Tamil Nadu

ಕೋವಿಡ್-19: ತಮಿಳುನಾಡಿನಲ್ಲಿ ಒಂದೇ ದಿನ 33 ಮಂದಿಗೆ ಓಮೈಕ್ರಾನ್ ಪಾಸಿಟಿವ್
ತಮಿಳುನಾಡಿನಲ್ಲಿ ಗುರುವಾರ ಒಂದೇ ದಿನ 33 ಮಂದಿಗೆ ಕೊರೋನಾ ವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

ತಾಯಿಯ ಗರ್ಭ, ಸ್ಮಶಾನ ಮಾತ್ರ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಳ ಎಂದು ಬರೆದು ಅಪ್ರಾಪ್ತೆ ಆತ್ಮಹತ್ಯೆಗೆ ಶರಣು!
ತಮಿಳುನಾಡಿನ ಅಪ್ರಾಪ್ತ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ಮಾಡಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಮಿಳುನಾಡು: ಶಾಲೆಯ ವಿಶ್ರಾಂತಿ ಕೊಠಡಿ ಗೋಡೆ ಕುಸಿತ; ಮೂವರು ವಿದ್ಯಾರ್ಥಿಗಳ ಸಾವು
ತಮಿಳುನಾಡಿನ ತಿರುನಲ್ವೇಲಿ ಬಳಿಯ ಶಾಫ್ಟರ್ ಹೈ ಸ್ಕೂಲಿನ ವಿಶ್ರಾಂತಿ ಕೊಠಡಿಯ ಗೋಡೆ ಕುಸಿದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

'ತಮಿಳ್ ತಾಯ್ ವಾಳ್ತು' ನಾಡಗೀತೆಯಾಗಿ ಘೋಷಿಸಿದ ತಮಿಳುನಾಡು ಸರ್ಕಾರ
ತಮಿಳುನಾಡು ಸರ್ಕಾರ ತಮಿಳು ತಾಯಿಯನ್ನು ಶ್ಲಾಘಿಸುವ ಹಾಡು 'ತಮಿಳ್ ತಾಯ್ ವಾಳ್ತು' ಅನ್ನು ನಾಡಗೀತೆಯಾಗಿ ಶುಕ್ರವಾರ ಘೋಷಿಸಿದೆ ಮತ್ತು ಈ ಹಾಡು ಹಾಡುವ ವೇಳೆ ಹಾಜರಿದ್ದವರೆಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು...

ತಮಿಳುನಾಡಿಗೂ ಒಕ್ಕರಿಸಿದ ಓಮಿಕ್ರಾನ್; ನೈಜಿರಿಯಾದಿಂದ ಬಂದಿದ್ದ ವ್ಯಕ್ತಿಗೆ ರೂಪಾಂತರಿ ಸೋಂಕು
ತಮಿಳುನಾಡಿಗೂ ಕೋವಿಡ್ ವೈರಸ್ ನೂತನ ರೂಪಾಂತರಿ ಓಮಿಕ್ರಾನ್ ಕಾಲಿಟ್ಟಿದ್ದು, ನೈಜಿರಿಯಾದಿಂದ ಬಂದಿದ್ದ ಚೆನ್ನೈ ಮೂಲದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.

ಸೇನಾ ಹೆಲಿಕಾಪ್ಟರ್ ದುರಂತದ ತನಿಖೆ ನಡೆಸಲು ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಸೂಕ್ತ ಆಯ್ಕೆ: ತಜ್ಞರ ಅಭಿಮತ
ತಮಿಳು ನಾಡಿನ ಕೂನ್ನೂರು ಬಳಿ ಕಳೆದ ಬುಧವಾರ ಸಂಭವಿಸಿದ ಮಿಲಿಟರಿ ಹೆಲಿಕಾಪ್ಟರ್(Mi17V5) ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಏರ್ ಮಾರ್ಷಲ್ ಮನವೇಂದ್ರ ಸಿಂಗ್, ಬೆಂಗಳೂರಿನ ತರಬೇತಿ ಕಮಾಂಡ್ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್(AOC-in-C) ಅವರ ನೇತೃತ್ವದಲ್ಲಿ ತ್ರಿ-ಸೇವಾ ತನಿಖಾ ಸಮಿತಿಯನ್ನು ನೇಮಿಸಲಾಗಿದೆ.

ಸೇನಾ ಹೆಲಿಕಾಪ್ಟರ್ ದುರಂತ: 11 ಅಧಿಕಾರಿಗಳ ಮೃತದೇಹ ಗುರುತು ಪತ್ತೆ, ಇನ್ನಿಬ್ಬರ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ
ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ನಾಲ್ವರು ಭಾರತೀಯ ವಾಯುಪಡೆಯ ಸಿಬ್ಬಂದಿ ಗುರುತು ಪತ್ತೆ ಕಾರ್ಯ ಪೂರ್ಣವಾಗಿದೆ. ಇನ್ನು ಇಬ್ಬರ ಗುರುತು ಪತ್ತೆ ಕಾರ್ಯ ಆಗಬೇಕಿದ್ದು ಮೃತದೇಹಗಳ ಡಿಎನ್ ಎ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮೂಲಕ ಇದುವರೆಗೆ 11 ಮಂದಿಯ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ.

ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ: ಈ ವಿಡಿಯೋದಲ್ಲಿ ದಾಖಲಾಗಿದೆ ಕೊನೆಯ ದೃಶ್ಯ!
ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 14 ಮಂದಿಯನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರಿನಲ್ಲಿ ಪತನವಾಗುವ ಮೊದಲು ಕ್ಷಣಗಳ 19 ಸೆಕೆಂಡುಗಳ ವಿಡಿಯೋ ಲಭ್ಯವಾಗಿದೆ.

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಜ.ಬಿಪಿನ್ ರಾವತ್ ಸೇರಿ 13 ಮಂದಿ ನಿಧನ: ಸ್ಥಳಕ್ಕೆ ಏರ್ ಚೀಫ್ ಮಾರ್ಷಲ್ ಭೇಟಿ
ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಮಿಐ-17 ವಿ-5 ಸೇನಾ ಹೆಲಿಕಾಪ್ಟರ್ ಭೀಕರ ಅಪಘಾತಕ್ಕೀಡಾಗಿ ಭಾರತದ ರಕ್ಷಣಾ ಪಡೆ(CDS) ಮುಖ್ಯಸ್ಥ ಜ.ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಜೀವ ದಹನವಾದ ಘಟನೆ ನಡೆದ ಸ್ಥಳಕ್ಕೆ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಗುರುವಾರ ಬೆಳಗ್ಗೆ ಭೇಟಿ ನೀಡಿದ್ದಾರೆ.

