ವಿಕೃತ ಕಾಮಿ ಸೌದಿ ಯುವರಾಜನ ಬಂಧನ ಬಿಡುಗಡೆ

ರಾಜತಾಂತ್ರಿಕ ಬಂಗಲೆಯಲ್ಲಿ ತನ್ನೊಂದಿಗೆ ಮುಖ ರತಿ ಹಾಗೂ ವಿಕೃತ ಕಾಮ ನಡೆಸುವಂತೆ ಓರ್ವ ಮಹಿಳೆಯನ್ನು ಬಲವಂತಪಡಿಸಿದ ಆರೋಪದ ಮೇಲೆ ಸೌದಿ ...
ರಾಜತಾಂತ್ರಿಕ ಬಂಗಲೆ
ರಾಜತಾಂತ್ರಿಕ ಬಂಗಲೆ
Updated on

ರಾಜತಾಂತ್ರಿಕ ಬಂಗಲೆಯಲ್ಲಿ ತನ್ನೊಂದಿಗೆ ಮುಖ ರತಿ ಹಾಗೂ ವಿಕೃತ ಕಾಮ ನಡೆಸುವಂತೆ ಓರ್ವ ಮಹಿಳೆಯನ್ನು ಬಲವಂತಪಡಿಸಿದ ಆರೋಪದ ಮೇಲೆ ಸೌದಿ ಯುವರಾಜ ಮಜೀದ್‌ ಅಬ್ದುಲ್‌ ಅಝೀಝ್ ಅಲ್‌ ಸೌದ್‌ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.

 ನೋವಿನಿಂದ ಚೀರಾಡುತ್ತಾ, ಸಹಾಯಕ್ಕಾಗಿ ಬೊಬ್ಬಿಡುತ್ತಾ ಸೌದಿ ಯುವರಾಜನ ಬಂಗಲೆಯಿಂದ ಪಾರಾಗಲು ಯತ್ನಿಸುತ್ತಿದ್ದ ಮಹಿಳೆಯೊಬ್ಬಳನ್ನು ದೊರೆಯ ನೆರೆಮನೆಯ ವ್ಯಕ್ತಿಯೊಬ್ಬರು ಕಂಡು ದೂರು ನೀಡಿದ ಬಳಿಕವೇ ಈ ಘಟನೆ ಬೆಳಕಿಗೆ ಬಂದಿದೆ.

ಸೌದಿ ದೊರೆಯ ಬಂಗಲೆಯ ನೆರೆಯಲ್ಲಿರುವ ವ್ಯಕ್ತಿ ಈ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದು ಈ ಕುರಿತಾದ ವಿವರಗಳನ್ನು ಅವರು ನೀಡಿದ್ದಾರೆ. ಸೌದಿ ದೊರೆಯ ಬಂಗಲೆಯ ಎಂಟು ಅಡಿ ಎತ್ತರದ ಆವರಣದ ಗೋಡೆಯನ್ನು ಹಾರಿ ಪಾರಾಗಲು ಯತ್ನಿಸುತ್ತಿದ್ದ ಮಹಿಳೆಯ ಬಾಯಲ್ಲಿ ರಕ್ತ ಒಸರುತ್ತಿದ್ದು ಆಕೆ ನೋವಿನಿಂದ ಚೀರಾಡುತ್ತಾ ಸಹಾಯಕ್ಕಾಗಿ ಬೊಬ್ಬಿಡುತ್ತಿದ್ದಳು ಎಂದು ಆ ವ್ಯಕ್ತಿ ತಿಳಿಸಿದ್ದಾರೆ.

ರಾಜತಂತ್ರಜ್ಞರು ಮತ್ತು ದೊರೆಗಳಿಗೆ ಅಮೆರಿಕದಲ್ಲಿ ಸಂಪೂರ್ಣ ರಾಜತಾಂತ್ರಿಕ ರಕ್ಷಣೆ ಇದೆ. ಆದರೆ ಯುವ ರಾಜನಿಗೆ ಈ ರಾಜತಾಂತ್ರಿಕ ರಕ್ಷಣೆ ಇರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

29ರ ಹರೆಯದ ಸೌದಿ ಯುವರಾಜನನ್ನು ಪೊಲೀಸರು ಕಳೆದ ಬುಧವಾರ ಬಂಧಿಸಿದ್ದಾರೆ. ಆದರೆ ಮರುದಿನವೇ ಆತನನ್ನು ಮೂರು ಲಕ್ಷ ಡಾಲರ್‌ ಬಾಂಡ್‌ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿದೆ. ಲೈಂಗಿಕ ದಾಳಿ ಮತ್ತು ಅಕ್ರಮ ಬಂಧನದ ಆರೋಪಗಳ ಮೇಲೆ ಸೆರೆಯಾಗಿ ಜಾಮೀನು ಪಡೆದಿರುವ ಸೌದಿ ಯುವರಾಜ ಅಕ್ಟೋಬರ್‌ 19ರಂದು ನ್ಯಾಯಾಲಯದಲ್ಲಿ ಹಾಜರಾಗಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com