ವಿಮಾನದಲ್ಲಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಭಾರತೀಯ ವೃದ್ಧನ ಬಂಧನ

ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆಂಧ್ರ 58 ವರ್ಷದ ವ್ಯಕ್ತಿಯೋರ್ವನನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್‌‌: ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆಂಧ್ರ 58 ವರ್ಷದ ವ್ಯಕ್ತಿಯೋರ್ವನನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ.

ಜುಲೈ 30 ರಂದು ಆಂಧ್ರದ ವಿಶಾಖಪಟ್ಟಣಂನ ವೀರಭದ್ರರಾವ್ ಲಾಸ್ ಎಂಜಿಲ್ಸ್‌ನಿಂದ ನ್ಯೂಜೆರ್ಸಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ತನ್ನ ಪಕ್ಕದಲ್ಲಿ ಕುಳಿತ ಮಹಿಳೆಯೊಂದಿಗೆ ವೀರಭದ್ರರಾವ್ ಅಸಭ್ಯವಾಗಿ ವರ್ತಿಸಿದ್ದನಂತೆ. ಈ ಕುರಿತು ಮಹಿಳೆ ವಿಮಾನದ ಸಿಬ್ಬಂದಿಗೆ ದೂರು ನೀಡಿದ್ದರು. ಆಗ ಅವನನ್ನು ಬೇರೆ ಸೀಟಿಗೆ ಸ್ಥಳಾಂತರಿಸಲಾಗಿತ್ತು.

ವಿಮಾನ ನ್ಯೂಯಾರ್ಕ್‌ ತಲುಪಿದೊಡನೆ 58 ವರ್ಷದ ವೀರಭದ್ರರಾವ್‌ರನ್ನು ಅಲ್ಲಿಯ ಪೊಲೀಸರು ಬಂಧಿಸಿ ನ್ಯೂಯಾರ್ಕ್‌ ಫೆಡರಲ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ವೀರಭದ್ರರಾವ್‌ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪ ಸಾಬೀತಾದ್ರೆ 2 ವರ್ಷ ಜೈಲು ಶಿಕ್ಷೆ, 2.5 ಲಕ್ಷ ಡಾಲರ್‌ ದಂಡ ವಿಧಿಸುವ ಸಾಧ್ಯತೆ ಇದೆ.  

ವಿಮಾನ ಹಾರಾಟ ಆರಂಭಿಸುತ್ತಿದ್ದಂತೆ ಮಹಿಳೆ ನಿದ್ರೆಗೆ ಜಾರಿದರು. ಈ ವೇಳೆ ವಿಮಾನದ ಮದ್ಯದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಆಕೆಯನ್ನು ಮುಟ್ಟಿದ್ದಾನೆ. ನಂತರ ಎಚ್ಚರಗೊಂಡ ಆಕೆ ವಿಮಾನ ಸಿಬ್ಬಂದಿಗೆ ವಿಷಯ ತಿಳಿಸಿದ್ದಾಗಿ ದೂರು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com