

ಬಾತ್ ರೂಂ ಹೇಗಿರಬೇಕು ಎಂದರೆ ಅದೇ ಬೆಡ್‌ರೂಮೇನೋ ಎನ್ನುವಷ್ಟು ಕನ್‌ಫ್ಯೂಸ್ ಹುಟ್ಟಿಸುವಂತಿರಬೇಕು. ಸ್ನಾನ ಮುಗಿದ ಮೇಲೂ ಹೊರಗೆ ಹೆಜ್ಜೆಯಿಡಲು ಮನಸು ನಿರಾಕರಿಸಬೇಕು. ಆದರೆ, ಇವೆಲ್ಲ ಹೈಟೆಕ್ ಬಾತ್‌ರೂಮಿನಲ್ಲಷ್ಟೇ ಸಾಧ್ಯವಾ? ಎಂಬ ಪ್ರಶ್ನೆ ಹುಟ್ಟಬಹುದು. ಇರುವ ಮಾಮೂಲಿ ಬಾತ್‌ರೂಮಿನಲ್ಲೂ ಅಂಥ ವಾತಾವರಣ ಕ್ರಿಯೇಟ್ ಮಾಡುವುದೂ ಒಂದು ಕಲೆ. ಹಾಗಾದರೆ ಬನ್ನಿ...
ಮಾದರಿ ಬಾತ್‌ರೂಮನ್ನು ರೂಪಿಸುವುದು ಹೇಗೆಂಬುದನ್ನು ತಿಳಿಯೋಣ...
* ದಿನ ಬಿಟ್ಟು ದಿನ ಬಾತ್ ರೂಂನ ಕಸ ಎಸೆಯಿರಿ. ಡಸ್ಟ್‌ಬಿನ್‌ನಲ್ಲಿ ಒದ್ದೆ ಕಸವಿರೋದು ಬೇಡ.
* ಬಾತ್‌ರೂಂಗೂ ಎಕ್ಸಾಸ್ಟ್ ಫ್ಯಾನ್, ಸೂಕ್ತ ವೆಂಟಿಲೇಷನ್ ಇರಲಿ.
* ಸುವಾಸನೆ ಬೀರುವಂಥ ಕ್ಯಾಂಡಲ್‌ಗಳನ್ನು ಬಾತ್‌ರೂಂನ ಸೆಲ್ಫ್‌ನಲ್ಲಿಡಿ. ಬೇಕಾದಾಗ ಮಾದ್ರ ಹಚ್ಚಿದರೆ ಸಾಕು.
* ಪಾಟ್‌ಪೌರ್ರಿಗಳನ್ನು ಇಡೋದು ಒಳ್ಳೆಯದು. ಇದು ಸ್ನಾನ ಮಾಡಿದಾಗ ಉಂಟಾದ ಹಬೆಯಿಂದ ಗಾಳಿಯನ್ನು ತಾಜಾಗೊಳಿಸುತ್ತದೆ.
* ಯಾವುದಾದರೂ ಮೂಲೆಯಲ್ಲಿ ಬೇಕಿಂಗ್ ಸೋಡಾವನ್ನಿಡಿ. ಇದು ದುರ್ವಾಸನೆಯನ್ನು ಹೊಡೆದೋಡಿಬಲ್ಲದು.
* ವಿನಿಗರ್ ಸಹ ದುರ್ನಾತವನ್ನು ಹೋಗಿಸುತ್ತದೆ. ವಿನಿಗರ್ ಹಾಗೂ ಬೇಕಿಂಗ್ ಸೋಡಾ ಮಿಶ್ರಣವೂ ಪರಿಣಾಮಕಾರಿ.
* ನೀಲಗಿರಿ ಎಣ್ಣೆಯ ಕೆಲವು ಹನಿಗಳನ್ನು ಹೂ ಕುಂಡದಲ್ಲಿಟ್ಟು ಒಂದೆಡೆ ಇಡಿ.
* ಟವೆಲ್‌ಗಳು ಒಣಗಿರಲಿ. ಬಟ್ಟೆಯನ್ನು ಬಾತ್‌ರೂಂ ಒಳಗೆ ಒಣಗಿಸಬೇಡಿ.