ಮನರಂಜನೆ

ಶ್ರದ್ಧಾ ಶ್ರೀನಾಥ್ ನಟನೆಯ 'ವಿಕ್ರಂ ವೇಧ' ತಮಿಳು ಸಿನೆಮಾ ಟ್ರೇಲರ್

ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಸೇರಿದಂತೆ ಆರ್ ಮಾಧವನ್, ವಿಜಯ್ ಸೇತುಪತಿ ನಟಿಸಿರುವ 'ವಿಕ್ರಂ ವೇಧ' ತಮಿಳು ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಮತ್ತೊಬ್ಬ ಕನ್ನಡ ನಟ ಅಚ್ಯುತ್ ಕುಮಾರ್ ಕೂಡ ನಟಿಸಿರುವ ಈ ಭೂಗತ ಲೋಕದ ಕಥೆಯುಳ್ಳ ಸಿನೆಮಾವನ್ನು ಪುಷ್ಕರ್-ಗಾಯತ್ರಿ ನಿರ್ದೇಶಿಸಿದ್ದಾರೆ. ಸಿನೆಮಾ ಜುಲೈ ೭ಕ್ಕೆ ಬಿಡುಗಡೆಯಾಗಲಿದೆ.

ಶ್ರದ್ಧಾ ಶ್ರೀನಾಥ್ ನಟನೆಯ 'ವಿಕ್ರಂ ವೇಧ' ತಮಿಳು ಸಿನೆಮಾ ಟ್ರೇಲರ್
ಕರಿಯ 2 ಚಿತ್ರದ ಟ್ರೈಲರ್

ಕರಿಯ 2 ಚಿತ್ರದ ಟ್ರೈಲರ್

ದರ್ಶನ ಅಭಿನಯದ ಕರಿಯ ಚಿತ್ರ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿತ್ತು. ಇದೀಗ ಕರಿಯ 2 ಚಿತ್ರ ತೆರೆಗೆ ಬರಲು ರೆಡಿಯಾಗುತ್ತಿದ್ದು ಚಿತ್ರದ ಟ್ರೈಲರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಈ ಬಾರಿ ದರ್ಶನ ಬದಲಿಗೆ ಚಿತ್ರದಲ್ಲಿ ನಾಯಕನಾಗಿ ಗಣಪ ಚಿತ್ರದ ಸಂತೋಷ್ ನಟಿಸಿದ್ದಾರೆ. ಸಂತೋಷ್ ಗೆ ಮಯೂರಿ ಸಾಥ್ ನೀಡಿದ್ದಾರೆ. ಚಿತ್ರವನ್ನು ಪ್ರಭು ಶ್ರೀನಿವಾಸ್ ನಿರ್ದೇಶಿಸಿದ್ದಾರೆ.