ಮನರಂಜನೆ

ಆಮೀರ್ ಖಾನ್ ಅಭಿನಯದ ಸಿಕ್ರೆಟ್ ಸೂಪರ್‌ಸ್ಟಾರ್‌ ಚಿತ್ರದ ಟ್ರೈಲರ್

ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ಸಿಕ್ರೆಟ್ ಸೂಪರ್‌ಸ್ಟಾರ್‌ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಝೈರಾ ವಸೀಂ, ಮೆಹೆರ್ ವಿಜ್, ರಾಜ್ ಅರ್ಜುನ್ ನಟಿಸಿದ್ದಾರೆ.

ಆಮೀರ್ ಖಾನ್ ಅಭಿನಯದ ಸಿಕ್ರೆಟ್ ಸೂಪರ್‌ಸ್ಟಾರ್‌ ಚಿತ್ರದ ಟ್ರೈಲರ್
ಶ್ರೀಮುರಳಿ, ಶಿವಣ್ಣ ಜೋಡಿಯ 'ಮಫ್ತಿ' ಚಿತ್ರದ ಟೀಸರ್

ಶ್ರೀಮುರಳಿ, ಶಿವಣ್ಣ ಜೋಡಿಯ 'ಮಫ್ತಿ' ಚಿತ್ರದ ಟೀಸರ್

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಮಫ್ತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಶ್ರೀಮುರಳಿ ಮತ್ತು ಶಿವಣ್ಣ ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನರ್ತನ್ ಎಂ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಅವರು ಬಂಡವಾಳ ಹೂಡಿದ್ದಾರೆ.

ಬ್ಲೂ ಐಸ್ ಚಿತ್ರದ ಟ್ರೈಲರ್

ಬ್ಲೂ ಐಸ್ ಚಿತ್ರದ ಟ್ರೈಲರ್

ರಾಜೇಶ್ ಮೂರ್ತಿ ನಿರ್ದೇಶಿಸಿ, ನಿರ್ಮಿಸಿರುವ ಬ್ಲೂ ಐಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೊಂದು ಕ್ರೈಂ-ಸಸ್ಪೆನ್ಸ್ ಚಿತ್ರವಾಗಿದ್ದು, ಚಿತ್ರದಲ್ಲಿ ಯುವತಿಯೊಬ್ಬಳು ತನ್ನ ವೈಯಾರದಿಂದ ಪುರುಷರನ್ನು ಸೆಳೆದು ಅವರನ್ನು ಕೊಲ್ಲುವುದೇ ಚಿತ್ರದ ಕಥೆ. ಚಿತ್ರದಲ್ಲಿ ಆಫ್ರಿನ್ ಸಿದ್ದಿ, ನಸ್ಟಿಯಾ ರಾಯ್, ಆರ್ಜೆ ಪೃಥ್ವಿ ಅಭಿನಯಿಸಿದ್ದಾರೆ.

ಸುಭಾಶ್ ಚಂದ್ರಬೋಸ್‌ರ ಆಜಾದಿ ಸೇನೆ ಕುರಿತ 'ರಾಗ್‌ದೇಶ್' ಚಿತ್ರದ ಟ್ರೈಲರ್

ಸುಭಾಶ್ ಚಂದ್ರಬೋಸ್‌ರ ಆಜಾದಿ ಸೇನೆ ಕುರಿತ 'ರಾಗ್‌ದೇಶ್' ಚಿತ್ರದ ಟ್ರೈಲರ್

ಭಾರತ ಸ್ವತಂತ್ರ ಪೂರ್ವದಲ್ಲಿ ಸುಭಾಶ್ ಚಂದ್ರ ಬೋಸ್ ಅವರ ಆಜಾದಿ ಹಿಂದ್ ಸೇನೆಯ ಕುರಿತಾದ ಕಥಾವಸ್ತುವೊಂದಿರುವ ರಾಗ್‌ದೇಶ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಟಿಗ್ಮನ್ಶು ದುಲಿಯಾ ಅವರು ನಿರ್ದೇಶಿಸಿದ್ದಾರೆ. ಕುನಾಲ್ ಕಪೂರ್, ಮೋಹಿತ್ ಮಾರ್ವಾಹ ಮತ್ತು ಅಮಿತ್ ಸಧಾ ಅವರು ನಟಿಸಿದ್ದಾರೆ.

ಹಾಲಿವುಡ್ ಚಿತ್ರ 'ಇಸಂಟ್ ಇಟ್ ರೊಮ್ಯಾಂಟಿಕ್' ನಲ್ಲಿ ಪ್ರಿಯಾಂಕಾ ದೃಶ್ಯಗಳು ಲೀಕ್, ವೈರಲ್

ಹಾಲಿವುಡ್ ಚಿತ್ರ 'ಇಸಂಟ್ ಇಟ್ ರೊಮ್ಯಾಂಟಿಕ್' ನಲ್ಲಿ ಪ್ರಿಯಾಂಕಾ ದೃಶ್ಯಗಳು ಲೀಕ್, ವೈರಲ್

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಭಿನಯಿಸುತ್ತಿರುವ ಹಾಲಿವುಡ್ ನ 'ಇಸಂಟ್ ಇಟ್ ರೊಮ್ಯಾಂಟಿಕ್' ಚಿತ್ರದ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿತ್ರದಲ್ಲಿ ಪ್ರಿಯಾಂಕಾ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಆದಾಗ ಚಿತ್ರದ ನಾಯಕ ಆ್ಯಡಮ್ ಪ್ರಿಯಾಂಕಾ ನೆರವಿಗೆ ಬರುವ ದೃಶ್ಯಗಳು ವೈರಲ್ ಆಗಿವೆ. ವಿಡಿಯೋ ಕೃಪೆ: Youtube.