ಲಾಸ್ ಏಂಜಲೀಸ್'ಗೆ ಉಗ್ರರ ಬೆದರಿಕೆ: ಶಾಲೆ-ಕಾಲೇಜುಗಳು ಬಂದ್

ಅಮೆರಿಕದ ಲಾಸ್ ಏಂಜಲೀಸ್ ಮೇಲೆ ದಾಳಿ ನಡೆಸುವಂತೆ ಉಗ್ರರು ಬೆದರಿಕೆ ಸಂದೇಶ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಲೆಗಳಿಗೆ ರಜೆ ಘೋಷಿಸಿರುವ ಘಟನೆ ಮಂಗಳವಾರ ನಡೆದಿದೆ...
ಲಾಸ್ ಏಂಜಲೀಸ್'ಗೆ ಉಗ್ರರ ಬೆದರಿಕೆ: ಶಾಲೆ-ಕಾಲೇಜುಗಳು ಬಂದ್ (ಸಾಂದರ್ಭಿಕ  ಚಿತ್ರ)
ಲಾಸ್ ಏಂಜಲೀಸ್'ಗೆ ಉಗ್ರರ ಬೆದರಿಕೆ: ಶಾಲೆ-ಕಾಲೇಜುಗಳು ಬಂದ್ (ಸಾಂದರ್ಭಿಕ ಚಿತ್ರ)
Updated on

ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ಮೇಲೆ ದಾಳಿ ನಡೆಸುವಂತೆ ಉಗ್ರರು ಬೆದರಿಕೆ ಸಂದೇಶ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಲೆಗಳಿಗೆ ರಜೆ ಘೋಷಿಸಿರುವ ಘಟನೆ ಮಂಗಳವಾರ ನಡೆದಿದೆ.

ನಿನ್ನೆ ಬೆಳಗ್ಗೆ ಅನಾಮಿಕ ವ್ಯಕ್ತಿಯೊಬ್ಬರು ಶಾಲೆಯ ಮುಖ್ಯಸ್ಥರೊಬ್ಬರ ಇಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ರವಾನಿಸಿದ್ದು, ಶಾಲೆಯನ್ನು ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಿದ್ದಾರೆಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಅಲ್ಲದೆ, ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಯನ್ನು ಬಂದ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಲಾಸ್ ಏಂಜಲೀಸ್ ಶಾಲೆಗೆ ನೀಡಿರುವ ಬೆದರಿಕೆ ಸಂದೇಶದಂತೆಯೇ ನ್ಯೂಯಾರ್ಕ್ ನಲ್ಲಿರುವ ಶಾಲೆಯೊಂದಕ್ಕೂ ಬೆದರಿಕೆಯ ಸಂದೇಶ ರವಾನೆಯಾಗಿದ್ದು, ಬೆದರಿಕೆ ಸಂದೇಶಗಳು ಹುಸಿ ಸಂದೇಶಗಳಾಗಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಬೆದರಿಕೆ ಸಂದೇಶ ಕುರಿತಂತೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ, ಕ್ರಿಸ್ ಮಸ್ ಹತ್ತಿರಬರುತ್ತಿರುವ ಹಿನ್ನೆಲೆಯಲ್ಲಿ ಬೆದರಿಕೆ ಸಂದೇಶಗಳು ರವಾನೆಯಾಗುತ್ತಿದೆ. ಈ ಹಿಂದೆ ಹಾಗೂ ಇತ್ತೀಚೆಗಷ್ಟೇ ನಡೆದ ದಾಳಿಯನ್ನು ಸ್ಮರಣೆಯಲ್ಲಿಟ್ಟುಕೊಳ್ಳಲಾಗಿದ್ದು, ಈ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com