ವಿದೇಶ

ಖಂಡಾಂತರ ಕ್ಷಿಪಣಿ ಎಂಜಿನ್ ಪರೀಕ್ಷೆ ಯಶಸ್ವಿ: ಉತ್ತರ ಕೊರಿಯಾ

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿಯ ಶಕ್ತಿಶಾಲಿ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ..

ಖಂಡಾಂತರ ಕ್ಷಿಪಣಿ ಎಂಜಿನ್ ಪರೀಕ್ಷೆ ಯಶಸ್ವಿ: ಉತ್ತರ ಕೊರಿಯಾ
ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ಕ್ಷಿಪಣಿ ತಂತ್ರಜ್ಞಾನ ಪಡೆ (ಸಂಗ್ರಹ ಚಿತ್ರ)
Published On :

ಸಿಯೋಲ್: ಅಮೆರಿಕ ಸೇರಿದಂತೆ ವಿಶ್ವ ಸಮುದಾಯದ ವ್ಯಾಪಕ ವಿರೋಧದ ನಡುವೆಯೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿಯ ಶಕ್ತಿಶಾಲಿ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.

ಉತ್ತರ ಕೊರಿಯಾ ಸರ್ಕಾರದ ಅಧಿಕೃತ ವಾಹಿನಿಯಾದ ಕೆಸಿಎನ್ಎ ಸುದ್ದಿ ಸಂಸ್ಥೆ ತಿಳಿಸಿರುವಂತೆ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರ ನಿರ್ದೇಶನದಂತೆ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಪರಮಾಣು ಕ್ಷಿಪಣಿಯ ಎಂಜಿನ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಪ್ರಮುಖವಾಗಿ ತನ್ನ ಶತ್ರು ರಾಷ್ಟ್ರ ಅಮೇರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳನ್ನು ದೃಷ್ಟಿಯಸ್ಸಿಟ್ಟುಕೊಂಡು ಉತ್ತರ ಕೊರಿಯಾ ಈ ಖಂಡಾಂತರ ಕ್ಷಿಪಣಿ ಎಂಜಿನ್ ಅನ್ನು ಅಬಿವೃದ್ಧಿ ಪಡಿಸಿತ್ತು. ಇಂದು ಅದರ ಪ್ರಯೋಗಾತ್ಮಕ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಕೊರಿಯಾದ ಪ್ಯೋಗ್ಯಾಂಗ್ ಬಳಿ ಇರುವ ಉಡಾವಣಾ ಕೇಂದ್ರದಿಂದ ಕ್ಷಿಪಣಿಯ ಎಂಜಿನ್ ಅನ್ನು ಹಾರಿಸಲಾಗಿದ್ದು, ಕ್ಷಿಪಣಿ ನಿಗದಿತ ಸಮಯದಲ್ಲಿ ನಿಖರವಾರದ ಗುರಿಯನ್ನು ತಲುಪುವ ಮೂಲಕ ಪರೀಕ್ಷೆ ಯಶಸ್ವಿಯಾಗಿದೆ. ಈಗ್ಗೆ ಕೆಲತಿಂಗಳ ಹಿಂದಷ್ಟೇ ವಿಶ್ವಸಂಸ್ಥೆಯ ವಿರೋಧದ ನಡುವೆಯೇ ಅಧ್ಯಕ್ಷ ಕಿಮ್ ಜಾಂಗ್ ಉನ್ ಮಧ್ಯಮ ದೂರಾಗಮಿ ಅಣ್ವಸ್ತ್ರ ಕ್ಷಿಪಣಿಯ ಪರೀಕ್ಷೆ ನಡೆಸಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಘಟನೆಯ ಬೆನ್ನಲ್ಲೇ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸುವಂತಿಲ್ಲ ಎಂದು ವಿಶ್ವಸಂಸ್ಥೆ ನಿಷೇಧ ಹೇರಿತ್ತು. ಅದರ ಹೊರತಾಗಿಯೂ ಇದೀಗ ಮತ್ತೆ ಉತ್ತರ ಕೊರಿಯಾ ಅಣ್ವಸ್ತ್ರ ಕ್ಷಿಪಣಿಯ ಎಂಜಿನ್ ಪರೀಕ್ಷೆ ನಡೆಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.