ನ್ಯೂ ಒರ್ಲೆನ್ಸ್ ನಲ್ಲಿ ಗುಂಡಿನ ದಾಳಿ: 16 ಗಾಯ

ಕಳೆದ ರಾತ್ರಿ ಅಮೆರಿಕದ ನ್ಯೂ ಒರ್ಲೆನ್ಸ್ ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ...
ಗುಂಡಿನ ದಾಳಿ
ಗುಂಡಿನ ದಾಳಿ

ನ್ಯೂ ಒರ್ಲೆನ್ಸ್: ಕಳೆದ ರಾತ್ರಿ ಅಮೆರಿಕದ ನ್ಯೂ ಒರ್ಲೆನ್ಸ್ ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒರ್ಲೆನ್ಸ್ ನ ಕ್ರೀಡಾಂಗಣವೊಂದರಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಗುಂಡಿನ ದಾಳಿ ನಡೆದಿದೆ. ಈ ವೇಳೆ 16 ಮಂದಿ ಗಾಯಗೊಂಡಿದ್ದಾರೆ.

10 ಗಾಯಾಳುಗಳನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನುಳಿದವರನ್ನು ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com