ಭಾರತದೊಂದಿಗಿನ ಸಂಭಾವ್ಯ ಯುದ್ಧಕ್ಕಾಗಿಯೇ ಅಣ್ವಸ್ತ್ರ ಇರುವುದು: ಪಾಕ್ ಅಧಿಕಾರಿ

ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊಂದಿರುವುದು ಭಾರತದ ವಿರುದ್ಧದ ಯುದ್ಧಕ್ಕಾಗಿಯೇ ಎಂದು ಪಾಕ್ ನ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌದರಿ ಹೇಳಿದ್ದಾರೆ.
ಪಾಕಿಸ್ತಾನದ ಅಣ್ವಸ್ತ್ರ(ಸಂಗ್ರಹ ಚಿತ್ರ)
ಪಾಕಿಸ್ತಾನದ ಅಣ್ವಸ್ತ್ರ(ಸಂಗ್ರಹ ಚಿತ್ರ)
Updated on: 

ಕರಾಚಿ: ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊಂದಿರುವುದು ಭಾರತದ ವಿರುದ್ಧದ ಯುದ್ಧಕ್ಕಾಗಿಯೇ ಎಂದು ಪಾಕ್ ನ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌದರಿ ಹೇಳಿದ್ದಾರೆ.
ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಶೀತಲ ಸಮರ ನಡೆಸುತ್ತಿದ್ದು, ಭಾರತದೊಂದಿಗೆ ಸಂಭವಿಸಬಹುದಾದಂತಹ ಯುದ್ಧದಲ್ಲಿ ಬಳಕೆ ಮಾಡುವುದಕ್ಕಾಗಿಯೇ ಅಣ್ವಸ್ತ್ರಗಳಿರುವುದು ಎಂದಿದ್ದಾರೆ. ಯುದ್ಧತಂತ್ರದ ಭಾಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಅಧಿಕಾರಿಗಳು ದೇಶದ ನಿರ್ಧಾರದ ಕುರಿತು ವಿವರಣೆ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನ ಪ್ರಧಾನಿ ಅಮೆರಿಕ ಭೇಟಿ ವೇಳೆ ಪರಮಾಣು ಒಪ್ಪಂದ ನಡೆಯುವುದಿಲ್ಲ, ಪಾಕಿಸ್ತಾನದ ಪರಮಾಣು ಯೋಜನೆಗಳು ಕೇವಲ ಯುದ್ಧ ಪ್ರಾರಂಭಿಸುವುದಕ್ಕೆ ಮಾತ್ರವಲ್ಲ ಪಾಕಿಸ್ತಾನಕ್ಕೆ ಬರಬಹುದಾದ ಆಪತ್ತುಗಳಿಂದ ಪ್ರತಿರೋಧವೊಡ್ಡುವುದಕ್ಕೆ ಸಹಕಾರಿಯಾಗಲಿದೆ ಎಂದು ಚೌಧರಿ ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ 22 ರಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅಮೆರಿಕಗೆ ಭೇಟಿ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com