'ಬೀಗರ ಊಟ' ಸಿನೆಮಾ ಟ್ರೇಲರ್ಮಂಡ್ಯ ಸೊಗಡಿನ ಭಾಷೆಯ, 'ಒಂದುವರೆ ಕ್ವಿನ್ಟಾಲ್ ಚಿಕನ್- ಎಂಟ್ ಮರಿ ಬಾಡು' ಎಂಬ ಅಡಿಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ 'ಬೀಗರ ಊಟ' ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಹನುಪ್ರಶಾಂತ್ ಈ ಸಿನೆಮಾ ನಿರ್ದೇಶಿಸಿದ್ದು ಹೆಚ್ಚಿನ ವಿವರ ತಿಳಿಯಬೇಕಿದೆ.
ಬೆಹೆನ್ ಹೋಗಿ ತೇರಿ ಚಿತ್ರದ ಟ್ರೈಲರ್ರಾಜ್ ಕುಮಾರ್ ರಾವ್ ಮತ್ತು ಶೃತಿ ಹಾಸನ್ ಅಭಿನಯದ ಬೆಹೆನ್ ಹೋಗಿ ತೇರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಯ್ ಕೇ ಪನ್ನಾಲಾಲ್ ಎಂಬುವರು ನಿರ್ದೇಶಿಸಿದ್ದಾರೆ.
ಸಲ್ಮಾನ್ ನಟನೆಯ ಟ್ಯೂಬ್ಲೈಟ್ ಚಿತ್ರದ ಟೀಸರ್ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಟ್ಯೂಬ್ಲೈಟ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ಟ್ಯೂಬ್ಲೈಟ್ ಚಿತ್ರ 1962ರಲ್ಲಿ ಚೀನಾ ಮತ್ತು ಭಾರತದ ನಡುವೆ ನಡೆದ ಯುದ್ಧದ ಸನ್ನಿವೇಶವನ್ನು ಒಳಗೊಂಡಿದೆ.
ನುಗ್ಗೇಕಾಯಿ ಚಿತ್ರದ ಟ್ರೈಲರ್ನವ ನಿರ್ದೇಶಕ ಎ ವೇಣುಗೋಪಾಲ್ ನಿರ್ದೇಶನದ ನುಗ್ಗೇಕಾಯಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಧುಸೂದನ್, ಎಸ್ತಾರ್ ನರೋನ ಮತ್ತು ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ. ಚಿತ್ರವನ್ನು ಪ್ರೀತ್ ಎಸ್ ಹೆಗ್ಡೆ ಅವರು ನಿರ್ಮಿಸಿದ್ದಾರೆ.
ಮರಳಿ ಮನೆಗೆ ಚಿತ್ರದ ಟ್ರೈಲರ್ನಟಿ ಶೃತಿ ಅಭಿಯನದ ಮರಳಿ ಮನೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶಂಕರ್, ಆರ್ಯನ್ ಅಭಿನಯಿಸಿದ್ದು ಚಿತ್ರವನ್ನು ಯೋಗೇಶ್ ಮಾಸ್ಟರ್ ನಿರ್ದೇಶಿಸಿದ್ದಾರೆ. ಚಿತ್ರ ಇಂದು ರಾಜ್ಯಾದ್ಯಂತ ಬಿಡುಗೆಡೆಯಾಗಿದೆ.
