಂದೂಡಿಕೆ

ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧದ ಸಹೋದ್ಯೋಗಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಗೋವಾ ಸೆಷನ್ಸ್ ಕೋರ್ಟ್ ಮೇ 21ಕ್ಕೆ ತೀರ್ಪು ಕಾಯ್ದಿರಿಸಿದೆ.

published on : 19th May 2021

ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಿಲ್ಲ; ಸಿಇಓ ಸುಂದರ್‌ ಪಿಚ್ಚೈಗೆ ಸಾವಿರಾರು ಉದ್ಯೋಗಿಗಳಿಂದ ಬಹಿರಂಗ ಪತ್ರ!

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾವಿರಾರು ಮಂದಿ ಆಲ್ಫಾಬೆಟ್ ಉದ್ಯೋಗಿಗಳು ಸಿಇಓ ಸುಂದರ್ ಪಿಚ್ಚೈ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

published on : 11th April 2021

ಬರೇಲಿ ರೈಲ್ವೆ ನಿಲ್ದಾಣದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಟಿಟಿಇ ಅಮಾನತು

ಬರೇಲಿ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ 23 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಟಿಕೆಟ್ ಪರೀಕ್ಷಕನನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

published on : 6th April 2021

ಮಾಜಿ ಸಿಜೆಐ ರಂಜನ್ ಗೊಗೊಯ್ ಲೈಂಗಿಕ ಕಿರುಕುಳ ಕೇಸು: ಪಿತೂರಿಯನ್ನು ತಳ್ಳಿಹಾಕುವಂತಿಲ್ಲ ಎಂದ ಸುಪ್ರೀಂ ಕೋರ್ಟ್ 

ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ನ್ಯಾಯಾಂಗ ವಿರುದ್ಧ ಪಿತೂರಿ ನಡೆದಿದೆಯೇ ಎಂದು 2019ರಲ್ಲಿ ಸುಪ್ರೀಂ ಕೋರ್ಟ್ ಆರಂಭಿಸಿದ್ದ ಸ್ವಯಂ ಪ್ರೇರಿತ ತನಿಖೆಯನ್ನು ಗುರುವಾರ ಮುಕ್ತಾಯಗೊಳಿಸಿದೆ.

published on : 18th February 2021

#MeToo ಅಭಿಯಾನ: ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಪರವಾಗಿ ನಾನು ಗೆದ್ದಿದ್ದೇನೆ - ಪ್ರಿಯಾ ರಮಣಿ

ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಪರವಾಗಿ ನಾನು ಗೆದ್ದಿದ್ದೇನೆ ಎಂದು #MeToo ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್ ಅವರು ದಾಖಲಿಸಿದ್ದ...

published on : 17th February 2021

ಕಿರಿಯ ಸಿಬ್ಬಂದಿಯೊಂದಿಗೆ ಚೆಲ್ಲಾಟ ಸ್ವೀಕಾರಾರ್ಹವಲ್ಲ: ಮಧ್ಯಪ್ರದೇಶ ಮಾಜಿ ನ್ಯಾಯಾಧೀಶರಿಗೆ ಸುಪ್ರೀಂ ಎಚ್ಚರಿಕೆ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಿಸ್ತು ಕ್ರಮ ಎದುರಿಸುತ್ತಿರುವ ಮಾಜಿ ಮಧ್ಯ ಪ್ರದೇಶ ನ್ಯಾಯಮೂರ್ತಿಗಳ ವರ್ತನೆಯನ್ನು ಖಂಡಿಸಿರುವ ಸುಪ್ರೀಂ ಕೋರ್ಟ್‌, ಕಿರಿಯ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡುವುದು ಸ್ವೀಕಾರಾರ್ಹವಲ್ಲ ಎಂದು ಎಚ್ಚರಿಸಿದೆ.

published on : 16th February 2021

ಬೆಂಗಳೂರು: ನನ್ನ ಆಸೆ ಈಡೇರಿಸದಿದ್ದರೇ ಕೇಸ್ ದಾಖಲಿಸುವೆ; ಡಿಐಜಿಯಿಂದ ಮಹಿಳೆಗೆ ಬೆದರಿಕೆ!

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಮಹಿಳೆಯೋರ್ವರು ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. 

published on : 10th February 2021

ರಾಶಿ ಭವಿಷ್ಯ