

ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಹೌಸಿಂಗ್ ಡೆವೆಲಪ್ಮೆಂಟ್ ಸಂಸ್ಥೆಯು ದೀಪಾವಳಿ ಹಬ್ಬಕ್ಕೆ ಹೊಸದೊಂದು ಆಫರ್ ನೀಡಿದೆ. ಟಾಟಾ ಡೆವೆಲಪರ್ಸ್ನವರದ್ದೇ ಅಂಗಸಂಸ್ಥೆಯಾಗಿರುವ ಸ್ಮಾರ್ಟ್ ವ್ಯಾಲ್ಯೂ ಹೋಮ್ಸ್ ವತಿಯಿಂದ ಈ ಆಫರ್ ನೀಡಲಾಗುತ್ತಿದೆ.
ಡೌನ್ ಪೇಮೆಂಟ್ ಕೇವಲ ಒಂದು ಲಕ್ಷ ರುಪಾಯಿ ಪಾವತಿಸಿದರೆ ಸಾಕು, ಮನೆ ನಿಮ್ಮದಾಗುತ್ತದೆ. ಜೊತೆಗೆ 22 ಕಂತುಗಳಲ್ಲಿ ರು. 28,000 ತುಂಬಬಹುದು. ಇದಕ್ಕೆ ಯಾವುದೇ ರೀತಿಯ ಬಡ್ಡಿಯನ್ನೂ ಸಂಸ್ಥೆ ವಿಧಿಸುತ್ತಿಲ್ಲ. ಇದು ಬೇಡವಾದರೆ, ರು. 2,50,000 ಹಣವನ್ನು ನಾಲ್ಕು ಬುಲೆಟ್ ಕಂತುಗಳಲ್ಲಿ ಗ್ರಾಹಕರು ತುಂಬಬಹುದು. ಈ ಆಫರ್ ನವೆಂಬರ್ 5ರವರೆಗೆ ಮಾತ್ರ ಲಭ್ಯವಿದೆ. ಇದು ಮುಂಬರುತ್ತಿರುವ ದೀಪಾವಳಿ ಹಬ್ಬಕ್ಕಾಗಿ ಸ್ಮಾರ್ಟ್ ವ್ಯಾಲ್ಯೂ ಹೋಮ್ಸ್ ಗ್ರಾಹಕರಿಗೆ ನೀಡುತ್ತಿರುವ ಹೊಸ ಕೊಡುಗೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಮಾರ್ಟ್ ವ್ಯಾಲ್ಯೂ ಹೋಮ್ಸ್ ತನ್ನ ಅಪಾರ್ಟ್ಮೆಂಟ್ ಅನ್ನು ತುಮಕೂರು ರಸ್ತೆಯಲ್ಲಿರುವ ಗೋಲ್ಡನ್ ಪಾಮ್ ರೆಸಾರ್ಟ್ ಸಮೀಪವಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ನ್ಯೂ ಹೆವನ್ ಎಂಬ ಹೆಸರಿನಲ್ಲಿ ಈ ಅಪಾರ್ಟ್ಮೆಂಟ್ ಅನ್ನು ರೂಪಿಸಲಾಗುತ್ತಿದೆ. ಈಗಾಗಲೇ ಸ್ಮಾರ್ಟ್ ವ್ಯಾಲ್ಯೂ ಹೋಮ್ಸ್ ಸಂಸ್ಥೆಯ ನ್ಯೂ ಹೆವನ್ ಎಂಬ ಅಪಾರ್ಟ್ಮೆಂಟ್ಗಳನ್ನು ಅಹ್ಮದಾಬಾದ್ನಲ್ಲೂ ರೂಪಿಸುತ್ತಿದೆ.