ಪ್ಯಾರಿಸ್ ದಾಳಿಗೆ ಬಳಸಲಾಗಿದ್ದ ಎರಡನೇ ಕಾರನ್ನು ವಶಪಡಿಸಿಕೊಂಡ ಪೊಲೀಸರು

ಪ್ಯಾರಿಸ್ ನಲ್ಲಿ ದಾಳಿ ನಡೆಸಿದ್ದ ಉಗ್ರರು ಬಳಿಸಿ ಎರಡನೇ ಕಾರನ್ನು ಪ್ಯಾರಿಸ್ ಪೊಲೀಸರು ಮೊಂಟ್ರೆಲಿಯಾದಲ್ಲಿ ಪತ್ತೆ ಹಚ್ಚಿದ್ದಾರೆ...
ಪ್ಯಾರಿಸ್ ದಾಳಿ
ಪ್ಯಾರಿಸ್ ದಾಳಿ

ಪ್ಯಾರಿಸ್: ಪ್ಯಾರಿಸ್ ನಲ್ಲಿ ದಾಳಿ ನಡೆಸಿದ್ದ ಉಗ್ರರು ಬಳಿಸಿ ಎರಡನೇ ಕಾರನ್ನು ಪ್ಯಾರಿಸ್ ಪೊಲೀಸರು ಮೊಂಟ್ರೆಲಿಯಾದಲ್ಲಿ ಪತ್ತೆ ಹಚ್ಚಿದ್ದಾರೆ.

ಪ್ಯಾರಿಸ್ ನ ರೆಸ್ಟೋರೆಂಟ್ ವೊಂದರ ಮೇಲೆ ಶಸ್ತ್ರಸರ್ಜಿತ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದ ಈ ವೇಳೆ ಬಳಸಲಾಗಿದ್ದ ಕಪ್ಪು ಬಣ್ಣ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರನ್ನು ಬಳಸಿಕೊಂಡು ಆರು ಜಾಗಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ರೆಸ್ಟೋರೆಂಟ್ ಒಂದರಲ್ಲಿ 19 ಮಂದಿ ಸಾವನ್ನಪ್ಪಿದ್ದು, ರೂ ಡೆ ಲಾ ಫಾನ್ಟೈನ್ ಬಳಿ ಐವರು ಸಾವನ್ನಪ್ಪಿದ್ದರು.

ದಾಳಿಗೆ ಸಂಬಂಧಿಸಿದಂತೆ ಪ್ಯಾರಿಸ್ ಪೊಲೀಸರು ಇಲ್ಲಿಯವರೆಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com