15 ವರ್ಷದ ಬಾಲಕಿ ಮೇಲೆ ಮಂಡೇಲಾ ಮೊಮ್ಮಗನಿಂದ ಅತ್ಯಾಚಾರ: ಬಂಧನ, ಜಾಮೀನು

15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ ನೆಲ್ಸೆನ್ ಮಂಡೇಲಾ ಮೊಮ್ಮಗನಿಗೆ
ಅತ್ಯಾಚಾರ ಆರೋಪ ಎದುರಿಸುತ್ತಿರುವ ನೆಲ್ಸನ್ ಮಂಡೆಲಾ ಮೊಮ್ಮಗ
ಅತ್ಯಾಚಾರ ಆರೋಪ ಎದುರಿಸುತ್ತಿರುವ ನೆಲ್ಸನ್ ಮಂಡೆಲಾ ಮೊಮ್ಮಗ

ಜೋಹಾನ್ಸ್ ಬರ್ಗ್: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ ನೆಲ್ಸೆನ್ ಮಂಡೇಲಾ ಮೊಮ್ಮಗನಿಗೆ ದಕ್ಷಿಣ ಆಫ್ರಿಕಾ ನ್ಯಾಯಾಲಯ ಜಾಮೀನು ನೀಡಿದೆ.

ನೆಲ್ಸನ್ ಮಂಡೇಲಾ ಮೊಮ್ಮಗ ಡೊಕ್ ಆಗಸ್ಟ್ 7 ರಂದು  ಜೋಹಾನ್ಸ್ ಬರ್ಗ್ ನ ರೆಸ್ಟೋರೆಂಟ್ ನಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದನ ಎನ್ನಲಾಗಿದೆ.  ದಕ್ಷಿಣ ಆಫ್ರಿಕಾ ಕೋರ್ಟ್ ನ ನ್ಯಾಯಮೂರ್ತಿ ಜೀಟರ್ ಡೂ-ಪ್ಲೆಸಿಸ್  540 ಡಾಲರ್ ಗಳ ಬಾಂಡ್ ಆಧಾರದ ಮೇಲೆ ಜಾಮೀನು ನೀಡಿದ್ದಾರೆ.

ಎರಡು ಮಕ್ಕಳ ತಂದೆಯಾಗಿರುವ ಡೊಕ್ ಗೆ ಯಾವುದೇ ನೈಕರಿ ಇಲ್ಲ. ಆತ ಜೈಲಿನಲ್ಲಿ ಯಾವುದೇ ವಿಶೇಷ ಸವಲತ್ತು ಪಡೆಯಲು ಸಾಧ್ಯವಿಲ್ಲ, ಹೀಗಾಗಿ  ಆತನಿಗೆ ಜಾಮೀನು ನೀಡಬೇಕು ಎಂದು ಡೊಕ್ ಪರ ವಕೀಲರು ವಾದ ಮಂಡಿಸಿದ್ದರು. ದಕ್ಷಿಣ ಆಪ್ರಿಕಾದ ಕಾನೂನಿನಂತೆ 16 ವರ್ಷ ತುಂಬಿದರೆ ಯುವತಿ. ಆಗ ಆಕೆ ವಯಸ್ಸಿಗೆ ಬಂದಿರುತ್ತಾಳೆ. ಸಂತ್ರಸ್ತೆಗೆ ಇನ್ನು ಕೆಲವೇ ದಿನಗಳಲ್ಲಿ 16 ವರ್ಷಕ್ಕೆ ಬರುತ್ತಾಳೆ. ಹೀಗಾಗಿ ಆಕೆ ಒಪ್ಪಿಗೆಯ ಮೇರೆಗೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ ಎಂದು ಡೊಕ್ ಪರ ವಕೀಲರು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಲಯ ಡೊಕ್ ಗೆ ಜಾಮೀನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com