ಬೆಳಗ್ಗೆ ಎದ್ದ ಕೂಡಲೇ ಚಹಾ/ಕಾಫಿ ಸೇವಿಸಿದರೆ ನಿತ್ಯ ಚಟುವಟಿಕೆ ಚುರುಕು ಮುಟ್ಟಿಸುತ್ತದೆ. ಆದರೆ, ಮನೆಯಲ್ಲಿ ಸುಮಾರು ಜನರಿದ್ದು ಒಬ್ಬೊಬ್ಬರಿಗೆ ಟೀ/ಕಾಫಿ ಮಾಡುವುದು ಹೆಂಗಸರಿಗೆ ಕಷ್ಟ ಎನ್ನುವುದಕ್ಕಿಂತ ಬೇಸರದ ಕೆಲಸ. ಹೀಗಾಗಿ ಒಮ್ಮೇಲೆ ಟೀ/ಕಾಫಿ ಮಾಡಿಟ್ಟರೆ? ಅದರ ರುಚಿಯೇ ಹೋಗಿಬಿಡುತ್ತದೆ ಎನ್ನುವವರು ಜಾಸ್ತಿ. ಇದಕ್ಕಾಗಿ ಥಾಯ್ಲೆಂಡ್ ಕಂಪನಿಯೊಂದು ಹೊಸ ಕಿಟಲ್ವೊಂದನ್ನು ತಯಾರಿಸಿದೆ. ಇದರ ಸಾಮರ್ಥ್ಯ 1.5 ಲೀ.ನಿಂದ 2 ಲೀ.ವರೆಗೆ ಟೀ ಸಂಗ್ರಹಿಸಬಹುದು. ಇದು ನೋಡಲು ಎಷ್ಟು ಆಕರ್ಷಣೆಯಾಗಿದೆಯೋ ಅಷ್ಟೇ ಟೀ/ಕಾಫಿಯ ರುಚಿಯನ್ನು ಹಾಗೆ ತುಂಬಾ ಹೊತ್ತಿನವರೆಗೆ ಶೇಖರಿಸಿಟ್ಟಿರುತ್ತದೆ. ಇದರ ಬಾಳಿಕೆಯೂ ಜಾಸ್ತಿ. ನಿರ್ವಹಣೆ, ತೊಳೆಯುವುದು ಕೂಡ ತುಂಬಾ ಸರಳ. ಉತ್ಕೃಷ್ಟ ದರ್ಜೆಯ ಸ್ಟೇನ್ಲೆಸ್ ಸ್ಟೀಲ್ ಅನ್ನು ಇದಕ್ಕೆ ಬಳಕೆ ಮಾಡಲಾಗಿದೆ. ಅಂದಹಾಗೆ ಇದರ ಮೌಲ್ಯ 1395 ಮಾತ್ರ!