ಸಿಪಿಇಸಿ ಕಾಮಗಾರಿಯ ಚೀನಾ ಕಾರ್ಮಿಕರ ಕಾವಲಿಗೆ ಪಾಕ್ ನಿಂದ 4 ಸಾವಿರ ಭದ್ರತಾ ಪಡೆ ನಿಯೋಜನೆ!

ಸಿಂಧ್ ಪ್ರದೇಶದಲ್ಲಿ ಸಿಪಿಇಸಿ ಸೇರಿದಂತೆ ಹಲವು ಯೋಜನೆಗಳ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸಲಿರುವ ಚೀನಾ ನೌಕರ ಕಾವಲಿಗೆ ಪಾಕಿಸ್ತಾನ 4 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದೆ.
ಸಿಪಿಇಸಿ ಕಾಮಗಾರಿಯ ಚೀನಾ ಕಾರ್ಮಿಕರ ಕಾವಲಿಗೆ ಪಾಕ್ ನಿಂದ 4 ಸಾವಿರ ಭದ್ರತಾ ಪಡೆ ನಿಯೋಜನೆ!
ಸಿಪಿಇಸಿ ಕಾಮಗಾರಿಯ ಚೀನಾ ಕಾರ್ಮಿಕರ ಕಾವಲಿಗೆ ಪಾಕ್ ನಿಂದ 4 ಸಾವಿರ ಭದ್ರತಾ ಪಡೆ ನಿಯೋಜನೆ!
Updated on: 
ಕರಾಚಿ: ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ (ಸಿಪಿಇಸಿ) ಸೇರಿದಂತೆ ಹಲವು ಯೋಜನೆಗಳ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ನೌಕರ/ ಕಾರ್ಮಿಕರ ಕಾವಲಿಗೆ ಪಾಕಿಸ್ತಾನ 4,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದೆ. 
ಪೊಲೀಸ್ ಭದ್ರತೆಯನ್ನು ನಿಯೋಜಿಸಿರುವುದರ ಬಗ್ಗೆ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಸಯೀದ್ ಮುರಾದ್ ಅಲಿ ಮಾಹಿತಿ ನೀಡಿದ್ದು, ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದವರ ಭದ್ರತೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ನಮ್ಮ ಚೀನಾ ಸ್ನೇಹಿತರು ಸಿಪಿಇಸಿ ಸೇರಿದಂತೆ ಹಲವು ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದ್ದರಿಂದ ಭದ್ರತೆ ನೀಡಲಾಗಿದೆ ಎಂದು ಸಯೀದ್ ಮುರಾದ್ ಹೇಳಿದ್ದಾರೆ. 
ಭದ್ರತೆಗಾಗಿ ನಿವೃತ್ತ ಯೋಧರನ್ನೂ ಸಹ ನೇಮಿಸಲಾಗಿದ್ದು 4 ಸಾವಿರ ಭದ್ರತಾ ಪಡೆಗಳ ಪೈಕಿ 2,000 ಸಿಬ್ಬಂದಿಗಳು ನಿವೃತ್ತ ಯೋಧರಾಗಿದ್ದಾರೆ ಎಂದು ಸಯೀದ್ ಮುರಾದ್ ಹೇಳಿರುವುದನ್ನು ಡಾನ್ ಪತ್ರಿಕೆ ವರದಿ ಮಾಡಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಪಾಕಿಸ್ತಾನದ ಸಿಂಧ್ ನಲ್ಲಿ ಸಿಪಿಇಸಿಗೆ ಸಂಬಂಧಿಸಿದ ಚೀನಾ ಮೂಲದ 100 ಕಂಪನಿಗಳು ಕಾರ್ಯಾರಂಭ ಮಾಡಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com