ಮಾರ್ಕೆಟ್ ನ್ಯೂಸ್

ಮಾರ್ಕೆಟ್ ನ್ಯೂಸ್
Updated on: 

ಜಾನ್ಸನ್ ತರಹೇವಾರಿ ಟೈಲ್ಸ್
ಭಾರತದ ಸೆರಾಮಿಕ್ ಟೈಲ್ಸ್ ಉತ್ಪಾದನೆಯ ಮುಂಚೂಣಿ ಕಂಪನಿಗಳ ಪೈಕಿ ಒಂದಾಗಿರುವ ಜಾನ್ಸನ್ ಟೈಲ್ಸ್ ಸಂಸ್ಥೆ ಹೊಸ ಬಗೆಯ, ವಿನೂತನ ಶೈಲಿಯ ಇಂಟರ್‌ಲಾಕಿಂಗ್ ಟೈಲ್ಸ್‌ಗಳನ್ನು ಬಿಡುಗಡೆ ಮಾಡಿದೆ. 'ಇವು ಉತ್ಕೃಷ್ಟ ದರ್ಜೆಯ ಟೈಲ್ಸ್‌ಗಳು' ಎನ್ನುವುದು ಕಂಪನಿ ಹೇಳಿಕೆ.
ಇಂಟರ್‌ಲಾಕಿಂಗ್ ಟೈಲ್ಸ್‌ಗಳನ್ನು ಮನೆಯ ಒಳಗೆ, ಹೊರಗಿನ ಗೋಡೆ, ಅಡುಗೆ ಮನೆ, ಮೊಗಸಾಲೆ, ವರಾಂಡ, ಉದ್ಯಾನ, ಮೆಟ್ಟಿಲು, ಬಚ್ಚಲು ಮನೆ ಸೇರಿದಂತೆ ಎಲ್ಲೇ ಅಳವಡಿಸಿದರೂ ಅದಕ್ಕೆ ಹೊಸತನವನ್ನು ನೀಡುತ್ತದೆ. ಜತೆಗೆ ಇವು ಕಲಾತ್ಮಕ ಲುಕ್ ನೀಡಬಲ್ಲವು. ಇಂಟರ್‌ಲಾಕಿಂಗ್ ಟೈಲ್ಸ್ 300 ರಿಂದ 450 ಡಿಸೈನ್‌ಗಳಲ್ಲಿ ಲಭ್ಯ. ಬೆಲೆ ಚದರ ಅಡಿಗೆ 105.
ವೈನಾದ ಫ್ರಿಡ್ಜ್
ಆಹಾರ ಪದಾರ್ಥಗಳು ಕೆಡದಂತೆ ಮನೆಯಲ್ಲಿ ಫ್ರಿಡ್ಜ್ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ, ಈಗ ವೈನ್, ಬಿಯರ್ ಸೇರಿದಂತೆ ಇನ್ನಿತರ ಪಾನೀಯಗಳನ್ನು ತಂಪಾಗಿ ಇಡಲೂ ಫ್ರಿಡ್ಜ್ ಬಂದಿದೆ. ಇದಕ್ಕೆ ಯಾವುದೇ ಬಗೆಯ ಹಿಡಿಕೆಗಳಿಲ್ಲ. ಬೆರಳುಗಳಿಂದ ಫ್ರಿಡ್ಜ್ ಬಾಗಿಲುಗಳಿಗೆ ಸ್ಪರ್ಶಿಸಿದರೆ ಸಾಕು, ನಿಮ್ಮ ವೈನಾದ ಏರ್‌ಕೂಲರ್ ಬಾಗಿಲು ತೆರೆಯುತ್ತದೆ. ಹೆಚ್ಚು ಕಷ್ಟಪಡುವ ಪ್ರಮಯವೇ ಇಲ್ಲ. ಜತೆಗೆ ಇದು ಬರೀ ವೈನ್ ಫ್ರಿಡ್ಜ್ ಅಲ್ಲ, ಟೇಬಲ್ ಕೂಡ ಹೌದು. ಕೆಳಗಿನಿಂದ ಬಾಟಲ್ ತೆಗೆದುಕೊಂಡು ಅದರ ಮೇಲೆಯೇ ಇಟ್ಟು ಕುಡಿಯುವ ವ್ಯವಸ್ಥೆಯೂ ಇದೆ. ಅಂದಹಾಗೆ ಇಂತಹ ವೈನ್ ಫ್ರಿಡ್ಜ್ ಅನ್ನು ಇಟಲಿಯನ್ ವಿನ್ಯಾಸದಲ್ಲಿ ಲ್ಯುಕಾ ಟ್ರಾಜ್ಜಿ ಎನ್ನುವ ಕಂಪನಿ ಸ್ಟೀಲ್ ಮತ್ತು ಟೈಟಾನಿಯಂನಿಂದ ತಯಾರಿಸಿದೆ. ಇದರ ಬೆಲೆ ಎಷ್ಟು ಗೊತ್ತೆ? ಬರೀ 8.25 ಲಕ್ಷ! ರೇಟ್ ನೋಡಿದ್ರೆ ಔಟ್ ಆಗಬೇಕು ಅಲ್ಲವೆ!!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com