

ಜೋಹಾನೆಸ್ ಬರ್ಗ್: ನೆಲ್ಸನ್ ಮಂಡೇಲ ಅವರ ಮೊಮ್ಮಗ ಎಂದು ಗುರುತಿಸಲಾಗಿರುವ ಪುರುಷನೊಬ್ಬನನ್ನು ೧೫ ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಪೊಲೀಸರು ಇಂದು ತಿಳಿಸಿದ್ದಾರೆ.
ಮೊಬುಸೋ ಮಂಡೇಲ(೨೪) ಈಗ ಪೊಲೀಸರ ಬಂಧನದಲ್ಲಿದ್ದು ಶುಕ್ರವಾರ ಜಾಮೀನು ವಿಚಾರಣೆಗಾಗಿ ಜೋಹಾನೆಸ್ ಬರ್ಗ್ ಮೆಜೆಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ,
ಜೋಹಾನೆಸ್ ಬರ್ಗ್ ನ ಹೊರವಲಯದ ಗ್ರೀನ್ ಸೈಡ್ ನ ಹೋಟೆಲ್ ಒಂದರಲ್ಲಿ ಆಗಸ್ಟ್ ೭ ರಂದು ಈ ರೇಪ್ ನಡೆದಿದೆ ಎಂದು ಆರೋಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆ ಒಂದು ವಾರದ ನಂತರ ವರದಿಯಾಗಿದ್ದು ಮಂಡೇಲ ಅವರನ್ನು ಶನಿವಾರ ಬಂಧಿಸಲಾಗಿದೆ.
ಮುತ್ಸದ್ಧಿ ನೆಲ್ಸನ್ ಮಂಡೇಲ ಅವರ ೧೭ ಮೊಮ್ಮಕ್ಕಳಲ್ಲಿ ಮುಬುಸೋ ಮಂಡೇಲಾ ಕೂಡ ಒಬ್ಬರು. ಮಂಡೇಲ ತಮ್ಮ ೬೫ನೆಯ ವಯಸ್ಸಿನಲ್ಲಿ ೨೦೧೩ ರಲ್ಲಿ ನಿಧನರಾದರು.