ಜಾಲಿಡೇಸ್ನಲ್ಲಿ ಸ್ನೇಹಿತರ ಕಲರವರಕ್ತ ಸಂಬಂಧಗಳ ಮೀರಿದ ಬಂಧವಿದು, ಯಾವ ಬಿಂದುವಿನಲ್ಲೋ ಸಂಧಿಸಿಹುದು, ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು, ನಮ್ಮ ಪ್ರತಿ ನೋವನ್ನು ಹೀಗೆ ಜಾಲಿಡೇಸ್ ನಲ್ಲಿ ಗೆಳಯ ಗೆಳತಿಯರು ಹಾಡಿ ಕುಣಿಯುತ್ತಾರೆ.
ಕುಚುಕು ಕುಚುಕು ಹಾಡಿನಲ್ಲಿ ಅಂಬಿ-ವಿಷ್ಣುನಟರಾದ ಅಂಬರೀಷ್ ಹಾಗೂ ವಿಷ್ಣುವರ್ಧನ್ ಅವರು ಚಿತ್ರರಂಗದಲ್ಲಿ ಜೀವ ಗೆಳೆಯರಂತಿದ್ದರು. ಇಬ್ಬರು ಒಟ್ಟಾಗಿ ನಟಿಸಿದ್ದ ದಿಗ್ಗಜರು ಚಿತ್ರದ ಹಾಡೊಂದರಲ್ಲಿ ಅವರಿಬ್ಬರ ಅಭಿನಯ ಅಮೋಘವಾಗಿದೆ.
'ಐರಾವತ' ಟೀಸರ್ ಬಂತು ದಾರಿ ಬಿಡಿನಿರ್ದೇಶಕ ಎ ಪಿ ಅರ್ಜುನ್ ಮತ್ತು ನಟ ದರ್ಶನ್ ಅವರ ಭಿನ್ನಭಿಪ್ರಾಯಗಳಿಂದ ಕುಂಟುತ್ತಾ ಸಾಗಿದ್ದ 'ಐರಾವತ' ಚಿತ್ರೀಕರಣ ಕೊನೆಗೂ ಮುಗಿಯುವತ್ತ ಮುನ್ನಡೆದಿದೆ. ಇಲ್ಲಿದೆ ಅದರ ಟ್ರೇಲರ್. ನೋಡಿ ಆನಂದಿಸಿ.
ಅನಂತ್ ನಾಗ್ ಅಭಿನಯದ ಪ್ಲಸ್ ಚಿತ್ರದ ಟ್ರೈಲರ್ದ್ಯಾವ್ರೆ ಚಿತ್ರದ ಮೂಲಕ ನಿರ್ದೇಶಕ್ಕೀಳಿದ ಗಡ್ಡ ವಿಜಿ ನಿರ್ದೇಶನದ ಎರಡನೇ ಚಿತ್ರ ಪ್ಲಸ್ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ವಿಭಿನ್ನ ಗೇಟಪ್ ನಲ್ಲಿ ಕಾಣಿಸಿಕೊಂಡಿರುವ ಅನಂತ್ ನಾಗ್ ಸ್ಟೈಲ್ ಅವರ ಅಭಿಮಾನಿಗಳಿಗೆ ಖುಷಿ ಕೊಡಲಿದೆ.
ಯಾರೇ ನೀ ಯಾರೇ ಸಪ್ನೊಂಕಿ ರಾಣಿ ಚಿತ್ರದ ಸಾಂಗ್ಸೃಜನ್ ಲೋಕೆಶ್, ಐಶ್ವರ್ಯಾ ಅಭಿನಯದ ಸಪ್ನೊಂಕಿ ರಾಣಿ ಚಿತ್ರವು ಇದೇ ತಿಂಗಳು 31ರಂದು ತೆರೆಗೆ ಬರಲು ಸಿದ್ದವಾಗಿದೆ. ಸೃಜನ್ ಐಶ್ವರ್ಯಾ ನಡುವಿನ ರೋಮಾಂಟಿಕ್ ಸಾಂಗ್ ಯಾರೇ ನೀ ಯಾರೇ.
ಮಜಾ ಸೃಜಾ ಅಭಿನಯದ 'ಸಪ್ನೊಂಕಿ ರಾಣಿ' ಟ್ರೇಲರ್ಸೃಜನ್ ಲೋಕೇಶ್ ಅಭಿನಯದ 'ಸಪ್ನೊಂಕಿ ರಾಣಿ' ಸಿನೆಮಾ ಟ್ರೇಲರ್ ಇಲ್ಲಿದೆ ನೋಡಿ. ಎ ಆರ್ ಬಾಬು ನಿರ್ದೇಶನದ ಈ ಚಲನಚಿತ್ರದಲ್ಲಿ 'ಐಶ್ವರ್ಯ' ನಾಯಕನಟಿ.
