ಏನಾದಾರೂ
ಹೇಳುವುದಾದರೆ ಹೇಳಿ
ಅನ್ನುತ್ತಲೇ...
ತುಟಿಗೆ ತುಟಿ ಒತ್ತಿದರು,
ಅರ್ಪಿಸುವ ಮುನ್ನ
ಕೈ ಹಾಕುವುದೆಷ್ಟು ಚೆನ್ನ?
ಅಧಿಕಾರ ಉಳ್ಳವರಿಗೆ
ಹೇಗೆ ಹೇಳಲಿ?
ಎರಡೆರಡು ಉಡುಗೊರೆ
ಕೈಗಿತ್ತು...
ಏನು ಬೇಕಾದರೂ ಕೇಳು ಅಂದರು,
ತರುವ ಮುನ್ನ
ಕರೆದೊಯ್ಯಬಾರದೇ ನನ್ನ!
ಬಿಡಿಸಿ ಬಿಡಿಸಿ
ಹೇಗೆ ಹೇಳಲಿ?
ನವಿಲು ನರ್ತಿಸಿದಂತೆ
ನರ್ತಿಸುವುದು ಬೇಡ,
ಕೇಳಿ, ಹೇಳಿ, ಚರ್ಚಿಸಿ
ಮಹತ್ವ ಕೊಟ್ಟಂತೆ ನಟಿಸಿದರೆ ಸಾಕು,
ಬದುಕಿನ ಬಂಡಿ ಸಾಗಿಬಿಡುವುದು
ಹೆಚ್ಚು ತಿಳಿದವರಿಗೆ
ಹೇಗೆ ಹೇಳಲಿ?
-ಅಸಾದುಲ್ಲಾ ಬೇಗ್