

ಬೀಜಿಂಗ್: ಹಿಲಾಂಗ್ ಜಿಯಾಂಗ್ ನಲ್ಲಿರುವ ಅತ್ಯಂತ ಹಳೆಯ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಸ್ಫೋಟದಲ್ಲಿ 21 ಮಂದಿ ಕಾರ್ಮಿಕರು ಬಲಿಯಾಗಿರುವ ದಾರುಣ ಘಟನೆ ಬೀಜಿಂಗ್ ನಲ್ಲಿ ಸಂಭವಿಸಿದೆ.
ಗಣಿಯಲ್ಲಿ ಸುಮಾರು 38 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರಲ್ಲಿ 16 ಮಂದಿ ದುರಂತದಿಂದ ಪಾರಾಗಿದ್ದು, ಉಳಿದವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಅಗ್ನಿ ದುರಂತ ಸಂಭವಿಸಿದ್ದು, 21 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಹಲವರು ಗಂಭೀರ ಗಾಯಗೊಂಡಿರುವ ಪರಿಣಾಮ ಸಾವಿನ ಸಂಖ್ಯೆ ಏರಿಕೆಯಾಗುವ ಭೀತಿ ಎದುರಾಗಿದೆ.