

ಮನಸ್ಸಿನಲ್ಲಿರುವಂತೆ ಮನೆ ರೂಪುಗೊಳ್ಳುವುದು ಕೆಲವೊಮ್ಮೆ ಕಷ್ಟ. ಕಟ್ಟಡ ವಿನ್ಯಾಸಕಾರರೂ ಲೇಟೆಸ್ಟ್ ಟ್ರೆಂಡ್, ಫ್ಯಾಶನ್, ಹಳೆಯ ವಿನ್ಯಾಸ ಹೀಗೆ ಹತ್ತಾರು ಕಾರಣಗಳನ್ನು ಹೇಳಿ ಕನಸಿನ ಸೂರು ಹೀಗೆಯೇ ಇರಬೇಕೆಂಬ ಆಶಯಕ್ಕೆ ತಣ್ಣೀರು ಎರಚುತ್ತಾರೆ.
ಅಷ್ಟೇ ಅಲ್ಲ, ಒಮ್ಮೆ ಕಟ್ಟಡ ವಿನ್ಯಾಸ ಮಾಡಿದ ಮೇಲೆ ಅದರಂತೆಯೇ ಕಟ್ಟಡ ರೂಪಿಸಲು ಆರ್ಕಿಟೆಕ್ಟರ್‌ಗಳು ಹವಣಿಸುತ್ತಾರೆಯೇ ಹೊರತು, ಅದರಲ್ಲಿ ನಿಮಗೆ ಇಷ್ಟವಾದ ಅಂಶಗಳನ್ನು ಸೇರಿಸಲು ಇಷ್ಟಪಡುವುದಿಲ್ಲ. ಇದರಿಂದ ಸ್ವಂತ ಮನೆ ಕಟ್ಟಿಸಿದರೂ ವಿನ್ಯಾಸದಲ್ಲಿ ನಿಮಗೆ ವಿಭಿನ್ನತೆ ಕಾಣಸಿಗದು. ಒಂದು ವೇಳೆ ಸೂರು ಸಂಪೂರ್ಣವಾದ ಮೇಲೆ ಅದರಲ್ಲಿ ಮೊಡಿಫೈ ಮಾಡಲು ಹೊರಟರೆ ವೆಚ್ಚ ತೆರಬೇಕು. ಇದು ತೀರಾ ಇತ್ತೀಚೆಗೆ ಮನೆ ಕಟ್ಟಿಸಿದವರಿಗೆ ಅನುಭವಕ್ಕೆ ಬಾರದೇ ಇರದು. ಹಾಗಾದರೆ ನಿಮ್ಮ ಇಚ್ಛೆಯಂತೆ ಮನೆ ಕಟ್ಟುವ ಮುನ್ನ ಏನು ಕ್ರಮ ಕೈಗೊಂಡಿರಬೇಕು? ಯಾವ ಅಂಶಗಳತ್ತ ಗಮನ ಹರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.