3 ಈಡಿಯಟ್ಸ್ ಚಿತ್ರ ಸ್ಪ್ಯಾನಿಷ್ ಭಾಷೆಗೆ ರಿಮೇಕ್; ಚಿತ್ರದ ಟ್ರೈಲರ್ಬಾಲಿವುಡ್ ಬ್ಲಾಕ್ ಬಸ್ಟರ್ 3 ಈಡಿಯಟ್ಸ್ ಚಿತ್ರ ಸ್ಪ್ಯಾನಿಷ್ ಭಾಷೆಯಲ್ಲಿ ರಿಮೇಕ್ ಆಗುತ್ತಿದ್ದು ಸ್ಪ್ಯಾನಿಷ್ 3 ಇಡಿಯಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾರ್ಲೋಸ್ ಬೊಲಡೊ ಅವರು ನಿರ್ದೇಶಿಸಿದ್ದಾರೆ. ಹಿಂದಿಯ 3 ಇಡಿಯಟ್ಸ್ ಚಿತ್ರವನ್ನು ರಾಜಕುಮಾರ್ ಹಿರಾನಿ ಅವರು ನಿರ್ದೇಶಿಸಿದ್ದರು. 2009ರಲ್ಲಿ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
ಸರ್ಕಾರ್ 3 ಚಿತ್ರದ 2ನೇ ಟ್ರೇಲರ್ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸರ್ಕಾರ್ 3 ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಅಮಿತಾಬ್ ಬಚ್ಚನ್, ಯಾಮಿ ಗೌತಮ್, ಅಮಿತ್ ಸಾದ್, ಜಾಕಿ ಶ್ರಾಫ್, ಮನೋಜ್ ಬಾಜಪೇಯಿ ಮುಂತಾದವರು ನಟಿಸಿದ್ದಾರೆ.
ಹಂಬಲ್ ಪೊಲಿಟಿಷಿಯನ್ ನೊಗರಾಜ್ ಚಿತ್ರದ ಟೀಸರ್ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಡ್ಯಾನಿಶ್ ಸೇಠ್ ಅಭಿನಯದ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾದ್ ಖಾನ್ ನಿರ್ದೇಶಿಸಿದ್ದು ಪುಷ್ಕರ್ ಮಲ್ಲಿಕಾರ್ಜುನ್, ಹೇಮಂತ್ ಎಂ ರಾವ್ ಮತ್ತು ರಕ್ಷಿತ್ ಶೆಟ್ಟಿ ಚಿತ್ರವನ್ನು ನಿರ್ಮಿಸಿದ್ದಾರೆ.
ಮಿಸ್ಸಿಂಗ್ ಬಾಯ್ ಚಿತ್ರದ ಟೈಟಲ್ ಟೀಸರ್ಫಸ್ಟ್ ರ್ಯಾಂಕ್ ರಾಜು ಚಿತ್ರದ ಗುರು ನಂದನ್ ಅಭಿನಯದ ಮಿಸ್ಸಿಂಗ್ ಬಾಯ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಘುರಾಮ್ ನಿರ್ದೇಶಿಸುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅಭಿನಯದ 'ಬೇ ವಾಚ್' 3ನೇ ಟ್ರೇಲರ್ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ಹಾಲಿವುಡ್ ಸಿನೆಮಾಗೆ ಪಾದಾರ್ಪಣೆ ಮಾಡಿರುವ 'ಬೇವಾಚ್' ಸಿನೆಮಾದ ಟ್ರೇಲರ್ ಜಾಗತಿಕವಾಗಿ ಗಮನ ಸೆಳೆದಿದೆ. ಸೇಥ್ ಗಾರ್ಡನ್ ನಿರ್ದೇಶನದ ಈ ಚಿತ್ರ ಮೇ ೨೬ ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಸಿಂಹ ಹಾಕಿದ ಹೆಜ್ಜೆ ಚಿತ್ರದ ಟೀಸರ್ವಿಕ್ರಮ್ ನಿರ್ದೇಶಿಸಿರುವ ಸಿಂಹ ಹಾಕಿದ ಹೆಜ್ಜೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರೀತಂ ಮತ್ತು ಅಮೃತ ಅಭಿನಯಿಸಿದ್ದಾರೆ. ಚಿತ್ರವನ್ನು ಪಾರ್ಥಸಾರಥಿ ಎಂಬುವರು ನಿರ್ಮಿಸಿದ್ದಾರೆ.