ಬಾಜಿರಾವ್ ಮಸ್ತಾನಿ ಚಿತ್ರದ ಟ್ರೈಲರ್ಭಾರತದಲ್ಲಿ ಇದೀಗ ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರಗಳು ತಯಾರಾಗುತ್ತಿವೆ. ಅದರಂತೆ 17ನೇ ಶತಮಾನದ ಮರಾಠಿ ಪೇಶ್ವೆಯ ಕಥಾಹಂದರವನ್ನು ಹೊಂದಿರುವ ಬಾಜಿರಾವ್ ಮಸ್ತಾನಿ ಸಿನಿಮಾವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಮಾಂಝಿ ದಿ ಮೌಂಟೇನ್ ಮೆನ್ ಚಿತ್ರದ ಟ್ರೈಲರ್ನೈಜ ಘಟನೆಗಳನ್ನಾದರಿಸಿದ ಚಿತ್ರಗಳು ಆಗಾಗ ತೆರೆಗೆ ಅಪ್ಪಳಿಸಿರುತ್ತವೆ. ಪ್ರೀತಿಯಲ್ಲಿ ಬಿದ್ದು ಪ್ರೇಯಸಿಯ ನೆನಪಿಗಾಗಿ ಪ್ರೇಮಿ ಎನ್ನನ್ನ ಬೇಕಾದರು ಮಾಡಲು ಸಿದ್ಧರಾಗುತ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಪತ್ನಿಯ ಸಾವಿಗೆ ಕಾರಣವಾದ 300 ಅಡಿ ಬೆಟ್ಟವನ್ನೇ ಕಡಿದು ದಾರಿ ಮಾಡಿದ ದಶರಥ ಮಾಂಝಿ ಎಂಬ ಸಾಹಸಿ ಪ್ರೇಮಿ ಕಥೆ ಇದಾಗಿದೆ. ಚಿತ್ರದ ಹೆಸರೇ ಮಾಂಝಿ-ದಿ ಮೌಂಟೇನ್ ಮೆನ್ ಅಂತ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಜನರನ್ನು ಆಕರ್ಷಿಸುತ್ತಿದೆ.
ಆರ್ ಜಿ ವಿ 'ಕಿಲ್ಲಿಂಗ್ ವೀರಪ್ಪನ್' ಟ್ರೇಲರ್ ಬಿಡುಗಡೆಭಾನುವಾರ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ ಜನ್ಮ ದಿನ. ಇದೇ ಸಂದರ್ಭದಲ್ಲಿ ಅವರ ಅಭಿನಯದ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಟ್ರೇಲರ್ ಯೂಟ್ಯೂಬ್ ನಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡ ಟ್ರೇಲರ್ ಗಿಂತ ತೆಲುಗು ಟ್ರೇಲರ್ ವೀಕ್ಷಣೆ ಭರದಿಂದ ಸಾಗಿದೆ. ಇಗೋ ಇಲ್ಲಿದೆ ನೋಡಿ ಕನ್ನಡದ ಟ್ರೇಲರ್.
ಆರಂಭ ಚಿತ್ರದ ಪ್ರೋಮೋವಿವಾದಾತ್ಮಕ ದೃಶ್ಯಗಳಿಂದಲೇ ಸುದ್ದಿಗೆ ಗ್ರಾಸವಾಗಿದ್ದ ನಿರ್ದೇಶಕ ಎಸ್ ಹನಕೆರೆ ನಿರ್ದೇಶನದ ಆರಂಭ ಚಿತ್ರದ ಪ್ರೋಮೋ ಬಿಡುಗಡೆಯಾಗಿದೆ. ಚಿತ್ರ ಜುಲೈ 3ರಂದು ತೆರೆಕಾಣಲಿದೆ.
ರಾಜ"ಯೋಗ"ಕನ್ನಡದ ವರನಟ ಡಾ.ರಾಜ್ ಕುಮಾರ್ ತಮ್ಮ ಇಳಿವಯಸ್ಸಿನಲ್ಲಿಯೂ ದೇಹವನ್ನು ಸಮತೋಲನದಲ್ಲಿಟ್ಟುಕೊಂಡು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೆಂದರೆ ಅದಕ್ಕೆ ಕಾರಣ ಅವರ ಯೋಗಾಭ್ಯಾಸ. ಎಷ್ಟೇ ದೂರದಲ್ಲಿದ್ದರೂ ಅಥವಾ ಎಷ್ಟೇ ಕೆಲಸದಲ್ಲಿ ಮಗ್ನರಾಗಿದ್ದರೂ ದಿನದಲ್ಲಿ ಕನಿಷ್ಟ ಒಂದು ತಾಸಾದರೂ ರಾಜ್ ಕುಮಾರ್ ಅವರು ಯೋಗ ಮಾಡುತ್ತಿದ್ದರಂತೆ. ಅವರ ಕಠಿಣ ಯೋಗಾಭ್ಯಾಸಕ್ಕೆ ಸಾಕ್ಷಿ ಎನ್ನುವಂತಿದೆ ಅವರ ನಟನೆಯ "ಕಾಮನಬಿಲ್ಲು" ಚಿತ್ರದ ಈ ದೃಶ್ಯ. ಅಂದಹಾಗೆ ಈ ದೃಶ್ಯಾವಳಿಗಳನ್ನು ಚಿತ್ರೀಕರಿಸುವ ಹೊತ್ತಿಗೆ ಅವರ ವಯ್ಯಸ್ಸು 54 ವರ್ಷ..!
