ಮಹಿಳೆ-ಮನೆ-ಬದುಕು

ಶೌಚ ಕಟ್ಟಿದರಷ್ಟೇ ಗಂಡನ ಮನೆಗೆ ಕಾಲಿಡ್ತೀವಿ!

ಶೌಚ ಕಟ್ಟಿದರಷ್ಟೇ ಗಂಡನ ಮನೆಗೆ ಕಾಲಿಡ್ತೀವಿ!
Published On :

ಲಖನೌ: ದೇಶದೆಲ್ಲೆಡೆ ಶೌಚಾಲಯ ನಿರ್ಮಾಣವಾಗಬೇಕೆಂದು ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯೋತ್ಸ ದಿನದಂದು ಮಾಡಿದ ಭಾಷಣ ಸಾಕಷ್ಟು ಜನರಿಗೆ ಪ್ರೇರೇಪಣೆ ನೀಡಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಕುಶಿನಗರ್ ಜಿಲ್ಲೆಯ ಕೆಲ ಗ್ರಾಮಗಳಲ್ಲಿನ ನವವಧುಗಳು ಶೌಚಾಲಯಕ್ಕಾಗಿ ಹೊಸ ಆಂದೋಲನವನ್ನೇ ಶುರು ಮಾಡಿದ್ದಾರೆ.

ಕುತೂಹಲಕಾರಿ ವಿಚಾರವೆಂದರೆ, ಮದುವೆಯಾಗಿ ಇತ್ತೀಚೆಗಷ್ಟೇ ಅತ್ತೆ ಮನೆಗೆ ಬಂದಿರುವ ಸುಮಾರು 6 ಜನ ನವವಧುಗಳು ಮನೆಯಲ್ಲಿ ಶೌಚಾಲಯ ಕಟ್ಟುವವರೆಗೆ ಮನೆಗೆ ಕಾಲಿಡುವುದಿಲ್ಲ ಎಂಬ ಹಠ ತೊಟ್ಟು ತವರು ಮನೆಗೆ ವಾಪಸ್ ಹೋಗಿದ್ದಾರೆ. ಒಂದೆರಡು ವಾರಗಳ ಹಿಂದಷ್ಟೇ ಬಂದಿರುವ ಸೊಸೆಯಂದಿರು ಹೀಗೆ ಏಕಾಏಕಿ ಶೌಚಾಲಯಕ್ಕಾಗಿ ಆಗ್ರಹಿಸಿ. ಮನೆ ತೊರೆದಿದ್ದು ಗಂಡನ ಮನೆಯವರನ್ನು ದಿಗಿಲುಗೊಳಿಸಿದೆ.

ಈ ವಿಚಾರ ತಿಳಿದ ಸುಲಭ್ ಶೌಚಾಲಯ ನಿರ್ಮಾತೃ ಡಾ.ಬಿಂದೇಶ್ವರ ಪಾಠಕ್ ಅವರು, ಮನೆ ತೊರೆದ ನವವಧುಗಳ ಆಗ್ರಹದಂತೆ ಅವರ ಅತ್ತೆ ಮನೆಗಳಲ್ಲಿ ಶೌಚಾಲಯ ಕಟ್ಟಿಸಲು ಮುಂದೆ ಬಂದಿದ್ದಾರೆ. ಈ ಹುಡುಗಿಯರ ಧೈರ್ಯ ಇಡೀ ಉತ್ತರಪ್ರದೇಶದ ತುಂಬೆಲ್ಲಾ ಪ್ರತಿಧ್ವನಿಸುತ್ತಿದೆ. ಇದು ತುಂಬಾ ಒಳ್ಳೆಯ ವಿಚಾರ ಎಂದು ಪಾಠಕ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.