

ಸರಿಯಾಗಿ ನಿದ್ರೆಯಾಗದಿದ್ದರೆ ನರಕಯಾತನೆ ತಪ್ಪಿದ್ದಲ್ಲ. ನಿದ್ರಾಹೀನತೆ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಆರೋಗ್ಯಕ್ಕೂ ಅಡ್ಡಿಯೇ. ಅಷ್ಟೇ ಅಲ್ಲ, ನಮ್ಮ ದಿನಚರಿಯಲ್ಲೂ ಏರಿಳಿತ ಆಗುತ್ತದೆ. ಹೀಗಾಗಿ ನಿತ್ಯ ಕನಿಷ್ಠ ಆರು ಗಂಟೆ ನಿದ್ರೆ ಅಗತ್ಯವಾಗಿ ಬೇಕೇ ಬೇಕು.
ಕಷ್ಟಪಡುವವನಿಗೆ ಬೀದಿಯಲ್ಲಿದ್ದರೂ ನಿದ್ರೆ ಬರುವಂತೆ, ಎಸಿ ಅಥವಾ ನಾನ್ ಎಸಿ ಹೊಂದಿರುವ ಕಂಪನಿಗಳಲ್ಲಿ ಕೆಲಸ ಮಾಡಿ ಸುಸ್ತಾಗಿ ಬಂದಿರುವವರಿಗೆ ನಿದ್ರೆ ಬರಬೇಕಲ್ಲ... ಅದು ಸ್ವಲ್ಪ ದುಸ್ತರವಾದ ಕೆಲಸವೇ. ಇನ್ನು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡಿ ಬಂದವರ ಕಥೆಯಂತೂ ಹೇಳತೀರದು.
ಹೀಗಾಗಿ ಕೆಲಸ ಮಾಡಿ ಆರಾಮದಾಯಕವಾಗಿ ಸುಖ ನಿದ್ರೆಗೆ ಜಾರಲು ಅದಕ್ಕೆ ತಕ್ಕದಾದ ವಾತಾವರಣವೂ ಇರಬೇಕು. ಅದಕ್ಕೆಂದು ನಮಗೆ ನಮ್ಮದೆಯಾದ ಬೆಡ್ರೂಮ್ ಇದ್ದರೆ ಚೆನ್ನ. ಅದರೊಟ್ಟಿಗೆ ಅಲ್ಲಿನ ವಾತಾವರಣವೂ ನಿದ್ರೆಗೆ ಜಾರುವಂತಿದ್ದರೆ ಇನ್ನೂ ಚೆನ್ನ. ಹಾಗಾದರೆ ಸುಖ ನಿದ್ರೆಗೆ ಜಾರಲು ಕೆಲವೊಂದು ಟಿಪ್ಸ್ಗಳನ್ನು ಪಾಲಿಸಿದರೆ ಸಾಕು...