TMC, BJP workers

ಬಂಗಾಳದಲ್ಲಿ ಹಿಂಸಾಚಾರ: ಟಿಎಂಸಿ ಪಂಚಾಯತ್ ಸದಸ್ಯನ ಕೊಲೆ, ನಂದಿಗ್ರಾಮದ ಚುನಾವಣಾ ಅಧಿಕಾರಿಗೆ ಭದ್ರತೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿದ್ದು, ಪುರ್ಬ ಬರ್ಧಮಾನ್ ಜಿಲ್ಲೆಯಲ್ಲಿ 54 ವರ್ಷದ ಟಿಎಂಸಿ ಕಾರ್ಮಿಕನನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ: ದಿನಗೂಲಿ ನೌಕರನ ಪತ್ನಿ, ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ ಈಗ ಸಾಲ್ಟೋರಾ ಕ್ಷೇತ್ರದ ಶಾಸಕಿ!
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋತರೂ ಕೂಡ ಟಿಎಂಸಿ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಮಧ್ಯೆ ಓರ್ವ ಮಹಿಳಾ ಅಭ್ಯರ್ಥಿ ಅಲ್ಲಿ ಜಯ ಗಳಿಸಿದ್ದು ವಿಶೇಷ ಸುದ್ದಿಯಾಗಿದೆ. ಅದು ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ, ಇವರ ಗೆಲುವು ಐತಿಹಾಸಿಕ ಎಂದು ರಾಜ್ಯದ ಜನ ಬಣ್ಣಿಸುತ್ತಿದ್ದಾರೆ.

ಬಂಗಾಳದ ಫಲಿತಾಂಶ ಉತ್ತರ ಪ್ರದೇಶ ವಿಧಾನಸಭೆ, 2024ರ ಸಾರ್ವತ್ರಿಕ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ: ಯಶ್ವಂತ್ ಸಿನ್ಹಾ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷ ಯಶ್ವಂತ್ ಸಿನ್ಹಾ ಭಾನುವಾರ ಒತ್ತಾಯಿಸಿದ್ದಾರೆ.

ಚುನಾವಣಾ ತಂತ್ರಜ್ಞ ಹುದ್ದೆ ತ್ಯಜಿಸಲಿರುವ ಪ್ರಶಾಂತ್ ಕಿಶೋರ್
ಚುನಾವನಾ ರಣತಂತ್ರ ಪರಿಣಿತನಾಗಿರುವ ಹಾಗೂ ಎಲ್ಲಾ ವಿರೋಧದ ನಡುವೆ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಪಶ್ಚಿಮ ಬಂಗಾಳ ಸಿಎಂ ಕುರ್ಚಿಯನ್ನೇರಲು ಸಹಕಾರ ನೀಡಿದ್ದ ಪ್ರಶಾಂತ್ ಕಿಶೋರ್ ತಾವು ಚುನಾವಣಾ ತಂತ್ರಜ್ಞನ ಕೆಲಸ ತ್ಯಜಿಸುವುದಾಗಿ ಪ್ರಕಟಿಸಿದ್ದಾರೆ.

ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ: ಬಿ.ವೈ.ವಿಜಯೇಂದ್ರ
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸೋಲು ನಿಶ್ಚಯವಾಗುತ್ತಿದ್ದಂತೆ ಜನಾದೇಶಕ್ಕೆ ತಲೆಬಾಗುತ್ತೇವೆ ಎಂದು ಕ್ಷೇತ್ರದಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಪಶ್ಚಿಮ ಬಂಗಾಳ: 84 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಪ್ರಶಾಂತ್ ಕಿಶೋರ್ ಊಹೆ ನಿಜವಾಗುತ್ತಾ?
ಪಶ್ಚಿಮ ಬಂಗಾಳದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 24, ಕೇಂದ್ರ ಗೃಹ ಸಚಿವ ಅಮಿತ್ ಶಾ 27 ಚುನಾವಣಾ ರ್ಯಾಲಿ ನಡೆಸಿದ್ದರೂ ಈವರೆಗಿನ ಮತ ಎಣಿಕೆಯ ಅಂಕಿ ಅಂಶಗಳನ್ನು ನೋಡಿದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ.

ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ ಗೆಲುವಿನತ್ತ ದಾಪುಗಾಲು..!!
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಸಂಜೆ ವೇಳೆಗೆ ಸೋಲು- ಗೆಲುವಿನ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಪಶ್ಚಿಮ ಬಂಗಾಳ ಚುನಾವಣೆ: ಬೆಳಗ್ಗೆ 9.30ರ ಹೊತ್ತಿಗೆ ಶೇ.16.04ರಷ್ಟು ಮತದಾನ, ಉತ್ತರ ಕೋಲ್ಕತ್ತಾ ಮತಗಟ್ಟೆ ಸಮೀಪ ಬಾಂಬ್ ಪತ್ತೆ
ಪಶ್ಚಿಮ ಬಂಗಾಳದ 35 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಅಂತಿಮ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದ್ದು ಬೆಳಗ್ಗೆ 9.31ರ ಹೊತ್ತಿಗೆ ಶೇಕಡಾ 16.04ರಷ್ಟು ಮತದಾನವಾಗಿದೆ.

ಪಶ್ಚಿಮ ಬಂಗಾಳ: ಕೊರೋನಾ ಸೋಂಕಿನಿಂದ ಖರ್ದಹ ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಸಾವು
ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ ಖರ್ದಹ ನಗರದ ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಅವರು ಸಾವನ್ನಪ್ಪಿದ್ದಾರೆಂದು ಭಾನುವಾರ ತಿಳಿದುಬಂದಿದೆ.

