ಫ್ಲೋರಿಂಗ್ ಕ್ಷೇತ್ರಗಳಲ್ಲಿ ಅಗ್ರಗಣ್ಯ ಎಂದೇ ಪರಿಗಣಿತವಾಗಿರುವ ಸ್ಕ್ವೇರ್ಫೂಟ್ನಿಂದ ಮಕ್ಕಳ ಕೋಣೆಗಳಿಗೆ ಮೀಸಲಾಗಿ ಇರುವ ವಿಶೇಷ ಫ್ಲೋರಿಂಗ್ ಮಾರುಕಟ್ಟೆಗೆ ಬಂದಿದೆ. 'ವಿನೈಲ್ ಫ್ಲೋರಿಂಗ್ ಶ್ರೇಣಿ' ಎಂಬ ಹೆಸರಿನ ಈ ಶ್ರೇಣಿ ಪ್ಯಾಸ್ಟೆಲ್ ಕಲರ್ಗಳು ಮತ್ತು ಆಕರ್ಷಕ ಛಾಯೆಗಳನ್ನೊಳಗೊಂಡ ಶ್ರೇಣಿ ಅಳವಡಿಸಿದಾಗ ಚಲನಚಿತ್ರ ಮತ್ತು ಟಿವಿಯಲ್ಲಿ ಕಾರ್ಯಕ್ರಮ ನೋಡುವಾಗ ಮಕ್ಕಳ ಕುಣಿತದ ಸದ್ದು ಕಿವಿಗೆ ಬೀಳುವುದಿಲ್ಲ. ಮಕ್ಕಳು ಜಾರಿಬಿದ್ದರೆ ಗಾಯವಾಗದಂತೆ ಮೆತ್ತಗಿರುವ ಈ ಫ್ಲೋರಿಂಗ್ ಜಾರದಂತೆ ವಿನ್ಯಾಸಗೊಳಿಸಲಾಗಿದೆ.