ಮರೆಯಾಗುತ್ತಿರುವ ಕೋಟೆಗಳತ್ತ ಪಯಣ; ಬೆಂಗಳೂರಿನಿಂದ ವೀಕೆಂಡ್ ಪ್ರವಾಸಕ್ಕೆ ಇಲ್ಲಿದೆ ಅನ್‌ಎಕ್ಸ್‌ಪ್ಲೋರ್ಡ್ ರೂಟ್!

ಬೆಂಗಳೂರಿನಿಂದ ವೀಕೆಂಡ್ ಪ್ರವಾಸಕ್ಕೆ ಹೊಸ ಸರ್ಕ್ಯೂಟ್. ತುಮಕೂರು ಜಿಲ್ಲೆಯ ದೇವರಾಯನದುರ್ಗದ ನಮದ ಚಿಲುಮೆ, ಅತಿದೊಡ್ಡ ಏಕಶಿಲೆ ಎನಿಸಿಕೊಂಡಿರುವ ಮಧುಗಿರಿ ಕೋಟೆಯ ಸಾಹಸಮಯ ಚಾರಣ ಮತ್ತು ಮೊಘಲ್ ಪ್ರಾಂತ್ಯದ ರಾಜಧಾನಿಯಾಗಿದ್ದ ಸಿರಾ ಕೋಟೆಯನ್ನು ಒಳಗೊಂಡ ರೂಟ್ ವೀಕೆಂಡ್ ಪ್ರವಾಸಿಗರಿಗೆ ಬೆಸ್ಟ್ ಆಯ್ಕೆ.
Perfect One-Day Trip From Bengaluru
ಬೆಂಗಳೂರಿನಿಂದ ವೀಕೆಂಡ್ ಪ್ರವಾಸಕ್ಕೆ ಇಲ್ಲಿದೆ ಅನ್‌ಎಕ್ಸ್‌ಪ್ಲೋರ್ಡ್ ರೂಟ್!AI Image

ಬೆಂಗಳೂರು: ಸಂಡೆ ಬಂತು ಎಂದ್ರೆ ಸಾಕು... ಬೆಂಗಳೂರಿನಿಂದ ಒಂದು ದಿನಕ್ಕೆ ಎಲ್ಲಿಗೆ ಹೋಗಬಹುದು ಅಂದರೆ ನೆನಪಾಗೋದು ಅದೇ ಹಳೆಯ ದಾರಿಗಳು. ಆದರೆ ದಾರಿ ಸ್ವಲ್ಪ ಬದಲಿಸಿದರೆ, ಅದೇ ಹೆದ್ದಾರಿ ನಿಮ್ಮನ್ನು ಕಾಡಿನೊಳಗಿನ ದಂತಕಥೆಯೊಂದರ ಬಳಿ, ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲೆಯ ತುತ್ತ ತುದಿಯವರೆಗೂ, ಮತ್ತು ಕಾಲವೇ ಮರೆತುಬಿಟ್ಟ ಸಾಮ್ರಾಜ್ಯವೊಂದರ ಅವಶೇಷಗಳವರೆಗೂ ಕರೆದುಕೊಂಡು ಹೋಗುತ್ತದೆ. ಹೌದು, ಮೋಡ ಮುಸುಕಿದ ಒಂದು ಬುಧವಾರದ ಬೆಳಗ್ಗೆ, ಮಳೆಯ ಸಣ್ಣ ಮುನ್ಸೂಚನೆಯನ್ನೂ ಲೆಕ್ಕಿಸದೆ ಹೊರಟ ಈ ಪಯಣವೇ - ಮಧುಗಿರಿ ಡಿಟೂರ್. ಬೆಂಗಳೂರಿನ ಸದ್ದುಗದ್ದಲದಿಂದ ದೇವರಾಯನದುರ್ಗದ ಹಸಿರು ಕಾಡಿಗೆ, ಅಲ್ಲಿಂದ ನಮದ ಚಿಲುಮೆಯ ತಣ್ಣನೆಯ ಚಿಲುಮೆಗೆ, ಅಲ್ಲಿಂದ ಆಕಾಶಕ್ಕೆ ಸವಾಲು ಹಾಕಿ ನಿಂತ ಮಧುಗಿರಿಯ ಕಡಿದಾದ ಬಂಡೆಗೆ, ಕೊನೆಗೆ ಸಿರಾದ ಕೋಟೆಯ ಮೌನದ ಗೋಡೆಗಳಿಗೆ.