ಬಜರಂಗಿ ಭಕ್ತನಾಗಿ ಸಲ್ಮಾನ್ ಖಾನ್! ಬಜರಂಗಿ ಭಾಯಿಜಾನ್ ಅಧಿಕೃತ ಟ್ರೈಲರ್ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಹುನಿರೀಕ್ಷೀತ ಬಜರಂಗಿ ಭಾಯಿಜಾನ್ ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ಸಲ್ಮಾನ್ ಖಾನ್ ಬಜರಂಗಿಯಾಗಿ ಮಿಂಚಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಅಕ್ಷಯ್ ಕುಮಾರ್ 'ಬ್ರದರ್ಸ್' ಟ್ರೈಲರ್ ಯೂಟೂಬ್ ನಲ್ಲಿ ಸಂಚಲನಬಾಲಿವುಡ್ ನ ಬಹುನಿರೀಕ್ಷಿತ ಚಿತ್ರಗಳೊಂದಾದ ಅಕ್ಷಯ್ ಕುಮಾರ್ ಅಭಿನಯದ ಬ್ರದರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟೂಬ್ ನಲ್ಲಿ ಸಂಚಲನ ಮೂಡಿಸಿದೆ. ಬಿಡುಗಡೆಯಾದ 16 ಗಂಟೆಯಲ್ಲೇ 10 ಲಕ್ಷಕ್ಕೂ ಅಧಿಕ ಮಂದಿ ಟ್ರೈಲರ್ ವೀಕ್ಷಿಸಿದ್ದಾರೆ.
ಕೊಲವೆರಿ ಡಿ ಧನುಷ್ ಹಾಡಿಗೆ ಶಿವಣ್ಣ ಸ್ಟೆಪ್ಕಾಲಿವುಡ್ ನಲ್ಲಿ ಕೊಲವೆರಿ ಡಿ ಅಂತ ಹಾಡಿದ್ದ ಧನುಷ್ ಕಂಠ ಸಿರಿಗೆ ಯುವ ಜನತೆ ಮಾರುಹೋಗಿತ್ತು. ಅದೇ ರೀತಿ ವಜ್ರಕಾಯ ಚಿತ್ರದಲ್ಲಿ ನೋ ಪ್ರಾಬ್ಲಮ್ ಹಾಡಿಗೆ ಧನುಷ್ ಧ್ವನಿಯಾಗಿದ್ದು ಹಾಡು ಯರ್ರಾ ಬಿರ್ರಿ ಹಿಟ್ ಆಗಿದೆ. ಹುಡುಗರು ತಮ್ಮ ಹುಡುಗಿಯರನ್ನು ನೆನೆಸಿಕೊಂಡು ಈ ಹಾಡನ್ನು ಎಡೆಬಿಡದೆ ಗುನುಗುತ್ತಿದ್ದಾರೆ. ಹರ್ಷ ನೃತ್ಯ ಕಂಪೂಸ್ ಮಾಡಿದ್ದು ಶಿವರಾಜ್ ಕುಮಾರ್ ಸಾಂಗ್ ನಲ್ಲಿ ಸಖತ್ತಾಗೆ ಕುಣಿದಿದ್ದಾರೆ.
ಬುಲೆಟ್ ಬಸ್ಯಾ ಬರ್ತಾನೆ ಜಾಗ ಬಿಡಿ!ಜಯತೀರ್ಥ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬುಲೆಟ್ ಬಸ್ಯಾದಲ್ಲಿ ಕಾಮಿಡಿ ಕಿಂಗ್ ಶರಣ್ ಅಭಿನಯಿಸುತ್ತಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಹಳ್ಳಿ ಸೊಗಡಿನ ಮಸ್ತ್ ಕಾಮಿಡಿ ಚಿತ್ರ ಇದಾಗಿದೆ. ಬುಲೆಟ್ ಬಸ್ಯಾನಿಗೆ ಹರಿಪ್ರಿಯ ಸಾಥ್ ನೀಡುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಕಂಪೋಸ್ ಮಾಡಿದ್ದಾರೆ.
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!