ವಿದೇಶ

ಹಿಂದೂ ವಿವಾಹ ಮಸೂದೆಗೆ ಪಾಕಿಸ್ತಾನ ಸಂಸದೀಯ ಸಮಿತಿ ಅನುಮೋದನೆ

ಪಾಕಿಸ್ತಾನದಲ್ಲಿರುವ ಅಲ್ಪ ಸಂಖ್ಯಾತ ಹಿಂದೂ ಸಮುದಾಯದ ದಶಕಗಳ ಕನಸು ನನಸಾಗಿದ್ದು, ಅಂತಿಮವಾಗಿ ಪಾಕಿಸ್ತಾನ ಸಂಸತ್ತು ಹಿಂದೂ ವಿವಾಹ ಮಸೂದೆ-2015ಕ್ಕೆ ಅನುಮೋದನೆ ನೀಡಿದೆ...

ಹಿಂದೂ ವಿವಾಹ ಮಸೂದೆಗೆ ಪಾಕಿಸ್ತಾನ ಸಂಸದೀಯ ಸಮಿತಿ ಅನುಮೋದನೆ
ಪಾಕಿಸ್ತಾನ ಸಂಸತ್ತು ಮತ್ತು ಅಲ್ಪ ಸಂಖ್ಯಾತ ಹಿಂದೂಗಳು (ಸಂಗ್ರಹ ಚಿತ್ರ)
Published On :

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಅಲ್ಪ ಸಂಖ್ಯಾತ ಹಿಂದೂ ಸಮುದಾಯದ ದಶಕಗಳ ಕನಸು ನನಸಾಗಿದ್ದು, ಅಂತಿಮವಾಗಿ ಪಾಕಿಸ್ತಾನ ಸಂಸತ್ತು ಹಿಂದೂ ವಿವಾಹ ಮಸೂದೆ-2015ಕ್ಕೆ  ಅನುಮೋದನೆ ನೀಡಿದೆ.

ಈ ಹಿಂದೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್‌ ಹಾಗೂ ಬಹಾಯಿ ಸಮುದಾಯದವರು ತಮ್ಮ ವಿವಾಹವನ್ನು ನೋಂದಣಿ ಮಾಡಿಸಲು ಯಾವುದೇ ವ್ಯವಸ್ಥೆಯಿರಲಿಲ್ಲ.  ಹೀಗಾಗಿ ತಮ್ಮ ವಿವಾಹಕ್ಕೂ ಕಾನೂನು ಮಾನ್ಯತೆ ನೀಡಬೇಕು ಎಂದು ಪಾಕಿಸ್ತಾನದಲ್ಲಿರುವ ಅಲ್ಪ ಸಂಖ್ಯಾತ ಹಿಂದೂಗಳು ದಶಕಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರು. ಪಾಕಿಸ್ತಾನದಲ್ಲಿರುವ  ಹಿಂದೂಗಳು ವಿದೇಶ ಪ್ರಯಾಣದ ಸಂದರ್ಭದಲ್ಲಿ ವಿವಾಹ ಪ್ರಮಾಣ ಪತ್ರವಿಲ್ಲದೇ ತೀವ್ರ ತೊಂದರೆ ಅನುಭವಿಸಬೇಕಾಗುತ್ತಿತ್ತು. ಇದೀಗ ಈ ಎಲ್ಲ ತೊಂದರೆಗಳಿಗೂ ಪಾಕಿಸ್ತಾನ ಸಂಸದೀಯ  ಸಮಿತಿ ಅಂತ್ಯ ಹಾಡಿದ್ದು, ಹಿಂದೂ ವಿವಾಹ ಮಸೂದೆ-2015ಕ್ಕೆ ಅನುಮೋದನೆ ನೀಡಿದೆ.

ಪಾಕಿಸ್ತಾನದ ಸುದ್ದಿ ಸಂಸ್ಥೆ ಡಾನ್ ವರದಿ ಮಾಡಿರುವಂತೆ ಹಿಂದೂ ಸಮುದಾಯದ ಐದು ಮಂದಿ ಸಂಸತ್ ಸದಸ್ಯರು ಹಿಂದೂ ವಿವಾಹ ಮಸೂದೆಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದು,  ಪಾಕಿಸ್ತಾನ ಮುಸ್ಲಿಂ ಲೀಗ್ ನ ಚೌದರಿ ಮೆಹಮೂದ್ ಬಷೀರ್ ವೀರ್ಕ್ ಅವರು ಅಧ್ಯಕ್ಷರಾಗಿದ್ಧ ಸ್ಥಾಯಿ ಸಮಿತಿ ಹಿಂದೂ ವಿವಾಹ ಮಸೂದೆ-2015ಕ್ಕೆ ಅನುಮೋದನೆ ನೀಡಿದೆ ಎಂದು  ತಿಳಿದುಬಂದಿದೆ.  ಹಲವು ಷರತ್ತುಗಳು ಮತ್ತು ಕಾನೂನುಗಳೊಂದಿಗೆ ಹಿಂದೂ ವಿವಾಹ ಮಸೂದೆಗೆ ಪಾಕಿಸ್ತಾನ ಸಂಸದೀಯ ಸಮಿತಿ ಅನುಮೋದನೆ ನೀಡಿದೆ.

ಕ್ಲಾಸ್ 12 ಉಪವಿಭಾಗ (2)(ಸಿ) ಪ್ರಕಾರ ದಂಪತಿಗಳಲ್ಲಿ ಯಾರಾದರೂ ಕ್ರಿಮಿನಲ್ ಹಿನ್ನಲೆಯಿಂದ 4 ವರ್ಷಗಳ ಕಾಲ ಜೈಲಿಗೆ ಹೋಗಿದ್ದರೆ ಮತ್ತೊಬ್ಬರು ವಿವಾಹ ವಿಚ್ಛೇದನಕ್ಕೆ ಅರ್ಜಿ  ಸಲ್ಲಿಸಬಹುದು. ಈ ಹಿಂದೆ ಈ ಅವಧಿ ಮೂರು ವರ್ಷಕ್ಕೆ ಸೀಮಿತವಾಗಿತ್ತು. ಇನ್ನು ಮದುವೆ ರದ್ಧತಿ ಕುರಿತಾಗಿದ್ದ ಕ್ಲಾಸ್ 12(2ಡಿ) ಕಾನೂನನ್ನು ತೆಗೆದುಹಾಕಲು ಸ್ಥಾಯಿ ಸಮಿತಿ ಸಮ್ಮತಿ ಸೂಚಿಸಿದೆ  ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.