

ವಾಷಿಂಗ್ ಟನ್: 26/11 ಮುಂಬೈ ದಾಳಿಯ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಭಾರತಕ್ಕೆ ಅಗತ್ಯ ಸಹಾಯ ಮಾಡಲು ಸಿದ್ಧವಿರುವುದಾಗಿ ಅಮೆರಿಕ ಹೇಳಿದೆ.
ಪಾಕಿಸ್ತಾನಿ ಅಮೇರಿಕನ್ ಉಗ್ರ ಡೇವಿಡ್ ಹೆಡ್ಲಿ ತಪ್ಪೊಪ್ಪಿಕೊಂಡಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಮೆರಿಕ ಕಾರ್ಯದರ್ಶಿ ಜಾನ್ ಕಿರ್ಬಿ, ಮುಂಬೈ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಲು ಭಾರತಕ್ಕೆ ಅಗತ್ಯ ಸಹಾಯ ನೀಡುವುದಕ್ಕೆ ಅಮೆರಿಕ ಬದ್ಧವಾಗಿದೆ ಎಂದು ಹೇಳಿದ್ದಾರೆ.
ದಾಳಿ ನಡೆಸಿದವರನ್ನು ಶಿಕ್ಷೆಗೊಳಪಡಿಸುವುದು ನಮ್ಮ ಬದ್ಧತೆಯನ್ನು ಹಾಗೂ ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಸೂಚಿಸುತ್ತದೆ ಎಂದು ಬಿರ್ಬೆ ಹೇಳಿದ್ದಾರೆ.