ಆದಷ್ಟು ಬೇಗ ಭಾರತದೊಂದಿಗೆ ಸಂಪರ್ಕ ಸಾಧಿಸಿ: ಡೊನಾಲ್ಡ್ ಟ್ರಂಪ್ ಗೆ ತಜ್ಞರ ಸಲಹೆ

ಅಮೆರಿಕದ ತಜ್ಞರ ಥಿಂಕ್ ಟ್ಯಾಂಕ್ (ಚಿಂತಕರ ಚಾವಡಿ) ತಂಡ ಅತಿ ವೇಗವಾಗಿ ಬೆಳೆಯುತ್ತಿರುವ ಭಾರತದೊಂದಿಗೆ ಸಾಧ್ಯವಾದಷ್ಟು ಶೀಘ್ರವಾಗಿ ಸಂಪರ್ಕ ಸಾಧಿಸುವಂತೆ ಸಲಹೆ ನೀಡಿದೆ
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on: 
ವಾಷಿಂಗ್ ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೂ ಮುನ್ನ ಹಲವು ವಿದೇಶಿ ನಾಯಕರೊಂದಿಗೆ ಈಗಾಗಲೇ ದೂರವಾಣಿ ಮೂಲಕ ಒಂದು ಸುತ್ತಿನ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಅಮೆರಿಕದ ಮೂವರು ತಜ್ಞರನ್ನೊಳಗೊಂಡ ಥಿಂಕ್ ಟ್ಯಾಂಕ್ (ಚಿಂತಕರ ಚಾವಡಿ) ತಂಡ ಅತಿ ವೇಗವಾಗಿ ಬೆಳೆಯುತ್ತಿರುವ ಭಾರತದೊಂದಿಗೆ ಸಾಧ್ಯವಾದಷ್ಟು ಶೀಘ್ರವಾಗಿ ಸಂಪರ್ಕ ಸಾಧಿಸುವಂತೆ ಸಲಹೆ ನೀಡಿದೆ. 
ಅಮೆರಿಕದ ಅಧ್ಯಕ್ಷರ ಅಧಿಕಾರ ಪರಿವರ್ತನೆಯಾಗುತ್ತಿರುವ ವೇಳೆಯಲ್ಲಿ ಭಾರತ- ಅಮೆರಿಕಾದ ಸಹಕಾರ, ಪಾಲುದಾರಿಕೆ, ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಬೇಕಿರುವ ಅಗತ್ಯವಿದೆ ಎಂದು ತಜ್ಞರ ತಂಡ ಹೇಳಿದೆ. ಸಮಾನ ಮನಸ್ಕ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದೊಂದಿಗೆ ಶೀಘ್ರವೇ ಸಂಪರ್ಕ ಸಾಧಿಸಿದರೆ ಅದು ಡೊನಾಲ್ಡ್ ಟ್ರಂಪ್ ಅವರ ಆಡಳಿತಾವಧಿಯ ಪ್ರಾರಂಭದ ಯಶಸ್ಸಾಗಲಿದೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ. 
ಕಾರ್ಯತಂತ್ರ ಹಾಗೂ ಅಂತಾರಾಷ್ಟ್ರೀಯ ಅಧ್ಯಯನಗಳ ಕೇಂದ್ರದ ತಜ್ಞರುಗಳಾದ ಕ್ಯಾಥ್ಲೀನ್ ಎಚ್ ಹಿಕ್ಸ್, ಡಿ ಸಿ ರಿಚರ್ಡ್, ಜಾನ್ ಸ್ಕೌಸ್ ಡೊನಾಲ್ಡ್ ಟ್ರಂಪ್ ಗೆ ಈ ಸಲಹೆ ನೀಡಿದ್ದು, ಭಾರತ- ಅಮೆರಿಕಾಗಳನ್ನು ಮತ್ತಷ್ಟು ಹತ್ತಿರ ತರಲು ಉನ್ನತ ಮಟ್ಟದ ಅಧಿಕಾರಿಗಳ ನಿರಂತರ ಶ್ರಮದ ಅಗತ್ಯವಿದೆ ಎಂದೂ ಹೇಳಿದ್ದಾರೆ.
ಅಮೆರಿಕ- ಭಾರತದ ದ್ವಿಪಕ್ಷೀಯ ಸಂಬಂಧ ಕಳೆದ ಮೂರು ವರ್ಷಗಳಿಂದ ಅತ್ಯಂತ ಗಾಢವಾಗಿ ಬೆಳೆಯುತ್ತಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಅಮೆರಿಕಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತರಾದರು. ಅಂತೆಯೇ ಡೊನಾಲ್ಡ್ ಟ್ರಂಪ್ ಆಡಳಿತ ಸಹ ಈಗ ಭಾರತದೊಂದಿಗೆ ಶೀಘ್ರವೇ ಸಂಪರ್ಕ ಸಾಧಿಸಬೇಕಾದ ಅಗತ್ಯವಿದೆ ಎಂದು ತಜ್ಞರ ತಂಡ ನಿಯೋಜಿತ ಅಧ್ಯಕ್ಷರಿಗೆ ಸಲಹೆ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com