ಪ್ರಭಾಸ್ ಅಭಿನಯದ ಸಾಹೋ ಚಿತ್ರದ ಟೀಸರ್ಬಾಹುಬಲಿ ನಂತರ ಇದೀಗ ಪ್ರಭಾಸ್ ಅಭಿನಯದ ಸಾಹೋ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದೇಶಾದ್ಯಂತ ಬಾಹುಬಲಿ ಚಿತ್ರ ತೆರೆಗೆ ಬಂದಿದ್ದು ಚಿತ್ರದ ಮಧ್ಯಂತರದಲ್ಲಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು ಸುಜಿತ್ ನಿರ್ದೇಶಿಸಿದ್ದಾರೆ.
ಚೇತನ್ ಅಭಿನಯದ ನೂರೊಂದು ನೆನಪು ಚಿತ್ರದ ಟ್ರೈಲರ್ಆ ದಿನಗಳು ಚೇತನ್ ಅಭಿನಯದ ನೂರೊಂದು ನೆನಪು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೇಘನಾ ರಾಜ್, ರಾಜವರ್ಧನ್, ಯಶ್ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರವನ್ನು ಕುಮರೇಶನ್ ನಿರ್ದೇಶಿಸಿದ್ದು ಸುರಜ್ ದೇಸಾಯಿ ಮತ್ತು ಮನೀಶ್ ದೇಸಾಯಿ ನಿರ್ಮಿಸಿದ್ದಾರೆ.
ದಯವಿಟ್ಟು ಗಮನಿಸಿ ಚಿತ್ರದ 'ಸಂಚಾರಿ' ವಿಡಿಯೋ ಸಾಂಗ್ ವೈರಲ್ಮಲ್ಟಿಸ್ಟಾರ್ಸ್ ಚಿತ್ರವಾಗಿರುವ ದಯವಿಟ್ಟು ಗಮನಿಸಿ ಚಿತ್ರದ ಸಂಚಾರಿ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ವೈರಲ್ ಆಗಿದೆ. ಹಾಡಿನಲ್ಲಿ ಅವಿನಾಶ್ ಶಟಮರ್ಶನ ಕಾಣಿಸಿಕೊಂಡಿದ್ದಾರೆ. ಅಲೆಮಾರಿಯೊಬ್ಬ ಗೊತ್ತು ಗುರಿ ಇಲ್ಲದ ಸಂಚಾರ ಕೈಗೊಳ್ಳುವ ಬಗ್ಗೆ ಕುತೂಹಲಕಾರಿಯಾಗಿ ವಿಡಿಯೋ ಸಾಂಗ್ ಅನ್ನು ಚಿತ್ರೀಕರಿಸಲಾಗಿದೆ. ರೋಹಿತ್ ಪದಕಿ ಎಂಬುವರು ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ್ ಸಂಯೋಜಿಸಿದ್ದು ಸಂಚಾರಿ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ.
ಗಮನ ಸೆಳೆದ 'ಮೇಕಿಂಗ್ ಆಫ್ ಟಗರು' ವಿಡಿಯೋನಿರ್ದೇಶಕ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಟಗರು' ಸಿನೆಮಾದ ಚಿತೀಕರಣದ ಮೇಕಿಂಗ್ ವಿಡಿಯೋ ಅಂತರ್ಜಾಲದಲ್ಲಿ ಗಮನ ಸೆಳೆದಿದೆ. ಶಿವರಾಜ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಈ ಸಿನೆಮಾದಲ್ಲಿ ಧನಂಜಯ್, ಮಾನ್ವಿತಾ, ಭಾವನಾ ಕೂಡ ನಟಿಸಿದ್ದಾರೆ. ನೈಜ ತಾಣಗಳಲ್ಲಿ ಚಿತ್ರೀಕರಿಸುವ ಸೂರಿ ಅವರ ಪ್ರತಿಭೆಯನ್ನು ಈ ವಿಡಿಯೋದಲ್ಲಿ ಕಾಣಬವುದಾಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!