

ಇಸ್ಲಾಮಾಬಾದ್: ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರು ಅಣ್ವಸ್ತ್ರ ಬೆದರಿಕೆ ಹಾಕಿದ ಬೆನ್ನಲ್ಲೇ ಈಗ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಮತ್ತೊಂದು ಧಮಕಿ ಹಾಕಿದ್ದಾರೆ.
ಒಂದು ವೇಳೆ ನಮ್ಮ ದೇಶದ ಮೇಲೆ ಯುದ್ಧ ಘೋಷಿಸಿದರೆ ದಶಕಗಳ ಕಾಲ ನೆನಪುಳಿಯುವಂಥ ಪಾಠ ಕಲಿಸುತ್ತೇವೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಮಹಮ್ಮದ್ ಆಸಿಫ್ ಭಾರತಕ್ಕೆ ಎಚ್ಚರಿಸಿದ್ದಾರೆ.
ಪಾಕ್ ಸೇನೆಯು ತನ್ನ ತಾಯಾ್ನಡಿನ ಪ್ರತಿ ಇಂಚು ಭೂಮಿಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಲಿದೆ. ಒಂದು ವೇಳೆ ಭಾರತವು ಯುದ್ಧ ಘೋಷಿಸಿದರೆ ದಶಕಗಳ ಕಾಲ ನೆನಪಿನಲ್ಲಿ ಉಳಿಯುವಂಥ ಪಾಠ ಕಲಿಸಲಿದ್ದೇವೆ. ಭಾರತಕ್ಕೆ ತೀವ್ರ ಹಾನಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.