'ಪಾಟ್‌' ಟೈಮ್

Updated on: 

ಡೆಮಾ ಕಂಪನಿಯವರು ಇತ್ತೀಚೆಗೆ ಅಡುಗೆಮನೆಗೊಂದು ಹೊಸ ಪಾಟ್ ರೂಪಿಸಿದ್ದಾರೆ. ಇದಕ್ಕೆ ಮಿಕ್ಸೆಡ್ ಹರ್ಬ್ಸ್ ಪಾಟ್ ಎಂದು ಹೆಸರು. ಇದರಲ್ಲಿ ಅಡಗಿಸಿಡುವ ಯಾವ ಪದಾರ್ಥವೂ ಬೇಗನೆ ಕೆಡುವುದಿಲ್ಲ. ಅಷ್ಟೇ ಅಲ್ಲ, ಇದು ತನ್ನ ಮೈಮಾಟದಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ. ಅಷ್ಟು ಅಂದವಾಗಿ ಇದನ್ನು ರೂಪಿಸಲಾಗಿದೆ. ಈ ಡಬ್ಬಿಯನ್ನು ಸೀಲ್ ರಬ್ಬರ್‌ನಿಂದ ರೂಪಿಸುವುದರಿಂದ ಇದರಲ್ಲಿ ಪದಾರ್ಥ ಯಾವಾಗಲೂ ಫ್ರೆಶ್ ಆಗಿರುತ್ತದೆ. ಅಂದಹಾಗೆ ಇದರ ಮೌಲ್ಯ ರು. 495 ಮಾತ್ರ.

ಫ್ರೆಂಚ್ ಗಡಿಯಾರ
ಬಹುಶಃ ಈ ಗಡಿಯಾರವನ್ನು ನೋಡಿದರೆ ತುಂಬಾ ಹಳೆಯದರಂತೆ ಕಾಣುತ್ತದೆ. ಅದರಲ್ಲಿ ಅನುಮಾನವೇ ಬೇಡ. ಆದರೆ, ಇದರ ವಿನ್ಯಾಸವೇ ಹೀಗೆ. ಈ ಗಡಿಯಾರ ಫ್ರೆಂಚ್ ಮಾದರಿಯಾಗಿದ್ದು ರೋಜರ್ ಲ್ಯಾಸೆಲ್ಸ್ ಫ್ರೆಂಚ್ ಎಂಬ ಹೆಸರಿನಿಂದ ಕರೆಯುತ್ತಾರೆ. ಇಂಗ್ಲೆಂಡಿನಲ್ಲಿ ಈ ಗಡಿಯಾರ ರೆಡಿಯಾಗುತ್ತದೆ. ಉತ್ಪಾದಕ ಸಂಸ್ಥೆ ರೋಜರ್ ಲ್ಯಾಸೆಲ್ಸ್. ಅಂದಹಾಗೆ ಇದರ ಬೆಲೆ 5,402.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com