ಪ್ರಕೃತಿ ಮಡಿಲಿನಲ್ಲಿ ನಾಮದ ಚಿಲುಮೆ

Namada Chilume
ನಾಮದ ಚಿಲುಮೆOnline Desk

ದೇವರಾಯನದುರ್ಗದ ದಟ್ಟ ಅರಣ್ಯ ಪ್ರದೇಶದಲ್ಲಿರುವ ನೈಸರ್ಗಿಕ ನೀರಿನ ಬುಗ್ಗೆ 'ನಾಮದ ಚಿಲುಮೆ' ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕರ್ನಾಟಕ ಅರಣ್ಯ ಇಲಾಖೆಯು ಈ ಪ್ರದೇಶವನ್ನು ಸುಂದರವಾಗಿ ನಿರ್ವಹಿಸುತ್ತಿದ್ದು, ಇಲ್ಲಿರುವ ಜಿಂಕೆ ವನ ಮತ್ತು ಔಷಧೀಯ ಸಸ್ಯಗಳ ತೋಟವು ಪ್ರಮುಖ ಆಕರ್ಷಣೆಯಾಗಿದೆ. ರಾಮಾಯಣದ ಐತಿಹ್ಯ ಹೊಂದಿರುವ ಈ ತಾಣಕ್ಕೆ ತಲಾ ₹20 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಬಂಡೆಯ ಸಣ್ಣ ಬಿರುಕಿನಿಂದ ನಿರಂತರವಾಗಿ ಚಿಮ್ಮುವ ತಂಪಾದ ನೀರಿನ ಬುಗ್ಗೆಯನ್ನು ವೀಕ್ಷಿಸಲು ಜನವರಿ ಹಾಗೂ ಮುಂಗಾರು ಅವಧಿಯಲ್ಲಿ ಹೆಚ್ಚಿನ ಜನ ಆಗಮಿಸುತ್ತಿದ್ದಾರೆ.

Perfect One-Day Trip From Bengaluru
ದಸರಾ ರಜೆಗೆ ಎಲ್ಲಿಗೆ ಹೋಗ್ತೀರಾ? ಕರ್ನಾಟಕದಲ್ಲೇ ಇವೆ ನೋಡಲೇಬೇಕಾದ ಸ್ವರ್ಗಸದೃಶ ತಾಣಗಳು!

ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಚಾರಣಿಗರ ಲಗ್ಗೆ

Monolithic Hill, Madhugiri
ಏಕಶಿಲಾ ಬೆಟ್ಟ, ಮಧುಗಿರಿOnline Desk

ಏಷ್ಯಾದ ಎರಡನೇ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಸಮುದ್ರ ಮಟ್ಟದಿಂದ 1,200 ಮೀಟರ್ ಎತ್ತರದ ಮಧುಗಿರಿ ಕೋಟೆಗೆ ಚಾರಣಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡು, ನಂತರ ಹೈದರ್ ಅಲಿ ಮತ್ತು ಟಿಪ್ಪೂ ಸುಲ್ತಾನ್ ಅವರಿಂದ ಬಲವರ್ಧನೆಗೊಂಡ ಈ ಕೋಟೆಯು ಕಡಿದಾದ ಇಳಿಜಾರಿನಿಂದ ಕೂಡಿದೆ. ಕಲ್ಲಿನಲ್ಲಿ ಕೆತ್ತಲಾದ ಕಾಲಿಡುವ ಜಾಗಗಳು ಹಾಗೂ ಕಬ್ಬಿಣದ ರೇಲಿಂಗ್‌ಗಳ ಸಹಾಯದಿಂದ ಪ್ರವಾಸಿಗರು ಬೆಟ್ಟವನ್ನು ಏರುತ್ತಿದ್ದಾರೆ. ಕೋಟೆಯ ಮೇಲಿರುವ ಬುರುಜುಗಳು, ರಕ್ಷಣಾತ್ಮಕ ಗೋಡೆಗಳು ಮತ್ತು ಪುರಾತನ ನೀರಿನ ಹೊಂಡಗಳು ಇತಿಹಾಸದ ವೈಭವವನ್ನು ಸಾರುತ್ತಿವೆ. ಈ ಬೆಟ್ಟದ ಸಂಪೂರ್ಣ ಚಾರಣಕ್ಕೆ ಪ್ರವಾಸಿಗರು ಸಾಮಾನ್ಯವಾಗಿ 4 ರಿಂದ 5 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ.

Perfect One-Day Trip From Bengaluru
ಕಾಡಿನೊಳಗೆ ಕಡಲು! ಉಡುಪಿಯ ಕಾಂಡ್ಲಾ ವನದ ಹಿನ್ನೀರಿನಲ್ಲಿ ತೇಲುವ ಕಯಾಕ್ ಯಾನ

ಐತಿಹಾಸಿಕ ಸಿರಾ ಕೋಟೆಯ ವೀಕ್ಷಣೆ

Sira Fort
ಸಿರಾ ಕೋಟೆ, ಸಿರಾOnline Desk

ಮಧುಗಿರಿಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿರುವ ಐತಿಹಾಸಿಕ ಸಿರಾ ನಗರವು ಮತ್ತೊಂದು ಪ್ರಮುಖ ಪ್ರವಾಸಿ ಕೇಂದ್ರವಾಗಿ ಹೊರಹೊಮ್ಮಿದೆ. ವಿಜಯನಗರ ಕಾಲದ ಆಡಳಿತಗಾರ ಕಸ್ತೂರಿ ರಂಗಪ್ಪ ನಾಯಕರಿಂದ ಆರಂಭಗೊಂಡು, ಮೊಘಲರ ಪ್ರಾಂತ್ಯದ ರಾಜಧಾನಿಯಾಗಿ, ನಂತರ ಮರಾಠರು ಹಾಗೂ ಮೈಸೂರು ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿದ್ದ ಸಿರಾ ಕೋಟೆಯು ಬಯಲು ಪ್ರದೇಶದ ಕೋಟೆ ಶೈಲಿಗೆ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಪ್ರಾಚೀನ ಹೆಬ್ಬಾಗಿಲುಗಳು, ಕಂದಕಗಳು ಮತ್ತು ಬಲಿಷ್ಠ ಗೋಡೆಗಳು ಇಂದಿಗೂ ಪ್ರವಾಸಿಗರ ಗಮನ ಸೆಳೆಯುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com