ತಾಮ್ರ ಇಲ್ಲವೇ ಹಿತ್ತಾಳೆ ಪಾತ್ರೆ ತೊಳೆಯುವಾಗ ಸ್ವಲ್ಪ ಟೊಮೇಟೊ ಕೆಚ್‌ಅಪ್ ಹಾಕಿ ತಿಕ್ಕಿ. ಇದರಿಂದ ಪಾತ್ರೆಗೆ ಉತ್ತಮ ಹೊಳಪು ಬರುತ್ತದೆ.
ಮಕ್ಕಳ ಸಮವಸ್ತ್ರದಲ್ಲಿ ಇಂಕಿನ ಕಲೆಯಾಗುವುದು ಸಾಮಾನ್ಯ. ಇದನ್ನು ತೆಗೆಯಲು ಒಡೆದ ಹಾಲನ್ನು ಹಾಕಿ ಚೆನ್ನಾಗಿ ತಿಕ್ಕಿ. ಬಳಿಕ ಒಳ್ಳೆಯ ನೀರಿನಿಂದ ಒಗೆದು ಹಾಲಿನ ವಾಸನೆ ತೆಗೆಯಿರಿ.
ಅಡುಗೆಮನೆಯ ಸಿಂಕ್ ವಾಸನೆ ಬರುತ್ತಿದ್ದರೆ ಸ್ವಲ್ಪ ಕಾಫಿ ಪೌಡರ್ ಹಾಕಿ. ನಂತರ ಬಿಸಿನೀರು ಸುರಿಯಿರಿ. ವಾಸನೆ ಮಂಗಮಾಯವಾಗುತ್ತದೆ.
ಸದಾ ಕಾಲ ಕಿಟಕಿ ಬಾಗಿಲು ತೆಗೆದಿಡಿ. ಒಳ್ಳೆಯ ಗಾಳಿ ಒಲ ಬಂದರೆ ಹಾಸಿಗೆ ಬಟ್ಟೆ ವಾಸನೆ ಬರದೆ ಸದಾ ಫ್ರೆಶ್ ಆಗಿರುತ್ತವೆ.
ಮಕ್ಕಳು ಗೋಡೆಯ ತುಂಬಾ ಬೇಡದ ಸ್ಟಿಕ್ಕರ್ಸ್ ಅಂಟಿಸಿ ಅಲ್ಲೆಲ್ಲ ಗಮ್‌ನ ಕಲೆಗಳಾಗಿದ್ದರೆ ವಿನೆಗರ್‌ನಿಂದ ಉಜ್ಜಿ 15 ನಿಮಿಷಗಳ ಕಾಲ ಬಿಟ್ಟು ಸ್ವಚ್ಛಗೊಳಿಸಿ.