ಎ ಜೆಂಟಲ್ಮ್ಯಾನ್ ಚಿತ್ರದ ಟ್ರೈಲರ್ಬಾಲಿವುಡ್ ನಟ ಸಿದ್ಧಾರ್ಥ ಮತ್ತು ಜಾಕ್ವಲಿನ್ ಫರ್ನಾಂಡಿಸ್ ಅಭಿನಯದ ಎ ಜೆಂಟಲ್ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಮತ್ತು ಡಿಕೆ ಎಂಬುವರು ನಿರ್ದೇಶಿಸಿದ್ದಾರೆ.
ಫಸ್ಟ್ ಲವ್ ಚಿತ್ರದ ಟ್ರೈಲರ್ಆರ್ಜೆ ರಾಜೇಶ್ ಮತ್ತು ಕವಿತಾ ಅಭಿನಯದ ಫಸ್ಟ್ ಲವ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮಲ್ಲಿ ಎಂಬುವರು ಚಿತ್ರ ನಿರ್ದೇಶನ ಮಾಡಿದ್ದು ಅಶೋಕ್ ಬಂಡವಾಳ ಹೂಡಿದ್ದಾರೆ.
ಶಿವಣ್ಣ ಅಭಿನಯದ ಮಾಸ್ ಲೀಡರ್ ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ಕರುನಾಡು ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಮಾಸ್ ಲೀಡರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರಕ್ಕೆ ರೋಸ್ ಖ್ಯಾತಿಯ ನಿರ್ದೇಶಕ ನರಸಿಂಹ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಲೂಸ್ ಮಾದ ಯೋಗೇಶ್ ಮತ್ತು ಪ್ರಣೀತಾ ಸುಭಾಶ್ ನಟಿಸಿದ್ದಾರೆ.
ಯೇ ಹೈ ಇಂಡಿಯಾ ಚಿತ್ರದ ಟ್ರೈಲರ್ಲೊಮ್ ಹಾರ್ಶ್ ನಿರ್ದೇಶನದ ಯೇ ಹೈ ಇಂಡಿಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಗೀವಿ ಚಲಾಲ್, ದೀನಾ ಉಪ್ಪಾಳ್, ಅಂತ್ರಾ ಬ್ಯಾನರ್ಜಿ ಸೇರಿದಂತೆ ಬಹುತಾರಾಗಣವಿದೆ.
ಜಾಕಿಚಾನ್ ಅಭಿನಯದ 'ದಿ ಫಾರಿನರ್' ಚಿತ್ರದ ಟ್ರೈಲರ್ನಟ ಜಾಕಿಚಾನ್ ಅಭಿನಯದ ಆಕ್ಷನ್ ಥ್ರಿಲ್ಲರ್ ದಿ ಫಾರಿನರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚೈನಾಮನ್ ಕಾದಂಬರಿ ಆಧಾರಿತ ದಿ ಫಾರಿನರ್ ಚಿತ್ರದಲ್ಲಿ ಜಾಕಿಚಾನ್ ಮೈ ನವಿರೇಳಿಸುವ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದಂಡುಪಾಳ್ಯ 2 ಚಿತ್ರದ ಹೊಸ ಟ್ರೈಲರ್ರಕ್ಕಸರ ಮತ್ತಷ್ಟು ವಿಕೃತ ಕೃತ್ಯಗಳ ಒಳಗೊಂಡ ದಂಡುಪಾಳ್ಯ 2 ಚಿತ್ರದ ನೂತನ ಟ್ರೈಲರ್ ಬಿಡುಗಡೆಯಾಗಿದೆ. ದಂಡುಪಾಳ್ಯ ಚಿತ್ರ ನಿರ್ದೇಶಿಸಿದ್ದ ಶ್ರೀನಿವಾಸ್ ರಾಜು ದಂಡುಪಾಳ್ಯ 2 ಚಿತ್ರವನ್ನು ನಿರ್ದೇಶಿಸಿದ್ದು ವೆಂಕಟ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮಕರಂದ್ ದೇಶ್ ಪಾಂಡೆ, ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಶೃತಿ ಸೇರಿದಂತೆ ದೊಡ್ಡ ತಾರಾಗಣವಿದೆ.
ಕಾರ್ಮುಗಿಲು ಚಿತ್ರದ ಟ್ರೈಲರ್ಮಾಧವ್ ಶಿವಾ ನಟಿಸಿ ನಿರ್ದೇಶಿಸಿರುವ ಕಾರ್ಮುಗಿಲು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹಾದೇವ್ ಅಲಗ್ವಾಡಿ ಎಂಬುವರು ನಿರ್ಮಿಸಿದ್ದಾರೆ.
ಗಣೇಶ್ ಹುಟ್ಟುಹಬ್ಬಕ್ಕೆ 'ಚಮಕ್' ಟೀಸರ್ ಕೊಡುಗೆನಟ ಗಣೇಶ್ ನೆನ್ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಅವರ ಮುಂದಿನ ಚಿತ್ರ 'ಚಮಕ್' ತಂಡ ಅವರಿಗೆ ಟೀಸರ್ ಉಡುಗೊರೆ ನೀಡಿದೆ. ಸುನಿ ನಿರ್ದೇಶಿಸುತ್ತಿರುವ ಈ ಸಿನೆಮಾವನ್ನು ಟಿ ಆರ್ ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ.
