ಸಂವಿಧಾನ ವಿರುದ್ಧ ಸಮರ

ನೇಪಾಳದಲ್ಲಿ ಹೊಸ ಸಂವಿಧಾನ ಅಂಗೀಕರಿಸಿದ್ದರ ವಿರುದ್ಧ ಸೋಮವಾರ ಪ್ರತಿಭಟನೆ ಮುಂದುವರಿದಿದೆ. ಅಲ್ಲಿನ ಸದ್ಭಾವನಾ ಪಕ್ಷದ ಕಾರ್ಯಕರ್ತ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಕಠ್ಮಂಡು: ನೇಪಾಳದಲ್ಲಿ ಹೊಸ ಸಂವಿಧಾನ ಅಂಗೀಕರಿಸಿದ್ದರ ವಿರುದ್ಧ ಸೋಮವಾರ ಪ್ರತಿಭಟನೆ ಮುಂದುವರಿದಿದೆ. ಅಲ್ಲಿನ ಸದ್ಭಾವನಾ ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರುತಾಹತ್ ಜಿಲ್ಲೆಯಲ್ಲಿ ಪೊಲೀಸರು ಉದ್ರಿಕ್ತ ಪ್ರತಿಭಟನಾಕಾರರ ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಮಧೇಸಿ ಸಮುದಾಯದ ನಾಯಕನಿಗೆ ಗಾಯಗಳಾಗಿವೆ. ಭಾರತಕ್ಕೆ ಹೊಂದಿಕೊಂಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಲಾಮ್ಕಿ ಮತ್ತು ಕೈಲಾಲಿ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಇದೇ ವೇಳೆ, ಪ್ರತಿಭಟನಾ ನಿರತ ಗುಂಪುಗಳನ್ನು ಮಾತುಕತೆಗೆ ಅಧ್ಯಕ್ಷ ಮತ್ತು ಪ್ರಧಾನಿ ಆಹ್ವಾನಿಸಿದ್ದಾರೆ. ಇದೇ ವೇಳೆ ದನವನ್ನು ನೇಪಾಳದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com