ಸುಮಾತ್ರಾ ದ್ವೀಪದಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪನ

ಇಂಡೋನೇಷ್ಯಾದ ಪಶ್ಚಿಮ ಕರಾವಳಿಯಲ್ಲಿರುವ ಸುಮಾತ್ರ ದ್ವೀಪದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ...
ಇಂಡೋನೇಷ್ಯಾದಲ್ಲಿ ಭೂಕಂಪನ (ಸಂಗ್ರಹ ಚಿತ್ರ)
ಇಂಡೋನೇಷ್ಯಾದಲ್ಲಿ ಭೂಕಂಪನ (ಸಂಗ್ರಹ ಚಿತ್ರ)
Updated on: 

ಜಕಾರ್ತ: ಇಂಡೋನೇಷ್ಯಾದ ಪಶ್ಚಿಮ ಕರಾವಳಿಯಲ್ಲಿರುವ ಸುಮಾತ್ರ ದ್ವೀಪದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ.

ಸುಮಾತ್ರಾ ದ್ವೀಪದ ಬೆಂಗ್ಕುಲು ಪ್ರಾಂತದಲ್ಲಿ ಭಾನುವಾರ ಬೆಳಕ್ಕೆ 9.14ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ರಾಜಧಾನಿ ಜಕಾರ್ತದಿಂದ 556 ಕಿಮೀ ದೂರದಲ್ಲಿನ ಬೆಂಗ್ಕುಲು  ನಗರದಿಂದ 61 ಕಿಮೀ ನೈಋತ್ಯ ಭಾಗದಲ್ಲಿ ಸಮುದ್ರದ ಅಡಿಯಲ್ಲಿ 16 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರವಿತ್ತು ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಸುಮಾತ್ರಾ ದ್ವೀಪದಲ್ಲಿ ಸುನಾಮಿ  ಭೀತಿ ಆವರಿಸಿತ್ತು. ಆದರೆ ಬಳಿಕ ಸಂಭಾವ್ಯ ಸುನಾಮಿಯನ್ನು ಇಂಡೋನೇಷ್ಯಾದ ಭೂಗರ್ಭ ತಜ್ಞರು ಮತ್ತು ಅಮೆರಿಕದ ಹವಾಮಾನ ಇಲಾಖೆಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

ಪ್ರಸ್ತುತ ಸುಮಾತ್ರ ದ್ವೀಪದಲ್ಲಿ ಸಂಭವಿಸಿರುವ ಭೂಕಂಪನ ಸುನಾಮಿ ಅಲೆಗಳನ್ನು ಸೃಷ್ಟಿಸುವಷ್ಟು ಪ್ರಬಲವಾಗಿಲ್ಲ. ಹೀಗಾಗಿ ಜನರ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಅಮೆರಿಕ  ಭೂಗರ್ಭ ಸಮೀಕ್ಷೆ (ಯುಎಸ್​ಜಿಎಸ್) ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com