ರಿಯಲ್ ರಿಯಲ್ 2 ಹಾರರ್ ಚಿತ್ರದ ಟ್ರೈಲರ್ಕವಿ ರಾಜೇಶ್ ನಿರ್ದೇಶದ ಹಾರರ್ ಥ್ರಿಲ್ಲರ್ ರಿಯಲ್ ರಿಯಲ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಜ್ವಲ್, ಸೌಜನ್ಯ, ಕಾವ್ಯ, ಸುಮ ನಟಿಸಿದ್ದಾರೆ.
ಜುಮಾಂಜಿ: ವೆಲ್ಕಮ್ ಟು ದಿ ಜಂಗಲ್ ಚಿತ್ರದ ಟ್ರೈಲರ್ಹಾಲಿವುಡ್ ನಲ್ಲಿ ಜುಮಾಂಜಿ ಸರಣಿ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದವು. ಇದೀಗ ಅದೇ ಸರಣಿಯ ಮತ್ತೊಂದು ಚಿತ್ರ ಜುಮಾಂಜಿ: ವೆಲ್ಕಮ್ ಟು ದಿ ಜಂಗಲ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಡ್ವೇನ್ ಜಾನ್ಸನ್, ಜಾಕ್ ಬ್ಲಾಕ್, ಕೇವಿನ್ ಹರ್ತ್, ಕರೇನ್ ಗಿಲಾನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ನನ್ನಲ್ಲೊಬ್ಬ ಕನ್ನಡ ಚಿತ್ರದ ಟೀಸರ್ನಿರಂಜನ್ ನಿರು ಮತ್ತು ರಂಜಿತ್ ಗೌಡ ಅಭಿನಯದ ನನ್ನಲ್ಲೊಬ್ಬ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಧನಂಜಯ್ ವೆಂಚಾರೆ ನಿರ್ದೇಶಿಸಿದ್ದಾರೆ.
'ಹೊಂಬಣ್ಣ' ಕನ್ನಡ ಟ್ರೇಲರ್ರಕ್ಷಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿರುವ 'ಹೊಂಬಣ್ಣ' ಸಿನೆಮಾದ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದೆ. ಸಾಕಷ್ಟು ಹೊಸ ನಟರು ಮತ್ತು ತಂತ್ರಜ್ಞರು ಸೇರಿಕೊಂಡಿರುವ ಈ ಸಿನೆಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಬದುಕಿನ ಹಲವು ಬಣ್ಣಗಳನ್ನು ಹಿಡಿದಿಡುವ ಈ ಸಿನೆಮಾ ಸಾಮಾಜಿಕ ಕಳಕಳಿಯನ್ನೊಳಗೊಂಡಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ.
ವಿವಾದಾತ್ಮಕ ಸಿನೆಮಾ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ' ಟ್ರೇಲರ್ ವೈರಲ್ಅಲಂಕೃತ ಶ್ರೀವಾಸ್ತವ ನಿರ್ದೇಶಿಸಿರುವ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ' ಸಿನೆಮಾ ಜುಲೈ ೨೧ ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾಡ್ ಟ್ರೇಲರ್ ಈಗ ವೈರಲ್ ಆಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರ್ ೩೦ ಲಕ್ಷ ಬಾರಿಗೆ ವೀಕ್ಷಣೆಯಾಗಿದೆ.
ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ಗಿಫ್ಟ್: ಸಂಹಾರ ಚಿತ್ರದ ಟೀಸರ್ ಬಿಡುಗಡೆಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಚಿಕ್ಕಣ್ಣ ಅವರ ಹುಟ್ಟಹಬ್ಬಕ್ಕಾಗಿ ಸಂಹಾರ ಚಿತ್ರ ತಂಡ ವಿಶೇಷ ಗಿಫ್ಟ್ ನೀಡಿದೆ. ಸಂಹಾರ ಚಿತ್ರದಲ್ಲಿ ಚಿಕ್ಕಣ್ಣ ಸಹ ಅಭಿನಯಿಸಿದ್ದು ಅವರನ್ನು ಹೈಲೈಟ್ ಮಾಡಿರುವ 1 ನಿಮಿಷ 35 ಸೆಕೆಂಡ್ ಇರುವ ವಿಶೇಷ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ರಾಕ್ಷಸಿ ಚಿತ್ರದ ಟ್ರೈಲರ್ನಟಿ ಸಿಂಧು ಲೋಕನಾಥ್ ಮತ್ತು ನವರಸನ್ ಅಭಿನಯದ ರಾಕ್ಷಸಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶ್ರಫ್ ನಿರ್ದೇಶಿಸಿದ್ದಾರೆ. ತಮಿಳಿನಲ್ಲಿ ಪಿಸಾಸು ಶೀರ್ಷಿಕೆ ಅಡಿ ಚಿತ್ರ ಬಿಡುಗಡೆಯಾಗಿ ಯಶಸ್ಸು ಗಳಿಸಿತ್ತು. ಇದೇ ಚಿತ್ರ ಕನ್ನಡದಲ್ಲಿ ರಾಕ್ಷಸಿಯಾಗಿ ರಿಮೇಕ್ ಆಗುತ್ತಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!